ಮುಸ್ಲಿಂ ಹುಡುಗಿ ಹಿಂದೂ ಹುಡುಗನನ್ನು ಪ್ರೀತಿಸಿದ್ದೇ ತಪ್ಪಾಯಿತೇ?
ಪಟನಾ: ಲವ್ ಜಿಹಾದ್ ಹೆಸರಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಮದುವೆಯಾಗಿ, ಬಲವಂತವಾಗಿ ಮತಾಂತರಗೊಳಿಸಿದರೆ ಅದು ಆದರ್ಶ ಪ್ರೇಮ, ಜಾತ್ಯತೀತವಾದ. ಆದರೆ, ಅದೇ ಮುಸ್ಲಿಂ ಹುಡುಗಿ ಹಿಂದೂ ಹುಡುಗನನ್ನು ಪ್ರೀತಿಸಿದರೆ, ಅದು ಘನಘೋರ ಅಪರಾಧ.
ಹೌದು, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ 15 ವರ್ಷದ ಹಿಂದೂ ಬಾಲಕ ಹಾಗೂ 14 ವರ್ಷದ ಮುಸ್ಲಿಂ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ಕಾರಣಕ್ಕಾಗಿ ಇಬ್ಬರನ್ನೂ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನೌತನ್ ಎಂಬ ಗ್ರಾಮದ ಬೇರೆ ಬೇರೆ ಶಾಲೆಯಲ್ಲಿ ಇಬ್ಬರೂ ಓದುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದನ್ನೇ ಗುರಿಯಾಗಿಸಿಕೊಂಡಿರುವ ಬಾಲಕಿ ಕುಟುಂಬಸ್ಥರೇ ಇಬ್ಬರನ್ನೂ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಹುಡುಗಿಯ ಮೂವರು ಸಂಬಂಧಿಕರನ್ನು ಬಂಧಿಸಿದ್ದಾರೆ.
ಇಬ್ಬರೂ ಬಾಲಕ-ಬಾಲಕಿಯ ಶವ ಪ್ರತ್ಯೇಕ ಕಡೆ ಸಿಕ್ಕಿದ್ದು, ಪ್ರೀತಿಸುತ್ತಿದ್ದ ಕಾರಣಕ್ಕಾಗಿಯೇ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಬಾಲಕಿಯ ಸಹೋದರ ಅಲ್ಲಾವುದ್ದೀನ್ ಅನ್ಸಾರಿ, ಚಿಕ್ಕಪ್ಪಂದಿರಾದ ಗುಲ್ಸಾನೋವರ್ ಮಿಯಾನ್ ಹಾಗೂ ಆಮಿರ್ ಮಿಯಾನ್ ಎಂಬುವವರನ್ನು ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮತ್ತಷ್ಟು ಅಂಶ ತಿಳಿಯುತ್ತದೆ ಎಂದು ನೌತಾನ್ ಪೊಲೀಸ್ ಠಾಣೆಯ ಕುಂದಾನ್ ಕುಮಾರ್ ಮಾಹಿತಿ ನೀಡಿದ್ದಾರೆ.
Leave A Reply