ಹಿಂದೂ ಮಹಾ ಸಾಗರದಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತ ಮೆರೆದ ಚಾಣಕ್ಷತನ ಯಾವುದು ಗೊತ್ತಾ?
ದೆಹಲಿ: ಹಿಂದೂ ಮಹಾಸಾಗರದಲ್ಲಿ ಭಾರತ ಚೀನಾಕ್ಕೆ ಸೆಡ್ಡು ಹೊಡೆಯಲು ಹಾಗೂ ಭಾರತೀಯ ನೌಕಾಪಡೆಯ ಸಾಮರ್ಥ್ಯ ಹೆಚ್ಚಿಸಲು ಮಹತ್ವ ನಿರ್ಧಾರ ಕೈಗೊಂಡಿದ್ದು, ಬರೋಬ್ಬರಿ ಆರು ಅಣುಚಾಲಿತ ಜಲಾಂತರ್ಗಾಮಿ ನಿರ್ಮಾಣ ಯೋಜನೆಗೆ ಚಾಲನೆ ನೀಡಿದೆ.
ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಈ ಕುರಿತು ಮಾಹಿತಿ ನೀಡಿದ್ದು, ಜಲಾಂತರ್ಗಾಮಿ ನಿರ್ಮಾಣ ಕಾರ್ಯ ರಹಸ್ಯವಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ. ಆದರೆ ಜಲಾಂತರ್ಗಾಮಿ ಹಡುಗಳ ನಿರ್ಮಾಣಕ್ಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತೀಯ ನೌಕಾಪಡೆ ಹಿಂದೂ ಮಹಾ ಸಾಗರ ಹಾಗೂ ಫೆಸಿಫಿಕ್ ಮಹಾ ಸಾಗರ ವ್ಯಾಪ್ತಿಯಲ್ಲಿ ಚೀನಾವನ್ನು ಎದುರಿಸಲಿದ್ದು, ಭಾರತೀಯ ನೌಕಾಪಡೆ ಅಮೆರಿಕ, ಾಸ್ಟ್ರೇಲಿಯಾ ಹಾಗೂ ಜಪಾನ್ ನೌಕಾಪಡೆಗಳ ಬೆಂಬಲದೊಂದಿಗೆ ಕಾರ್ಯಾಚರಣೆ ನಡೆಸಲಿದೆ ಎಂದು ಲಾಂಬಾ ವಿವರಿಸಿದ್ದಾರೆ.
ಪ್ರಸ್ತುತ ಹಿಂದೂ ಮಹಾ ಸಾಗರದಲ್ಲಿ ಚೀನಾದ 8 ನೌಕೆಗಳು ಕಾರ್ಯನಿರ್ವಹಿಸುತ್ತಿದ್ದು, ನಾವು ಮುಂಜಾಗ್ರತೆ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ಆರು ಸಬ್ ಮೆರಿನ್ ಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
Leave A Reply