ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಐತಿಹಾಸಿಕ ಗೆಲವು
ಲಂಡನ್: ಅಂತಾರಾಷ್ಟ್ರೀಯ ಸಾಗರಿಕ ಸಂಘಟನೆಗೆ ನಡೆದ ಚುನಾವಣೆಯಲ್ಲಿ ಭಾರತ ದಾಖಲೆಯ 144 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಭಾರತದ ತಾಕತ್ತನ್ನು ಪ್ರದರ್ಶಿಸಿದೆ. ಅಂತಾರಾಷ್ಟ್ರೀಯ ಸಾಗರಿಕ ಸಂಘಟನೆ ಸಾಗರ ಉದ್ಯಮದ ಕುರಿತು ನಿರ್ಧಾರಗಳನ್ನು ಕೈಗೊಳ್ಳುತ್ತದೆ ಮತ್ತು ನಿರ್ವಹಣೆ ಮಾಡುತ್ತದೆ.
ಹಿರಿಯ ಅಧಿಕಾರಿಗಳು ತಿಳಿಸಿರುವ ಮಾಹಿತಿ ಪ್ರಕಾರ ‘ಭಾರತ ಚುನಾವಣೆಯಲ್ಲಿ ಎರಡನೇ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಐತಿಹಾಸಿಕ ಗೆಲವು ಸಾಧಿಸಿದೆ. ಜರ್ಮನಿಯ ಅತಿ ಹೆಚ್ಚು ಮತ ಪಡೆಯುವ ಮೂಲಕ ಮೊದಲನೇ ಸ್ಥಾನದಲ್ಲಿದ್ದರೇ ಭಾರತ ಎರಡನೇ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.
ಐಎಮ್ಓದ ಕ್ಯಾಟಗರಿ-ಬಿಗೆ ನಡೆದ ಮರು ಚುನಾವಣೆಯಲ್ಲಿ ಭಾರತವು ಸ್ಪರ್ಧಿಸಿತ್ತು. ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಭಾರತ ಪ್ರತಿನಿಧಿಯಾಗಿ ಸಾಗರಿಕ ಸಂಘಟನೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದರು. ಭಾರತ ಮೊದಲ ಭಾರಿಗೆ ದಾಖಲೆಯ ಮತಗಳನ್ನು ಪಡೆಯುವ ಮೂಲಕ ಐತಿಹಾಸಿಕ ಗೆಲವು ಸಾಧಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಅಂತಾರಾಷ್ಟ್ರೀಯ ಸಾಗರಿಕ ಸಂಘಟನೆ(ಐಎಂಓ) 1982 ರಲ್ಲಿ ಸ್ಥಾಪಿಸಲಾಯಿತು. ಬೇರೆ ಬೇರೆ ದೇಶಗಳ ಸರ್ಕಾರಗಳ ಮಧ್ಯೆ ಸಮುದ್ರಯಾನ, ಸಮುದ್ರ ಉದ್ಯಮ, ಹಡಗು ಸಾಗಣೆ ಸೇರಿ ನಾನಾ ವಿಷಯಗಳ ಕುರಿತು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ.
Leave A Reply