ಆರೆಸ್ಸೆಸ್ ಮುಖಂಡ ಕೊಲೆ ಕುರಿತ ತನಿಖೆ, ಎನ್ಐಎ ಅಧಿಕಾರಿಗಳ ಮೇಲೆಯೇ ಮುಸ್ಲಿಮರ ದಾಳಿ!
ಲಖನೌ: ಇದುವರೆಗೂ ಕೇರಳದ ಸಿಪಿಎಂ ಕಾರ್ಯಕರ್ತರು ಹಾಗೂ ಪಂಜಾಬಿನಲ್ಲಿ ಮುಸ್ಲಿಮರು ಆರೆಸ್ಸೆಸ್ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದನ್ನು ಕೇಳಿದ್ದೆವು. ಆದರೆ ಒಂದು ಹೆಜ್ಜೆ ಮುಂದೆ ಹೋಗಿರುವ ಮುಸ್ಲಿಂ ಗೂಂಡಾಗಳು ಎನ್ಐಎ ಅಧಿಕಾರಿಗಳ ಮೇಲೆಯೇ ದಾಳಿ ಮಾಡಿದ್ದಾರೆ.
ಹೌದು, ಇತ್ತೀಚೆಗೆ ಪಂಜಾಬಿನಲ್ಲಿ ಹತ್ಯೆಗೀಡಾದ ಆರೆಸ್ಸೆಸ್ ಮುಖಂಡರೊಬ್ಬರನ್ನು ಹತ್ಯೆ ಮಾಡಿದ ಪ್ರಕರಣದ ಕುರಿತು ತನಿಖೆಗೆಂದು ಉತ್ತರ ಪ್ರದೇಶದ ಗಾಝಿಯಾಬಾದ್ ಗೆ ತೆರಳಿದ್ದ ಎನ್ಐಎ ಅಧಿಕಾರಿಗಳ ತಂಡದ ಮೇಲೆ ಮುಸ್ಲಿಂ ಯುವಕರಿಬ್ಬರು ಕಲ್ಲೆಸೆದು ದಾಳಿ ಮಾಡಿದ್ದಾರೆ.
ಕಲ್ಲೆಸೆದ ಇಬ್ಬರು ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಖಾಲಿದ್ ಹಾಗೂ ಯೂಸುಫ್ ಎಂದು ಗುರುತಿಸಲಾಗಿದೆ. ಇವರು ಸಹ ಆರೆಸ್ಸೆಸ್ ಮುಖಂಡನ ಕೊಲೆಗೆ ಹತ್ಯಾರ ಸರಬರಾಜು ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇತ್ತೀಚೆಗೆ ಪಂಜಾಬಿನಲ್ಲಿ ಆರೆಸ್ಸೆಸ್ ಮುಖಂಡರೊಬ್ಬರನ್ನು ಹತ್ಯೆ ಮಾಡಿದ್ದು, ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿದೆ. ಆದರೆ ಮುಸ್ಲಿಂ ಮೂಲಭೂತವಾದಿಗಳು ತನಿಖಾ ತಂಡದ ಅಧಿಕಾರಿಗಳ ಮೇಲೆಯೇ ದಾಳಿಮಾಡಿದ್ದು, ಅವರ ವಿಕೃತ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ.
Leave A Reply