ಸರ್ಜಿಕಲ್ ಸ್ಟ್ರೈಕ್ ಅಷ್ಟೇ ಅಲ್ಲ, ಭಾರತದ ಬಳಿ ಇನ್ನೂ ಆಯ್ಕೆಗಳಿವೆ ಎಂದ ಬಿಪಿನ್ ರಾವತ್
ದೆಹಲಿ: ಭಾರತೀಯ ಸೇನಾ ಸಾಮರ್ಥ್ಯದ ಕುರಿತು ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಮತ್ತೆ ಪ್ರಸ್ತಾಪಿಸಿದ್ದು, ಭಾರತ ಸರ್ಜಿಕಲ್ ಸ್ಟ್ರೈಕ್ ಅಂತಹ ಹಲವು ಆಯ್ಕೆ ಹೊಂದಿದೆ ಎಂದು ಹೇಳಿದ್ದಾರೆ.
ಭದ್ರತಾ ವಿಶ್ಲೇಷಕ ನಿತಿನ್ ಗೋಖಲೆ ಬರೆದ “ಸೆಕ್ಯೂರಿಂಗ್ ಇಂಡಿಯಾ ದಿ ಮೋದಿ ವೇ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗೋಖಲೆ ಅವರ ಪ್ರಶ್ನೆಯೊಂದಕ್ಕೆ ಬಿಪಿನ್ ರಾವತ್ ಉತ್ತರಿಸಿದ್ದಾರೆ.
ಭಾರತೀಯ ಸೈನ್ಯವು 2016ರ ಸರ್ಜಿಕಲ್ ಸ್ಟ್ರೈಕ್ ಅಂತಹ ಹಲವು ಕಾರ್ಯಾಚರಣೆ ಕೈಗೊಳ್ಳಲು ಭಾರತ ಸಶಕ್ತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತಕ್ಕೆ ಗಡಿ ರೇಖೆಯಲ್ಲಿ ಕಾರ್ಯಾಚರಣೆ ನಡೆಸಲು ಹಲವು ವಿಧಾನಗಳನ್ನು ಹೊಂದಿದೆ. ಆದರೆ ಎಂದಿಗೂ ಒಂದೇ ರೀತಿಯ ಕಾರ್ಯಾಚರಣೆ ಕೈಗೊಳ್ಳುವುದಿಲ್ಲ ಹಾಗೂ ಅದು ಪುನರಾವರ್ತನೆಯಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.
2015ರಲ್ಲಿ ಮ್ಯಾನ್ಮಾರ್ ವಿರುದ್ಧ ಹಾಗೂ 2016ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಕಾರ್ಯಾಚರಣೆಗಳು ಮಾದರಿಯಾಗಿದ್ದು, ಅಂಥಾದ್ದೇ ಕಾರ್ಯಾಚರಣೆ ಕೈಗೊಳ್ಳಲು ಭಾರತ ಸಶಕ್ತವೇ ಎಂದು ಗೋಖಲೆ ಪ್ರಶ್ನಿಸಿದ್ದರು.
Leave A Reply