ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಮತ, ಜನಾಶೀರ್ವಾದ ರ್ಯಾಲಿ ರದ್ದು!
ಬೆಂಗಳೂರು: ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಆರೇಳು ತಿಂಗಳು ಬಾಕಿ ಇರುವ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಕ್ಷೇಪ ಹಾಗೂ ಭಿನ್ನಮತದ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆರಂಭಿಸಲು ನಿರ್ಧಿಸಿದ್ದ ಜನಾಶಿರ್ವಾದ ರ್ಯಾಲಿಯನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ಸನ್ನು ಗೆಲ್ಲಿಸಿ, ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಡಿ.13ರಿಂದ ರಾಜ್ಯಾದ್ಯಂತ ಜನಾಶೀರ್ವಾದ ರ್ಯಾಲಿಗೆ ಸಕಲ ವೇಳಾಪಟ್ಟಿ ತಯಾರಿಸಿದ್ದರು. ಆದರೆ ಪರಮೇಶ್ವರ್ ಊದಿದ ಬಂಡಾಯದ ಕಹಳೆಗೆ ಪೆಚ್ಚಾಗಿರುವ ಮುಖ್ಯಮಂತ್ರಿ ಅವರು ರ್ಯಾಲಿಯನ್ನು ಮಾರ್ಚ್ 1ರಿಂದ ಆರಂಭಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಜನಾಶೀರ್ವಾದ ರ್ಯಾಲಿ ಆಯೋಜಿಸಿ ಮುಖ್ಯಮಂತ್ರಿ ಕನಸು ಕಂಡಿದ್ದ ಸಿದ್ದರಾಮಯ್ಯ ಅವರಿಗೆ ಇದರಿಂದ ತಾತ್ಕಾಲಿಕ ಬ್ರೇಕ್ ಹಾಗೂ ಹಿನ್ನಡೆಯಾದಂತಿದೆ. ಅದಾಗಲೇ ಬಿಜೆಪಿ ಪರಿವರ್ತನಾ ರ್ಯಾಲಿ ಮೂಲಕ ರಾಜ್ಯಾದ್ಯಂತ ಸಂಚರಿಸುತ್ತಿದೆ.
Leave A Reply