ಮುಸ್ಲಿಮರಿಂದ ಮೂವರು ಹಿಂದೂಗಳ ಮೇಲೆ ಹಲ್ಲೆ
ದಿನೇದಿನೆ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕಾರಣ ಮೂವರು ಹಿಂದೂಗಳ ಮೇಲೆ ಹಲ್ಲೆ ಮಾಡಲಾಗಿದೆ.
ರಾಜಸ್ಥಾನದ ಚೋಮು ಎಂಬಲ್ಲಿ ಘಟನೆ ನಡೆದಿದ್ದು, ಸುಮಾರು 40-50 ಮುಸ್ಲಿಮರು ಮೂವರು ಹಿಂದೂಗಳ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.
ಜಾಟ್ ಮೊಹಲ್ಲಾ ಕಾಲೋನಿಯ ಮಹಿಳೆಯೊಬ್ಬರಿಗೆ ಪಠಾಣ್ ಮೊಹಲ್ಲಾದ ಮುಸ್ಲಿಂ ಕಿಡಿಗೇಡಿಗಳು ಕಿರುಕುಳ ನೀಡಿದ್ದಾರೆ. ಇದನ್ನು ಖಂಡಿಸಿ ಮೂವರು ಹಿಂದೂಗಳು ಮುಸ್ಲಿಮರ ಜತೆ ವಾಗ್ವಾದ ನಡೆಸಿದ್ದಾರೆ.
ಆದರೆ ಇಷ್ಟಕ್ಕೇ ಸುಮ್ಮನಾಗದ ಮುಸ್ಲಿಮರು 40-50 ಜನರನ್ನು ಕರೆದುಕೊಂಡು ಬಂದು ರಾಹುಲ್, ಕೈಲಾಶ್, ಮುಖೇಶ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಪ್ರಸ್ತುತ ಜಾಟ್ ಮೊಹಲ್ಲಾದ ವತಿಯಿಂದ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ.
Leave A Reply