ಮೋದಿ ಚಿಂತನೆ ಅಭಿವೃದ್ಧಿಶೀಲ, ಟ್ವಿಟರ್ ನಲ್ಲೂ ಅವರು ಕ್ರಿಯಾಶೀಲ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಎನ್ನುತ್ತಲೇ, ಅವರ ಬಿಡುವಿಲ್ಲದ ಸೇವೆ, ದೇಶಕ್ಕಾಗಿ ಏನಾದರೂ ಮಾಡಬೇಕು ಎನ್ನುವ ತಹತಹ, ವಿಶ್ರಾಂತಿ ಪಡೆಯದ ದೇಹ, ಅಭಿವೃದ್ಧಿಯನ್ನೇ ಮಾನದಂಡವನ್ನಾಗಿಸಿಕೊಂಡ ಮಹಾನ್ ನಾಯಕ ಕಾಣುತ್ತಾರೆ.
ಈಗ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ, ಅದರಲ್ಲೂ ಟ್ವಿಟರ್ ನಲ್ಲಿ ಕ್ರಿಯಾಶೀಲವಾಗಿರುವ ನಾಯಕರಲ್ಲಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.
ಹೌದು, ಜಾಗತಿಕವಾಗಿ ಟ್ವಿಟರ್ ನಲ್ಲಿ ಹೆಚ್ಚು ಟ್ವೀಟ್ ಮಾಡಿದ ನಾಯಕರಲ್ಲಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನ ಹೊಂದಿದ್ದಾರೆ.
ಈ ಕುರಿತು ಟ್ವಿಟರ್ ಸಂಸ್ಥೆ 2017ನೇ ಸಾಲಿನ ವಾರ್ಷಿಕ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಳಿಕ ಮೋದಿ ಅವರೇ ಅತಿ ಹೆಚ್ಚು ಟ್ವೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೂರನೇ ಸ್ಥಾನದಲ್ಲಿ ವೆನುಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಇದ್ದಾರೆ. ಟ್ವಿಟರ್ ನಲ್ಲಿ ನರೇಂದ್ರ ಮೋದಿ 3.75 ಕೋಟಿ ಫಾಲೋವರ್ ಗಳನ್ನು ಹೊಂದಿದ್ದು, ದೇಶದಲ್ಲೇ ