ಪಾಪಿ ಪಾಕಿಸ್ತಾನದ ಸರ್ಕಾರಿ ಪೋಷಿತ ಭಯೋತ್ಪಾದನೆಯ ಕರಾಳ ಮುಖ ಎಳೆಎಳೆಯಾಗಿ ಬಿಚ್ಚಿಟ್ಟ ಉಗ್ರ
ದೆಹಲಿ: ಪಾಕಿಸ್ತಾನ ಸರ್ಕಾರದ ಭಯೋತ್ಪಾದನೆ ಕುರಿತು ನಿಲುವು ಮತ್ತೊಮ್ಮೆ ಸಾಬೀತಾಗಿದೆ. ಪೊಲೀಸರು ಬಂಧಿಸಿರುವ ಜಮಾತ್ ಉದ್ ದವಾ ಉಗ್ರ ಸಂಘಟನೆಯ ಭಯೋತ್ಪಾದಕ ಮಹಮ್ಮದ ಅಮಿರ್ ಅಲಿಯಾಸ್ ಅಬು ಹಮಾಸ್ ತನಿಖೆ ವೇಳೆ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಭಯೋತ್ಪಾದಕರಿಗೆ ಪೋಷಣೆ ನೀಡುತ್ತಿದೆ ಎಂದು ಹೇಳಿದ್ದಾನೆ.
ಇತ್ತೀಚೆಗೆ ಕಾಶ್ಮೀರದ ಗಡಿಯಲ್ಲಿ ಅಕ್ರಮವಾಗಿ ನುಸುಳಿ ದುಷ್ಕೃತ್ಯಗಳನ್ನು ನಡೆಸಲು ಸಂಚು ಹೂಡಿದ್ದ ಮಹಮ್ಮದ್ ಅಮಿರ್ ನನ್ನು ಭಾರತೀಯ ಸೈನಿಕರು ಬಂಧಿಸಿ, ಎನ್ಐಎ ವಶಕ್ಕೆ ನೀಡಿದ್ದರು. ತನಿಖೆ ವೇಳೆ ಪಾಕಿಸ್ತಾನದ ಗುಪ್ತಚರ ಇಲಾಖೆ ಭಯೋತ್ಪಾದಕರಿಗೆ ಹೇಗೆ ಸಹಕಾರ ನೀಡುತ್ತಿದೆ ಎಂಬುದರ ಕುರಿತು ಎಳೆ ಎಳೆಯಾಗಿ ಮಾಹಿತಿ ನೀಡಿದ್ದಾನೆ.
‘ನಿರುದ್ಯೋಗಿಗಳು ಭಯೋತ್ಪಾದಕರಾಗುತ್ತಿದ್ದಾರೆ. ಭಯೋತ್ಪಾದನೆ ತರಬೇತಿ ಶಿಬಿರದಿಂದ ಹೊರಬರುವವರನ್ನು ಸೈನಿಕರಂತೆ ಬರುತ್ತಾರೆ. ಅವರು ಐಎಸ್ಐ ಎಜೆಂಟ್ ಗಳಾಗಿ ಭಯೋತ್ಪಾದನೆಗಾಗಿ ಸಂಚು ಮಾಡುತ್ತಾರೆ. ಅಲ್ಲದೇ ಐಎಸ್ಐ ಹೆಸರಲ್ಲಿ ಯುವಕರನ್ನು ಭಯೋತ್ಪಾದನೆ ಶಿಬಿರಗಳಿಗೆ ಸಾಗಿಸುವ ಕಾರ್ಯ ಮಾಡುತ್ತಾರೆ. ವಿಶೇಷವಾಗಿ ಕಾಶ್ಮೀರದ ಅಜಾದಿ ಹೆಸರಿ ದೃಶ್ಯಗಳನ್ನು ತೋರಿಸಿ, ನಮ್ಮ ಬಂದುಗಳು ಸಂಕಷ್ಟದಲ್ಲಿದ್ದಾರೆ ಅವರನ್ನು ರಕ್ಷಿಸಿ ಎಂದು ಪ್ರಚೋಧನೆ ನೀಡುತ್ತಾರೆ ಎಂಬ ಮಾಹಿತಿ ಮಹಮ್ಮದ್ ಅಮಿರ್ ನೀಡಿದ್ದಾನೆ.
