ಟ್ವಿಟರ್ ನಲ್ಲೂ ಮೋದಿ ಮೋಡಿ, ಅತಿಹೆಚ್ಚು ಫಾಲೋವರ್ ಹೊಂದಿದ ಭಾರತೀಯ ಖ್ಯಾತಿ ಮುಂದುವರಿಕೆ!
ದೆಹಲಿ: ದಿನೇದಿನೆ ಪ್ರಧಾನಿ ನರೇಂದ್ರ ಮೋದಿ ಅವರ ಖ್ಯಾತಿ, ವರ್ಚಸ್ಸು ಉತ್ತುಂಗಕ್ಕೇರುತ್ತಿದ್ದು, ಟ್ವಿಟರ್ ನಲ್ಲಿ ಮೋದಿ ಹೆಚ್ಚು ಫಾಲೋವರ್ಸ್ ಹೊಂದಿದ ಖ್ಯಾತಿಯನ್ನು ಅನಾಯಾಸವಾಗಿ ಮುಂದುವರಿಸಿದ್ದಾರೆ.
ಕಳೆದ ವರ್ಷ ನರೇಂದ್ರ ಮೋದಿ ಅವರಿಗೆ ಟ್ವಿಟರ್ ನಲ್ಲಿ 2.46 ಕೋಟಿ ಫಾಲೋವರ್ ಗಳಿದ್ದರು. ಪ್ರಸಕ್ತ ವರ್ಷದ ಡಿ.4ರ ವೇಳೆಗೆ ಆ ಸಂಖ್ಯೆ 3.75 ಕೋಟಿಗೆ ಹೆಚ್ಚಾಗಿದ್ದು, 2017ರಲ್ಲಿ ಅವರ ಖ್ಯಾತಿ ಶೇ.52ರಷ್ಟು ಪ್ರಗತಿ ಹೊಂದಿದೆ.
ಇನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕ, ರನ್ ಮಷೀನ್ ವಿರಾಟ್ ಕೊಹ್ಲಿ ಜನಪ್ರಿಯತೆ ಶೇ.61ರಷ್ಟು ಹೆಚ್ಚಾಗಿದ್ದು, 2.08 ಕೋಟಿ ಜನ ಫಾಲೋವರ್ ಗಳಿದ್ದಾರೆ.
ಪ್ರಸ್ತುತ ನರೇಂದ್ರ ಮೋದಿ ಅವರ ಬಳಿಕ ಸಲ್ಮಾನ್ ಖಾನ್ ಟ್ವಿಟರ್ ನಲ್ಲಿ ಜನಪ್ರಿಯ ವ್ಯಕ್ತಿ ಎನಿಸಿದ್ದು 3.09 ಕೋಟಿ ಫಾಲೋವರ್ ಗಳಿದ್ದಾರೆ. ಶಾರುಖ್ ಖಾನ್ ಅವರಿಗೆ 2.85 ಕೋಟಿ ಹಿಂಬಾಲಕರಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದಿಟ್ಟ ನಿರ್ಧಾರ ಹಾಗೂ ಮನಮೋಹಕ ವ್ಯಕ್ತಿತ್ವದಿಂದ ಜನಪ್ರಿಯರಾಗುತ್ತಿದ್ದಾರೆ. ಮೋದಿ ಸರ್ಕಾರ ಜಗತ್ತಿನ 3ನೇ ವಿಶ್ವಾಸಾರ್ಹ ಸರ್ಕಾರ ಎಂದು ಸಹ ಇತ್ತೀಚೆಗೆ ಅಮೆರಿಕದ ಸಂಸ್ಥೆಯೊಂದು ತಿಳಿಸಿತ್ತು.
Leave A Reply