ಸ್ಮಶಾನಗಳಲ್ಲಿ ಮುಸ್ಲಿಮರಿಂದ ಮೈಕ್ ಬಳಸುವುದನ್ನು ನಿಷೇಧಿಸಿದ ಪಣಜಿ ಕಾರ್ಪೋರೇಷನ್
ಪಣಜಿ: ಮುಸ್ಲಿಮರ ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಮುಸ್ಲಿಮರ ಸ್ಮಶಾನದಲ್ಲಿ (ಖಬರ್ ಸ್ತಾನ್ )ಮೈಕ್ ಮೂಲಕ ಪ್ರಾರ್ಥನೆ ಸಲ್ಲಿಸುವುದು ಪಣಜಿ ಮಹಾನಗರ ಪಾಲಿಕೆ ನಿಷೇಧಿಸಿ, ಆದೇಶ ಹೊರಡಿಸಿದೆ. ನಗರದಲ್ಲಿ ಅತಿ ದೊಡ್ಡದಾದ ಸ್ಮಶಾನದಲ್ಲಿ ನಿತ್ಯ ಮೈಕ್ ಬಳಸುವುದರಿಂದ ಸುತ್ತಲಿನ ಜನರಿಗೆ ಕಿರಿಕಿರಿಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಅದಕ್ಕಾಗಿ ಪಣಜಿ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ.
ಸ್ಥಳೀಯ ಸೆಂಟ್ ಐನೇಜ್ ನೀಡಿರುವ ದೂರಿನಂತೆ ಕ್ರಮ ಕೈಗೊಂಡಿರುವ ಸಿಸಿಪಿ ನೋಟಿಸ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮುಸ್ಲಿಮರ ಸ್ಮಶಾನದಲ್ಲಿ ಮೈಕ್ ಗಳನ್ನು ಬಳಸಿ ಪ್ರಾರ್ಥನೆ ಸಲ್ಲಿಸುವಂತಿಲ್ಲ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ. ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಸ್ಪೀಕರ್ ಬಳಸಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಅತಿಯಾದ ಶಬ್ಧ ಮಾಲಿನ್ಯವಾಗುತ್ತಿದೆ, ಇದನ್ನು ತಡೆಯಿರಿ ಎಂದು ಸೆಂಟ್ ಐನೇಜ್ ದೂರು ನೀಡಿದ್ದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಸಿಪಿ ಕಮಿಷನರ್ ಅಜೀತ್ ರಾಯ್ ‘ಮುಸ್ಲಿಂ ಮುಖಂಡರು ನಮಗೆ ಕೇವಲ ಮಸೀದಿಯಲ್ಲಿ ಲೌಡ್ ಸ್ಪೀಕರ್ ಗಳನ್ನು ಬಳಸುವುದಾಗಿ ಹೇಳಿದ್ದರು. ಆದರೆ ಸ್ಮಶಾನದಲ್ಲೂ ಲೌಡ್ ಸ್ಪೀಕರ ಬಳಸುತ್ತಿರುವುದು ತಪ್ಪುದ. ಕೆಲವರು ಸಮಾಜಕ್ಕೆ ವಿರುದ್ಧವಾದದ್ದನ್ನು ನಡೆಸುತ್ತಿದ್ದಾರೆ. ಆದ್ದರಿಂದ ಅವರಿಗೆ ನೋಟಿಸ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯ ಈ ನಿಯಮವನ್ನು ಟೀಕಿಸಿರುವ ಜಮಾತ್ ಉಲ್ ಮುಸ್ಲಿಮಿಯಾ ಗೌಸಿಯಾ ಸುನ್ನಿ ಟ್ರಸ್ಟ್. ಕೇವಲ ಮಸೀದಿಯಲ್ಲಿ ಮಾತ್ರ ಲೌಡ್ ಸ್ಪೀಕರ್ ಬಳಸಲಾಗುತ್ತಿದೆ. ಸಿಸಿಪಿ ಕಮಿಷನರ್ ಮಸೀದಿಗೆ ಬಂದು ಪರೀಕ್ಷಿಸಲಿ ಎಂದು ಆಹ್ವಾನ ನೀಡಿದ್ದಲ್ಲದೇ. ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
Leave A Reply