ದಲಿತ ಮಹಿಳೆಯನ್ನು ಮದುವೆಯಾದರೆ ಕೇಂದ್ರದಿಂದ ಧನಸಹಾಯ, ಮೋದಿ ದಲಿತ ವಿರೋಧಿ ಎನ್ನುವವರೇ ಕೇಳಿ!

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಎನ್ನುತ್ತಲೇ ಎಲ್ಲರೂ ಕಲ್ಲು ಬೀಸುವವರೇ. ಮೋದಿ ಸರ್ವಾಧಿಕಾರಿ, ಮೋದಿ ದಲಿತ ವಿರೋಧಿ, ಮೋದಿ ಬ್ರಾಹ್ಮಣ ಪರ ಎಂದು ಹೇಳುತ್ತಾರೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಯೋಜನೆ ಜಾರಿಗೊಳಿಸಿದ್ದು, ಬೇರೆ ಜಾತಿಯ ವ್ಯಕ್ತಿ ದಲಿತ ಮಹಿಳೆಯನ್ನು ವಿವಾಹವಾದರೆ 2.5 ಲಕ್ಷ ರೂ. ಧನಸಹಾಯ ನೀಡುವುದಾಗಿ ಘೋಷಿಸಿದ್ದಾರೆ.
ಈ ಯೋಜನೆ 2013ರಲ್ಲೇ ಜಾರಿಗೆ ತಂದಿತ್ತಾದರೂ ವಾಸ್ತವದಲ್ಲಿ ಜಾರಿಯಾಗಿರಲಿಲ್ಲ. ಅಲ್ಲದೆ ಮದುವೆಯಾಗುವ ವ್ಯಕ್ತಿಯ ವಾರ್ಷಿಕ ಆದಾಯ 5 ಲಕ್ಷ ರೂ. ಮೀರಿರಬಾರದು ಎಂಬ ನಿಯಮವಿತ್ತು. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ನಿಯಮ ರದ್ದುಗೊಳಿಸಿದೆ.
ಅಲ್ಲದೆ, ವ್ಯಕ್ತಿಯೊಬ್ಬನಿಗೆ ಎಷ್ಟೇ ಆದಾಯವಿದ್ದರೂ, ಆತ ದಲಿತ ಯುವತಿಯನ್ನು ಮದುವೆಯಾದರೆ 2.5 ಲಕ್ಷ ರೂ. ಧನಸಹಾಯ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಅಂತರ್ಜಾತಿ ವಿವಾಹ ಪ್ರೋತ್ಸಾಹಿಸು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗೆ, ಅಂತರ್ಜಾತಿ ವಿವಾಹವಾಗುವ ವ್ಯಕ್ತಿ ತನ್ನ ಜಾತಿ, ದಂಪತಿಯ ಆಧಾರ್ ಕಾರ್ಡ್ ಸೇರಿ ಹಲವು ದಾಖಲೆ ಸಲ್ಲಿಸಬೇಕು ಎಂದು ಸಹ ಸರ್ಕಾರ ತಿಳಿಸಿದೆ.
ಅಲ್ಲದೆ ಆದಾಯ ಮಿತಿ ಇರುವ ಹಲವು ಯೋಜನೆಗಳ ನಿಯಮ ರದ್ದುಪಡಿಸಲು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಕಲ್ಯಾಣ ಸಚಿವಾಲಯ ತೀರ್ಮಾನಿಸಿದೆ.
ವಾರ್ಷಿಕ ಕನಿಷ್ಠ 500 ಜನ ದಲಿತ ಮಹಿಳೆಯರನ್ನು ಮದುವೆಯಾಗುವಂತೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. 2014-15ರಲ್ಲಿ ಕೇವಲ 5 ದಂಪತಿ ಅರ್ಜಿ ಸಲ್ಲಿಸಿದ್ದರು. 2015-16ರಲ್ಲಿ 76 ದಂಪತಿ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.
Leave A Reply