ಅಷ್ಟಕ್ಕೂ ಪ್ರತಾಪ್ ಸಿಂಹ ಅವರೇಕೆ ರವಿ ಡಿ.ಚನ್ನಣ್ಣನವರ್ ಅವರನ್ನು ಟೀಕಿಸಿದ್ದು ಗೊತ್ತಾ?
ರವಿ ಡಿ. ಚನ್ನಣ್ಣನವರ್…
ಈ ಹೆಸರು ಕೇಳುತ್ತಲೇ ಒಂದಷ್ಟು ಸ್ಫೂರ್ತಿಯ ಮಾತುಗಳು ಕೇಳಿ ಬರುತ್ತವೆ. ಖಡಕ್ ಅಧಿಕಾರಿ, ಜನರ ನಡುವಿರುವ ಅಧಿಕಾರಿ ಎಂಬ ಹೆಸರು ಕೇಳಿಬರುತ್ತದೆ. ಅದಕ್ಕೊಂದಿಷ್ಟು ಸತ್ಯ, ನಿಷ್ಠೆ, ಪ್ರಮಾಣಿಕತೆ ಎಂಬ ಪದಗಳ ಜೋಡಣೆಯಾಗುತ್ತದೆ.
ಆದರೆ ಇಂಥ ರವಿ ಡಿ. ಚನ್ನಣ್ಣನವರ್ ಹುಣಸೂರಿನಲ್ಲಿ ನಡೆದ ಹನುಮ ಜಯಂತಿ ಗಲಾಟೆಯಲ್ಲಿ, ಅದರಲ್ಲೂ ಸಂಸದ ಪ್ರತಾಪ್ ಸಿಂಹ ಬಂಧನದ ಪ್ರಕರಣದಲ್ಲಿ ಎಡವಿದರೇ?
ಇಂಥಾದ್ದೊಂದು ಪ್ರಶ್ನೆಯನ್ನು ಸ್ವತಃ ಪ್ರತಾಪ್ ಸಿಂಹರೇ ಹುಟ್ಟು ಹಾಕಿದ್ದಾರೆ. ಹನುಮ ಜಯಂತಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಲಾಠಿ ಚಾರ್ಜ್ ಮಾಡಿದ, ಬಂಧಿಸಿದ ಬಳಿಕ “ಆಳುವವರ ಆಣತಿ ಮೀರುವಹಾಗಿಲ್ಲ ಅಲ್ವಾ ಸಾರ್?! ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಆಳುವ ಪಕ್ಷದ ಆಳುಗಳು ಎನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿರುವ ಅಣ್ಣಾಮಲೈ, ಸರ್ಕಾರವನ್ನು ಎದುರು ಹಾಕಿಕೊಂಡ ಡಿಐಜಿ ರೂಪ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ, ಭಾಷಣ ನಿಲ್ಲಿಸಿ” ಎಂದು ಪರೋಕ್ಷವಾಗಿ ರವಿ ಡಿ.ಚನ್ನಣ್ಣನವರ್ ಅವರನ್ನು ಟೀಕಿಸಿದ್ದಾರೆ.
ಅಷ್ಟಕ್ಕೂ ಹುಣಸೂರಿನಲ್ಲಿ ನಡೆದ ಹನುಮ ಜಯಂತಿಯಲ್ಲಿ ಶಾಂತಿಯುತವಾಗಿ ಪೊಲೀಸರು ಭದ್ರತೆ ಒದಗಿಸಬಹುದಿತ್ತು, ಹನುಮನ ಭಕ್ತರನ್ನು ಮನವೊಲಿಸಿ ಮೆರವಣಿಗೆಗೆ ಅವಕಾಶ ಕೊಡಬಹುದಿತ್ತು. ಅದು ಬಿಟ್ಟು ಏಕಾ ಏಕಿ ಲಾಠಿ ಚಾರ್ಜ್ ಮಾಡಿದ, ಜನರನ್ನು ಬಂಧಿಸಿ ಜಯಂತಿಯನ್ನೇ ನಿಲ್ಲಿಸಿದ, ಪ್ರತಾಪ್ ಸಿಂಹರನ್ನೂ ಬಂಧಿಸಿದ, ಪ್ರತಾಪ್ ಸಿಂಹ ಅವರು ಪ್ರಿವೆಂಟ್ ಆರ್ಡರ್ ತೋರಿಸಿದಾಗ ಬ್ಯಾ ಬ್ಯಾ ಎಂದ ಪೊಲೀಸರ ವರ್ತನೆಯನ್ನು ನೋಡಿದರೆ ಪ್ರತಾಪ್ ಸಿಂಹ ಎತ್ತಿರುವ ಪ್ರಶ್ನೆಗಳಲ್ಲಿ ಉರುಳಿದೆ ಎನಿಸುತ್ತದೆ.
Leave A Reply