ಉಗ್ರರ ಹೊಡೆದುರುಳಿಸಿ ಇಲ್ಲವೇ ನಾವೇ ನಿರ್ನಾಮ ಮಾಡುತ್ತೇವೆ ಪಾಕ್ ಗೆ ಅಮೆರಿಕಾ ಎಚ್ಚರಿಕೆ
ದೆಹಲಿ: ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ಹೊಡೆದುರುಳಿಸದಿದ್ದರೇ, ನಾವು ಇಡೀ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರನ್ನು ನಿರ್ನಾಮ ಮಾಡುತ್ತೇವೆ ಎಂದು ಅಮೆರಿಕ ಗುಪ್ತಚರ ಇಲಾಖೆ ಸಿಐಎ ಮುಖ್ಯಸ್ಥ ಮೈಕ್ ಪಾಂಪೊ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮೈಕ್ ಪಾಂಪೋ, ನಾವು ಅಪಘಾನಿಸ್ತಾನಲ್ಲಿ ಭಯೋತ್ಪಾದಕರಿಗೆ ಸ್ವರ್ಗವನ್ನು ತೋರಿಸಿರುವ ರೀತಿಯೇ ಪಾಕಿಸ್ತಾನದಲ್ಲೂ ಕಾರ್ಯಾಚರಣೆ ನಡೆಸಬೇಕಾಗುತ್ತದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರರ ಸ್ವರ್ಗಗಳನ್ನು ನಾಶಮಾಡಲು ನಿರ್ಧರಿಸಿದ್ದಾರೆ. ಪಾಕ್‌ಗೆ ಭೇಟಿ ನೀಡುತ್ತಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟ್ಟಿಸ್ ಪಾಕ್ ಸರಕಾರಕ್ಕೆ ಉಗ್ರರ ಸ್ವರ್ಗ ನಿರ್ನಾಮಕ್ಕೆ ಬೇಕಾದ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಿದ್ದಾರೆ. ಒಂದು ಕ್ರಮ ಕೈಗೊಳ್ಳದಿದ್ದರೇ ಅಮೆರಿಕ ಉಗ್ರರ ಸ್ವರ್ಗವನ್ನು ನರಕ ಮಾಡುತ್ತದೆ ಎಂದು ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ಮೈಕ್ ನೀಡಿದ್ದಾರೆ. ಬುಧವಾರದಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟ್ಟಿಸ್, ಪಾಕ್‌ಗೆ ಭೇಟಿ ನೀಡಲಿದ್ದು, ಮೈಕ್ ಪೊಂಪೆ ಈ ಹೇಳಿಕೆ ತೀವ್ರ ಮಹತ್ವ ಪಡೆದುಕೊಂಡಿದೆ.
Leave A Reply