ಕಾಂಗ್ರೆಸ್ ನದ್ದೂ ಔರಂಗಜೇಬ್ ನಂತಹ ಸಂಪ್ರದಾಯ: ಮೋದಿ
ಧರ್ಮಪುರ: ಔರಂಗಜೇಬ್ ನಂತೆ ಪಕ್ಷಾಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಗೆ ಶುಭವಾಗಲಿ. ಆದರೆ ನಮಗೆ (ಬಿಜೆಪಿ) 125 ಕೋಟಿ ಜನರೇ ಹೈ ಕಮಾಂಡ್ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ರಾಹುಲ್ ಗಾಂಧಿ ಮತ್ತು ಕುಟುಂಬವನ್ನು ಕಾಲೆಳೆದಿದ್ದಾರೆ.
ಗುಜರಾತ್ ನ ಧರ್ಮಪುರದಲ್ಲಿ ಚುನಾವಣೆ ರ್ಯಾಲಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮುಖಂಡರೇ ಪಕ್ಷವಲ್ಲ ಅದು ಒಂದು ಕುಟುಂಬದ ಆಸ್ತಿ ಎಂದಿದ್ದಾರೆ. ಮಣಿಶಂಕರ ಅಯ್ಯರ್ ಹೇಳಿದಂತೆ ಅವರಿಗೆ ಕುಟುಂಬ ನಿಷ್ಠೆಯೇ ಆಧಾರ ಎನ್ನುತ್ತಾರೆ. “ ಶಾಹಜಾನ್ ನ ಸ್ಥಾನಕ್ಕೆ ಜಾಹಂಗೀರ್ ಅಧಿಕಾರಕ್ಕೆ ಏರಲು ಯಾವುದಾರೂ ಚುನಾವಣೆ ನಡೆದಿದೆಯೇ ಎಂದು ಪ್ರಶ್ನಿಸುವ ಮೂಲಕ ರಾಹುಲ್ ಚುನಾವಣೆ ಪ್ರಕ್ರಿಯೆ ಕಾಟಾಚಾರದ್ದು ಎಂದು ಹೇಳಿದ್ದಾರೆ.
47 ವರ್ಷದ ಗಾಂಧಿ ಕುಟುಂಬದ ಕುಡಿಯೊಂದು ಚುನಾವಣೆ ನೆಪದಲ್ಲಿ ಏಕೈಕ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದೆ. ಇಡೀ ಚುನಾವಣೆ ಪ್ರಕ್ರಿಯೇ ಸ್ಪಷ್ಟಪಡಿಸುತ್ತದೆ 19 ವರ್ಷ ದಿಂದ ಕಾಂಗ್ರೆಸ್ ನ ಚುಕ್ಕಾಣಿ ಹಿಡಿದಿರುವ ಸೋನಿಯಾ ಆಶೀರ್ವಾದ ಬಲದಿಂದಲೇ ಅಧ್ಯಕ್ಷ ಸ್ಥಾನಕ್ಕೆ ಏರುತ್ತಾರೆ ಎಂದರೇ ಅದಕ್ಕಿಂತ ಹೀನ ಸ್ಥಿತಿ ಮತ್ತೊಂದಿಲ್ಲ ಎಂದ ರಾಹುಲ್ ಗಾಂಧಿಗೆ ಲೇವಡಿ ಮಾಡಿದ್ದಾರೆ.
Leave A Reply