ಈ ಮೂವರು ಮುಸ್ಲಿಮರೂ ರಾಮನ ಭಕ್ತರು. ಅಯೋಧ್ಯೆಯ ರಾಮನಿಗೆ ಇವರು ನೀಡುತ್ತಿರುವ ಸೇವೆ ಎಂಥಾದ್ದು ಗೊತ್ತಾ?
ಲಖನೌ: ಅಯೋಧ್ಯೆ ಎಂದ ಕೂಡಲೇ ವಿವಾದದ ಸುಳಿಗಾಳಿ ಬೀಸುತ್ತದೆ. ಅದು ರಾಮಜನ್ಮಭೂಮಿ ಎಂದು ಹಿಂದೂಗಳೆಂದರೆ, ಅದು ಬಾಬರ್ ನ ಮಸೀದಿ ಎನ್ನುತ್ತಾರೆ ಮುಸ್ಲಿಮರು. ಅದಕ್ಕಾಗಿ ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ಸಹ ಆರಂಭಿಸಿದೆ.
ಆದರೆ, ಇಂಥ ರಾಮಜನ್ಮಭೂಮಿ ವಿವಾದಿತ ಪ್ರದೇಶದಲ್ಲಿ, ಮುಸ್ಲಿಮರೆಂದರೆ ಮುಸ್ಲಿಮರೇ ರಾಮನ ಸೇವೆಗಾಗಿ ನಿಂತ ಕತೆ ಎಷ್ಟು ಜನರಿಗೆ ಗೊತ್ತು? ಅಷ್ಟಕ್ಕೂ ಅವರು ಹೇಗೆ ಸೇವೆ ನೀಡುತ್ತಿದ್ದಾರೆ ಗೊತ್ತಾ?
ರಾಮಜನ್ಮಭೂಮಿ ದೇವಾಲಯಕ್ಕೆ ದಿನಕ್ಕೆ 250 ರೂಪಾಯಿ ಖರ್ಚು!
ಹೌದು, ಆ ಮುಸ್ಲಿಂ ವ್ಯಕ್ತಿಯ ಹೆಸರು ಅಬ್ದುಲ್ ವಾಹಿದ್. ಇವರು ಪ್ರತಿದಿನ ರಾಮಜನ್ಮಭೂಮಿ ದೇವಾಲಯದ ಭದ್ರತೆಗೆ ಪ್ರತಿದಿನ 250 ರೂಪಾಯಿ ಖರ್ಚು ಮಾಡುತ್ತಾರೆ. 2005ರಲ್ಲಿ ದೇವಾಲಯದ ಬಳಿ ಜೀಪಿನಲ್ಲಿ ಬಂದ ಐವರು ಎಲ್ಇಟಿ ಉಗ್ರರು ದಾಳಿ ಮಾಡಿದ ನಂತರ, ಇವರು ರಾಮನ ದೇವಾಲಯ ರಿಪೇರಿ, ಭದ್ರತೆಗೆಂದು ಪ್ರತಿ ದಿನ 250 ರೂಪಾಯಿ ವ್ಯಯಿಸುತ್ತಾರೆ. ಇವರು 1994ರಿಂದ ಇಲ್ಲಿ ವಿದ್ಯುತ್ ರಿಪೇರಿ ಮಾಡುವವರಾಗಿ ಕೆಲಸ ಮಾಡುತ್ತಿದ್ದಾರೆ. ನಾನೊಬ್ಬ ಭಾರತೀಯ ಹಾಗೂ ಹಿಂದೂಗಳೆಲ್ಲ ನನ್ನ ಸಹೋದರರು ಎನ್ನುವ ಇವರಿಗೊಂದು ಸಲಾಂ ಹೇಳಿದರೂ ತಪ್ಪಿಲ್ಲ.
ರಾಮನಿಗೆ ಬಟ್ಟೆ ಹೊಲೆದು ಕೊಡುವವರ ಹೆಸರು ಸಾದಿಕ್ ಅಲಿ!
ಅವರ ಹೆಸರು ಸಾದಿಕ್ ಅಲಿ. ಇವರು ರಾಮ್ ಲಲ್ಲಾ ಸಂಸ್ಥೆಯ ಮನವಿಯ ಮೇರೆಗೆ ರಾಮನ ಮೂರ್ತಿಗೆ ಇವರು ಹಲವು ತಿಂಗಳಿಗೊಮ್ಮೆ ಬಟ್ಟೆ ಹೊಲೆದು ಕೊಡುತ್ತಿದ್ದಾರೆ. ಕಳೆದ 50 ವರ್ಷಗಳಿಂದ ನನ್ನ ಕುಟುಂಬ, ಮಗ ಹಿಂದೂ ಸಂತರು, ಧಾರ್ಮಿಕ ಮುಖಂಡರಿಗೆ ಬಟ್ಟೆ ಹೊಲೆಯುತ್ತಿದ್ದೇವೆ. ದೇವರು ಎಲ್ಲರಿಗೂ ಒಬ್ಬನೇ ಎನ್ನುವ ಅಲಿ ಅವರ ಸೇವೆ ಹಾಗೂ ನಂಬಿಕೆ ಶ್ಲಾಘನೀಯ.
ಮೆಹಬೂಬ್, ರಾಮಜನ್ಮಭೂಮಿ ಹಾಗೂ ನೀರಿನ ಮೋಟಾರ್!
ಸಾದಿಕ್ ಅಲಿ ಅವರ ಗೆಳೆಯ ಮೆಹಬೂಬ್ ಅವರು 1995ರಿಂದ ರಾಮಜನ್ಮಭೂಮಿ ದೇವಾಲಯದ ಸೀತಾ ಕುಂದ್ ಸಮುದಾಯದಕ್ಕೆ ಅಡುಗೆ ಮಾಡುವ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ರಾಮಜನ್ಮಭೂಮಿ ಎನ್ನುತ್ತಲೇ ವಿವಾದಿತ ಪ್ರದೇಶವಾಗಿ ಕಾಣುತ್ತಿರುವ ಮಧ್ಯೆ, ಸದ್ದಿಲ್ಲದೆ ರಾಮನ ಸೇವೆ ಮಾಡುವ ಈ ಮೂವರು ಮುಸ್ಲಿಮರ ಸೇವೆ ಶ್ಲಾಘನೀಯ.
ಮೂಲ: ಟೈಮ್ಸ್ ಆಫ್ ಇಂಡಿಯಾ
Leave A Reply