ಭಯೋತ್ಪಾದಕ ತರಬೇತಿ ಶಿಬಿರದಿಂದ ಹೊರಬಂದವರಿಗೆ ಜಿಪಿಎಸ್, ವೈರ್ ಲೆಸ್ ಮೊಬೈಲ್ ಮೂಲಕ ಸೂಚನೆ, ಸಂದೇಶಗಳನ್ನು ನೀಡುತ್ತದೆ. ಆ ಮೂಲಕ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ತನಿಖಾಧಿಕಾರಿಗಳ ಎದುರು ಬಾಯಿ ಬಿಟ್ಟಿದ್ದಾನೆ.
ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮತ್ತು ಜಾಕಿ ಉರ್ ರೆಹೆಮಾನ್ ಲಕ್ವಿ ಅವರಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ. ನಾನು 2014ರಲ್ಲಿ ಎಲ್ಇ ಟಿ ಸೇರಿದ್ದೆ. ಹಫೀಜ್ ಸಯೀದ್ ನೇತೃತ್ವದ ಶಿಬಿರದಲ್ಲೇ ತರಬೇತಿ ಪಡೆದಿದ್ದೇನೆ. ಇನ್ನು ಹಲವು ಯುವಕರು ಅಲ್ಲಿ ತರಬೇತಿ ಪಡೆದಿದ್ದಾರೆ ಎಂದು ಕ್ಯಾಮೆರಾದ ಎದುರೇ ಬಾಯಿ ಬಿಟ್ಟಿದ್ದಾನೆ.
ಎಲ್ ಇಟಿ ತರಬೇತಿ ಮುಗಿಸಿ ಹೊರಬಂದು ಸಣ್ಣ ಉದ್ಯಮ ಆರಂಭಿಸಲು ಉದ್ದೇಶಿಸಿದ್ದೆ. ಆದರೆ ಎಲ್ ಇಟಿಯವರು ಮತ್ತೆ ನನ್ನನ್ನು ಅವರ ಮೋಹ ಜಾಲಕ್ಕೆ ಸಿಲುಕಿಸಿದ್ದರು. ನಂತರ ಮುಂದಿನ ಹಂತದ ತರಬೇತಿಯಾದ ಡೈರಾ ಈ ಆಮ್ ಗೆ ಕಳುಹಿಸಿದ್ದರು. ಅಲ್ಲಿ ನಾಲ್ಕು ತಿಂಗಳು ಎಕೆ 47 ಗನ್, ಪಿಸ್ತೋಲ್, ಗ್ರೈನೆಡ್ ಲಾಂಚರ್ ಬಳಕೆ, ಅರಣ್ಯದಲ್ಲಿ ಯುದ್ಧ ಹೇಗೆ ಮಾಡಬೇಕು ಎಂಬುದರ ಕುರಿತು ತರಬೇತಿ ಪಡೆದಿದ್ದೇ ಎಂದು ತರಬೇತಿ ಪಡೆದಿದ್ದೇನೆ ಎಂದು ಬಾಯಿ ಬಿಟ್ಟಿದ್ದಾನೆ.
ಈ ಎಲ್ಲ ಚಟುವಟಿಕೆಗಳಿಗೆ ಪಾಕಿಸ್ತಾನ ಸರ್ಕಾರ ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಸಹಕಾರ ನೀಡುತ್ತಿದೆ. ಪಾಕಿಸ್ತಾನ ಸೈನ್ಯವು ಭಾರತವನ್ನು ಎದುರಿಸಲು ಭಯೋತ್ಪಾದಕರ ಸಹಾಯವನ್ನು ಗಡಿಯಲ್ಲಿ ಪಡೆಯುತ್ತದೆ. ಅದಕ್ಕಾಗಿಯೇ ಭಾರತಕ್ಕೆ ನುಸುಳಲು ಉಗ್ರರಿಗೆ ಅನುಕೂಲಕರ ವಾತಾವರಣ ಇದೆ ಎಂದು ತಿಳಿಸಿದ್ದಾನೆ.
Leave A Reply