ಅಮಿತ್ ಶಾ ಟೇಬಲ್ ಮೇಲಿದೆ 224 ಕ್ಷೇತ್ರಗಳ ಸಂಭ್ಯಾವ ಅಭ್ಯರ್ಥಿಗಳ ಪಟ್ಟಿ!
ಗುಜರಾತ್ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 18 ಕ್ಕೆ ಮತಎಣಿಕೆ ಮುಗಿಯುತ್ತಿದ್ದಂತೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರು ವಿಮಾನ ಹತ್ತಲಿದ್ದಾರೆ. ಅದರ ನಂತರದ ಹದಿನೈದು ದಿನಗಳು ಬಿಜೆಪಿಯ ಪಾಲಿಗೆ ಮಹತ್ವದ ದಿನಗಳೆಂದೆ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ. ಯಾಕೆಂದರೆ 224 ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ನಿಂತರೆ ಗೆಲುವು ಸಾಧ್ಯ ಎನ್ನುವುದರ ಕುರಿತು ಅಮಿತ್ ಶಾ ಬಹುತೇಕ ಅಂತಿಮ ಮೊಹರು ಒತ್ತಲಿದ್ದಾರೆ.
ಈಗಾಗಲೇ ಅಮಿತ್ ಶಾ ಅವರು ಕಳುಹಿಸಿದ ಒಂದು ಸಾವಿರ ಮಂದಿ ರಾಜ್ಯದ 224 ಕ್ಷೇತ್ರಗಳಲ್ಲಿ ಹಂಚಿ ಹೋಗಿ ಅಲ್ಲಿನ ವಸ್ತುಸ್ಥಿತಿಯ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಮುಗಿಸಿದ್ದಾರೆ. ಆ 224 ಫೈಲುಗಳ ಮೇಲೆ ಅಮಿತಾ ಶಾ ಕಣ್ಣಾಡಿಸಲಿದ್ದಾರೆ. ಅದರೊಂದಿಗೆ ಆಯಾ ಕ್ಷೇತ್ರದ ಸಮೀಕ್ಷೆ ನಡೆಸಿದ ತಂಡದ ಮುಖ್ಯಸ್ಥನೊಂದಿಗೆ ಪ್ರತ್ಯೇಕ ಮೀಟಿಂಗ್ ನಡೆಸಲಿದ್ದಾರೆ. ಅಮಿತ್ ಶಾ ಕಳುಹಿಸಿದ ವ್ಯಕ್ತಿಗಳು ಬೇರೆ ರಾಜ್ಯದವರಾಗಿರುವುದರಿಂದ ಅವರಿಗೆ ಇಲ್ಲಿನ ಟಿಕೆಟ್ ಆಕಾಂಕ್ಷಿಗಳ ವ್ಯಕ್ತಿಗತ ಪರಿಚಯವೂ ಇಲ್ಲ, ಹಂಗೂ ಕೂಡ ಇಲ್ಲ. ಆದ್ದರಿಂದ ಅವರು ವಸ್ತುನಿಷ್ಟ ವರದಿಯನ್ನು ಸಲ್ಲಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.
224 ಕ್ಷೇತ್ರಗಳಲ್ಲಿ ಹೋಗಿ ಅಲ್ಲಿನ ಗ್ರೌಂಡ್ ರಿಯಾಲಿಟಿ ನೋಡಿ ಬಂದಿರುವ ತಂಡಗಳ ಮುಖಂಡರ ಫೈಲಿನಲ್ಲಿ ಯಾವ ಅಭ್ಯರ್ಥಿಯ ಬಗ್ಗೆ ಅಲ್ಲಿನ ಮತದಾರರಿಗೆ ಒಲವಿದೆ ಎನ್ನುವುದರಿಂದ ಹಿಡಿದು ಆ ವ್ಯಕ್ತಿಯ ಜಾತಿ ಎಷ್ಟು ಮುಖ್ಯವಾಗುತ್ತದೆ, ಆ ಅಭ್ಯರ್ಥಿ ಎಷ್ಟರ ಮಟ್ಟಿಗೆ ಅಲ್ಲಿ ಪ್ರಸಿದ್ಧನಾಗಿದ್ದಾನೆ, ಜನರೊಂದಿಗೆ ಒಡನಾಟ ಹೇಗಿದೆ, ಅವನ ಚರಿಷ್ಮಾ ಹೇಗಿದೆ, ಕಳೆದ ಬಾರಿ ಸೋತ ಅಭ್ಯರ್ಥಿಯಾಗಿದ್ದರೆ ನಂತರ ನಾಲ್ಕುವರೆ ವರ್ಷದಲ್ಲಿ ತನ್ನ ಕ್ಷೇತ್ರದ ಮತದಾರರೊಂದಿಗೆ ಆತ ಎಷ್ಟು ಸಂಪರ್ಕ ಇಟ್ಟುಕೊಂಡಿದ್ದ, ಅಭ್ಯರ್ಥಿಗೆ ಏನಾದರೂ ಅಪರಾಧಿಕ ಹಿನ್ನಲೆ ಇದೆಯಾ, ಅಭ್ಯರ್ಥಿಯ ಜಾತಿಯ ಜನ ಎಷ್ಟು ಅಲ್ಲಿದ್ದಾರೆ, ಅವರು ನಿರ್ಣಾಯಕರಾ, ಅಭ್ಯರ್ಥಿಗೆ ಎದುರಾಳಿಯನ್ನು ಸೋಲಿಸುವಷ್ಟು ಸಾಮರ್ತ್ಯ ಇದೆಯಾ ಸಹಿತ ಬೇರೆ ಬೇರೆ ರೀತಿಯ ಅಂಕಿಅಂಶಗಳು ಒಳಗೊಂಡಿವೆ. ಆ ಮಾಹಿತಿಗಳನ್ನು ಸಂಗ್ರಹಿಸಿ ಸಮೀಕ್ಷೆ ಮಾಡುವವರು ಇಲ್ಲಿಂದ ಈಗಾಗಲೇ ತೆರಳಿದ್ದಾರೆ. ಅವರೊಂದಿಗೆ ಒನ್ ಟು ಒನ್ ಮಾತುಕತೆಯನ್ನು ಅಮಿತಾ ಶಾ ಮಾಡಲಿದ್ದಾರೆ. ನೂರೈವತ್ತು ಗ್ಯಾರಂಟಿ ಗೆಲ್ಲುವ ಪಟ್ಟಿಯನ್ನು ಮಾಡುವ ಅಮಿತಾ ಶಾ ನಂತರ ಉಳಿದ ವಿಷಯದ ಕುರಿತಾಗಿ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. 224 ಅಭ್ಯರ್ಥಿಗಳ ಸಮಗ್ರ ಪರಿಚಯ ರಾಜ್ಯ ನಾಯಕರಿಗೆ ಇದೆಯೋ ಇಲ್ವೋ ಗೊತ್ತಿಲ್ಲ, ಆದರೆ ಜನವರಿ 15 ರೊಳಗೆ ಅಮಿತ್ ಶಾ ಅವರು ಮಾತ್ರ ತಾವು ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಸ್ವತ: ಕರೆದು ಅವರೊಂದಿಗೆ ಮಾತನಾಡಲಿದ್ದಾರೆ.
ಆ ಮೀಟಿಂಗ್ ನಲ್ಲಿ ಅಮಿತ್ ಶಾ ಅವರು ಆಯಾ ಅಭ್ಯರ್ಥಿಯ ಗೆಲ್ಲುವ ಕಾನ್ಫಿಡೆನ್ಸ್, ಬಾಡಿ ಲ್ಯಾಂಗ್ವೇಜ್ ಮತ್ತು ಜನರನ್ನು ಸೆಳೆಯಲು ಯಾವ ರೀತಿಯಲ್ಲಿ ಭಾಷಣ ಮಾಡಬಲ್ಲ ಎನ್ನುವ ಕಲೆಗಾರಿಕೆಯನ್ನು ಗಮನಿಸಲಿದ್ದಾರೆ. ಅಲ್ಲಿ ಓಕೆ ಆದರೆ ಮೌಖಿಕವಾಗಿ ತಾವೇ ಅಭ್ಯರ್ಥಿ, ಕೆಲಸ ಶುರು ಮಾಡಿ ಎಂದು ಸೂಚನೆ ಕೊಡಲಿದ್ದಾರೆ. ಅಲ್ಲಿಗೆ ಒಂದು ಸುತ್ತಿನ ರಣತಂತ್ರ ಯಶಸ್ವಿಯಾಗಿ ಮುಗಿಯಲಿದೆ.
ಹಿಂದೆ ಹೇಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿತ್ತೋ ಅದಕ್ಕೆ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಈ ಬಾರಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಮೂಲಕ ಯಾವ ವ್ಯಕ್ತಿಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಡಲಿದ್ದಾರೋ ಅವರೇ ಅಭ್ಯರ್ಥಿಯಾಗಲಿದ್ದಾರೆ. ಅದರ ವಿರುದ್ಧ ಯಾರೂ ಅಪಸ್ವರ ಎತ್ತಲು ಅವಕಾಶ ಉಳಿಯುವುದಿಲ್ಲ
Leave A Reply