ಗೋರಕ್ಷಣೆ ಹೆಸರಲ್ಲಿ ನಡೆಯುವ ಹಿಂಸೆ ವಿರೋಧಿಸುವವರು ಇದನ್ನೇಕೆ ವಿರೋಧಿಸಲ್ಲ?
ಚಂಡೀಗಡ: ಗೋರಕ್ಷಣೆ ಹೆಸರಲ್ಲಿ ದೇಶದಲ್ಲಿ ಕೆಲವು ಹಿಂಸಾತ್ಮಕ ಘಟನೆ ನಡೆಯುತ್ತಲೇ ಎಲ್ಲರೂ ಮೋದಿ ಅವರತ್ತಲೇ ಬೆರಳು ತೋರಿಸಿದರು. ಸ್ವತಃ ಮೋದಿಯೇ, ಗೋರಕ್ಷಣೆ ಹೆಸರಲ್ಲಿ ಹಿಂಸೆ ಕೂಡದು ಎಂದು ಎಚ್ಚರಿಸಿದರೂ ಮೋದಿ ಅವರನ್ನೇ ಟೀಕಿಸಿ ಸಂತುಷ್ಟರಾದರು.
ಆದರೆ, ಹರಿಯಾಣದ ಮೇವಾತ್ ಜಿಲ್ಲೆಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಸಾಗಣೆ ಮಾಡುವವರು ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ.
ಸುಮಾರು 35 ಸುತ್ತು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಜೀವ ರಕ್ಷಣೆಗಾಗಿ ಪೊಲೀಸರೂ 13 ಸುತ್ತು ಗುಂಡು ಹಾರಿಸಿದ್ದಾರೆ. ಕೊನೆಗೂ ಪೊಲೀಸರನ್ನೇ ಹಿಮ್ಮೆಟ್ಟಿಸಿದ ಅಕ್ರಮ ಸಾಗಣೆದಾರರು ಪರಾರಿಯಾಗಿದ್ದಾರೆ. ಪುಣ್ಯವಶಾತ್ ಪೊಲೀಸರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಪೊಲೀಸ್ ವಾಹನ ಜಖಂಗೊಂಡಿದೆ.
ಕರ್ಖರಿ ಗ್ರಾಮದ ಬಳಿ ಟಾಟಾ 407 ಟ್ರಕ್ ಮೂಲಕ ಗೋವುಗಳ ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆ ದಾಳಿ ಮಾಡಿದ್ದು, ಸಾಗಣೆ ಮಾಡುವವರು ಸಹ ಪ್ರತಿ ದಾಳಿ ಮಾಡಿದ್ದಲ್ಲದೆ, ಟ್ರಕ್ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಟ್ರಕ್ ಹಾಗೂ 7 ಗೋವುಗಳನ್ನು ವಶಪಡಿಸಿದ್ದಾರೆ.
ಈ ಕುರಿತು ಶಾಹೀದ್, ಹಬೀಬ್, ಶೌಕತ್, ಅಮ್ಜಾದ್, ಜಲ್ಲು ಸೇರಿ 8 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
Leave A Reply