ಇಂದು ಭಾರತೀಯ ನೌಕಾ ದಿನ, ಮಿಡಿಯಲಿ ನಮ್ಮ ಮನ…
ಪ್ರತಿ ವರ್ಷ ಭಾರತದಲ್ಲಿ ಡಿ.4ನ್ನು ಭಾರತೀಯ ನೌಕಾ ದಿನ ಎಂದು ಆಚರಿಸಲಾಗುತ್ತದೆ. ದೇಶದ ಮೂರೂ ಕಡೆ ಸಾಗರವನ್ನೇ ಹೊಂದಿರುವ ನಾವು, ನಮಗೆ ಭದ್ರತೆ ಒದಗಿಸುವ ನೌಕಾಪಡೆಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ. ಬರೀ ರಕ್ಷಣೆ ಅಲ್ಲ, ದೇಶದ ಎಲ್ಲೇ ನೆರೆ ಹಾವಳಿಯಾಗಲಿ, ಅಲ್ಲೆಲ್ಲ ಭಾರತೀಯ ನೌಕಾಪಡೆ ಆಗಮಿಸಿ ಅಮೋಘ ಸೇವೆ ಒದಗಿಸಿದೆ. ಜನರಿಗೆ ಭದ್ರತೆ ನೀಡಿದೆ. ವಿದೇಶದಿಂದ ಆಮದಾಗುವ ಸರಕಿನಲ್ಲೂ ನೌಕಾಪಡೆಯ ಪಾತ್ರವಿದೆ. ಅಷ್ಟಕ್ಕೂ ಡಿ.4ನ್ನೇ ಏಕೆ ನೌಕಾದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ಭಾರತಕ್ಕೆ ನೌಕಾಪಡೆ ಹೇಗೆ ಪ್ರಾಮುಖ್ಯತೆ? ನೌಕಾದಿನದ ನೆಪದಲ್ಲಿ ನಮ್ಮ ಮನ ಮಿಡಿಯುವ ಕೆಲ ಅಂಶಗಳು ಇಲ್ಲಿವೆ…
ಡಿ.4ನ್ನು ನೌಕಾದಿನವನ್ನಾಗಿ ಏಕೆ ಆಚರಿಸಲಾಗುತ್ತದೆ?
ಅದು 1971. ಪೂರ್ವ ಪಾಕಿಸ್ತಾನಿಯರನ್ನು ಹೊರಹಾಕಿ ಉದ್ಧಟತನ ಮಾಡಿದ್ದ ಪಾಕಿಸ್ತಾನ ಭಾರತಕ್ಕೆ ತಲೆನೋವಾಗಿತ್ತು. ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಹೊರೆಯಾಗಿದ್ದರು. ಆಗ ಅನಿವಾರ್ಯವಾಗಿ ನಾವು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲೇಬೇಕಾಯಿತು. ಈ ವೇಳೆ 1991ರ ಡಿ.4ರಂದು ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಮಹತ್ತರ ಪಾತ್ರ ನಿರ್ವಹಿಸಿದ ಹಿನ್ನೆಲೆಯಲ್ಲಿ ಡಿ.4ನ್ನ ನೌಕಾದಿನವನ್ನಾಗಿ ಆಚರಿಸಲಾಗುತ್ತಿದೆ. ಇದೇ ಕಾರಣಕ್ಕೆ ಇಂದು ನರೇಂದ್ರ ಮೋದಿ ಅವರು ನೌಕಾಪಡೆಯನ್ನು ಶ್ಲಾಘಿಸಿದ್ದಾರೆ.
ನೌಕಾಪಡೆಯ ಹೆಮ್ಮಯ ಸಂಗತಿಗಳು…
- ಭಾರತೀಯ ನೌಕಾಪಡೆ ಜಗತ್ತಿನ ಮೊದಲ ನೌಕಾಪಡೆ ಎಂಬ ಖ್ಯಾತಿಗೆ ಹೊಂದಿದೆ. ನೌಕೆ ನಿರ್ವಹಣೆಗೆ ಜಗತ್ತಿನಲ್ಲಿ ಒಂದು ಸಾವಿರ ವರ್ಷದ ಇತಿಹಾಸವಿದ್ದರೂ, ಭಾರತದಲ್ಲಿ 7600 ವರ್ಷಗಳ ಹಿಂದೆಯೇ ನೌಕೆಗಳ ನಿರ್ವಹಣೆ ಇತ್ತು ಎಂದು ತಿಳಿದುಬಂದಿದೆ.
- ಭಾರತದಲ್ಲಿ ಮೊದಲ ಬಾರಿಗೆ 1612ರಲ್ಲಿ ಬ್ರಿಟಿಷರು ಜಲಾಂತರ್ಗಾಮಿ ನೌಕೆ ಪರಿಚಯಿಸಿದರು. ಇದೇ ಮುಂದೆ ರಾಯಲ್ ಇಂಡಿಯನ್ ನೇವಿ ಎಂದು ಹೆಸರು ಪಡೆಯಿತು.
