ಬದಲಾಗುತ್ತಿದೆ ಕಾಶ್ಮೀರ, ಆದ್ರೂ ನಿಲ್ಲಲ್ಲ ಉಗ್ರರ ಸಂಹಾರ
ಶ್ರೀನಗರ: ಅಮರನಾಥ ಯಾತ್ರಿಕರ ಮೇಲೆ ಗುಂಡಿನ ದಾಳಿ ಮಾಡಿದ್ದ ಮೂವರು ಎಲ್ಇಟಿ ಉಗ್ರರನ್ನು ಭದ್ರತಾ ಸಿಬ್ಬಂದಿ ಮಂಗಳವಾರವಷ್ಟೇ ಹೊಡೆದುರುಳಿಸಿರುವ ಬೆನ್ನಲ್ಲೇ ಕಾಶ್ಮೀರದಲ್ಲಿ ಉಗ್ರರ ಸಂಹಾರ ನಿಲ್ಲುವುದಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕೈಗೊಂಡ ಕಾರ್ಯಾಚರಣೆಯಿಂದ ಪರಿಸ್ಥಿತಿ ಹಾಗೂ ಜನರ ಜೀವನ ವಿಧಾನ ಬದಲಾಗಿದೆ. ಹಾಗಂತ ಉಗ್ರರ ವಿರುದ್ಧದ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಸೂರತ್ ಗಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಮೊನ್ನೆಯಷ್ಟೇ ಭಾರತೀಯ ಸೇನೆ 2010ರ ಬಳಿಕ ದಾಖಲೆಯ 200 ಉಗ್ರರನ್ನು ಹತ್ಯೆಗೈದ ಸಾಧನೆ ಮಾಡಿದೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ಮುಂದೆಯೂ ಇಂಥ ದಾಳಿ, ಕಾರ್ಯಾಚರಣೆ, ಎನ್ ಕೌಂಟರ್ ಮುಂದುವರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ದೇಶದ ನೆರೆಯ ರಾಷ್ಟ್ರ ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಹಾಗೂ ಉಗ್ರರನ್ನು ಬಿಟ್ಟು ಉಪಟಳ ಮಾಡುತ್ತದೆ. ಆದರೆ ಇದೆಲ್ಲವನ್ನೂ ಮೆಟ್ಟಿನಿಲ್ಲುವ ತಾಕತ್ತು ಸೈನ್ಯಕ್ಕಿದ್ದು, ಉಗ್ರರನ್ನು ಮಟ್ಟಹಾಕದೆ ಬಿಡುವುದಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
Leave A Reply