ಧರ್ಮದ ಹೆಸರಲ್ಲಿ ದೇಶ ಒಡೆಯಬಾರದು: ಒಬಾಮಾ

ದೆಹಲಿ: ಧರ್ಮದ ಹೆಸರಲ್ಲಿ ಯಾವುದೇ ಕಾರಣಕ್ಕೂ ದೇಶ ವಿಘಟನೆ ಹೊಂದಬಾರದು. ಮುಸ್ಲಿಮರು ನಾವು ಭಾರತೀಯರು ಎಂಬುದರ ಬಗ್ಗೆ ಪ್ರಶ್ನೆಯನ್ನೇ ಹೊಂದಿರಬಾರದು. ಅದು ಸಮುದಾಯಕ್ಕೆ ಮತ್ತು ದೇಶಕ್ಕೆ ಅಪಾಯಕಾರಿಯಾಗಿ ಮಾರ್ಪಡುತ್ತದೆ ಎಂದು ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಹೇಳಿರುವ ಮಾತುಗಳಿವು.
ಭಾರತದೊಂದಿಗೆ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಬರಾಕ್ ಓಬಾಮ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ‘ಪಂಥೀಯ ವಾದವನ್ನು ಮುಂದಿಟ್ಟುಕೊಂಡು ದೇಶವನ್ನು ಒಡೆಯುವುದು ಆಘಾತಕಾರಿ ನಡೆ. ಜನರು ಮತೀಯ ಭಾವವನ್ನು ಮರೆತು ಜೀವನ ನಡೆಸಿದಾಗ ಎಂತಹ ಬದಲಾವಣೆಗಳಾಗುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು. ಇರುವುದು ಗಂಡು ಹೆಣ್ಣು ಎಂಬ ಎರಡೇ ಜಾತಿ ಎಂದು ಹೇಳಿದ್ದಾರೆ.
ಭಾರತದ ಮುಸ್ಲಿಮರು ಇತರ ದೇಶಗಳ ಮುಸ್ಲಿಮರಂತೆ ಅಲ್ಲ. ಭಾರತದಲ್ಲಿ ಎಲ್ಲರೂ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಮುಸ್ಲಿಮರು ಭಾರತೀಯ ನಾಗರೀಕರು ಎಂದು ಹೆಮ್ಮೆ ಪಡುತ್ತಾರೆ. ಆದರೆ ಕೆಲ ಬೇರೆ ದೇಶಗಳಲ್ಲಿ ಪರಿಸ್ಥಿತಿ ಬಹಳ ವಿಭಿನ್ನವಾಗಿದೆ. ಸೌಹಾರ್ದದ ಜೀವನ ನಡೆಸುವುದನ್ನೇ ಎಲ್ಲ ದೇಶಗಳು ಮತ್ತು ಎಲ್ಲ ಧರ್ಮಗಳು ಪಾಲಿಸಬೇಕು ಎಂದು ಹೇಳಿದರು.