- ಎರಡನೇ ಮಹಾ ಯುದ್ಧದಲ್ಲಿ ಭಾರತದ ಅತಿ ಹೆಚ್ಚು ನೌಕೆಗಳು ಪಾಲ್ಗೊಂಡವು ಹೆಗ್ಗಳಿಗೆ ಹೊಂದಿದ ಖ್ಯಾತಿ ನಮ್ಮದಾಗಿದೆ.
- ಜಗತ್ತಿನ ಹತ್ತು ಪ್ರಮುಖ ನೌಕಾಪಡೆಯಲ್ಲಿ ಭಾರತೀಯ ನೌಕಾಪಡೆಯ ಸ್ಥಾನ 5ನೇಯದ್ದು.
- ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ 1950ರಲ್ಲಿ ಭಾರತ ನೌಕಾಪಡೆಯನ್ನು ದೇಶದ ಸೈನ್ಯಕ್ಕೆ ಅಳವಡಿಸಿಕೊಂಡಿತು.
- ಕೊಂಕಣ್ ಮತ್ತು ಗೋವಾ ಬಂದರು ವಹಿವಾಟಿನ ರಕ್ಷಣೆಗೆ ಭದ್ರ ಹಡಗು ನಿರ್ಮಿಸಿದ ಕಾರಣ ಛತ್ರಪತಿ ಶಿವಾಜಿ ರಾಜೆ ಭೋಸಲೆ ಅವರನ್ನು ಭಾರತದ ನೌಕಾಪಡೆ ಪಿತಾಮಹ ಎಂದು ಕರೆಯಲಾಗುತ್ತದೆ.
- ಐಎನ್ಎಸ್ ವಿರಾಟ್ ಭಾರತದ ಮೊದಲ ನೌಕಾ ಕ್ಷಿಪಣಿ ಉಡಾವಣೆ ಮಾಡುವ ಯುದ್ಧವಿಮಾನವಾಗಿದೆ.
- ಇದುವರೆಗೂ ಭಾರತದ ನೌಕೆಗಳು ಜಗತ್ತಿನ ಮೂರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಮಹತ್ತರ ಪಾತ್ರ ನಿರ್ವಹಿಸಿದ ಅಗ್ಗಳಿಕೆ ಹೊಂದಿದೆ.
- ಭಾರತದ ನೌಕಾಪಡೆಯ ಬ್ರಹ್ಮೋಸ್ ಕ್ಷಿಪಣಿ ಅತಿವೇಗದ ಕ್ಷಿಪಣಿ ಎಂಬ ಖ್ಯಾತಿಗೆ ಭಾಜನವಾಗಿದೆ.
- ಕೇರಳದ ಕಣ್ಣೂರಿನಲ್ಲಿರುವ ಎಳಿಮಲಾ ನೌಕಾ ಅಕಾಡೆಮಿ ಏಷ್ಯಾದಲ್ಲೆ ದೊಡ್ಡ ನಾವಲ್ ಅಕಾಡೆಮಿ ಎಂಬ ಕೀರ್ತಿಗೆ ಭಾಜನವಾಗಿದೆ.
- ಭಾರತೀಯ ನೌಕಾಪಡೆಯ ಮ್ಯಾಕ್ರೋಸ್ ಹಾಗೂ ಮರಿನ್ ಕಮಾಂಡೋ ನೌಕೆಗಳು ಸಮುದ್ರದ ಮೊಸಳೆ (ಮಗರ್ ಮಚ್) ಎಂದೇ ಖ್ಯಾತವಾಗಿದ್ದು, ಭಯೋತ್ಪಾದಕರಿಗೆ ಇವುಗಳೆಂದರೆ ನಡುಕ.
- ಜಗತ್ತಿನಲ್ಲೇ ಎರಡು ನಾವಲ್ ಏರೋಬಾಟಿಕ್ ತಂಡಗಳಿದ್ದು, ಅವುಗಳಲ್ಲಿ ಭಾರತವೂ ಒಂದು ಹೆಮ್ಮೆಯ ಸಂಗತಿ.
- ಪ್ರಸ್ತುತ ಭಾರತದ ನೌಕಾಪಡೆಯಲ್ಲಿ 1 ಕ್ಷಿಪಣಿ ಉಡಾವಣೆ ವಿಮಾನ, 8 ಯುದ್ಧ ನೌಕೆ, ಶತ್ರು ಸದೆಬಡಿಯಲು 11 ನೌಕೆ, 1 ಅಣುಚಾಲಿತ ಜಲಾಂತರ್ಗಾಮಿ (ಇಂಥಾ ಆರು ಸಬ್ ಮೆರಿನ್ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ), 67 ಸಾವಿರಕ್ಕೂ ಅಧಿಕ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ.
Leave A Reply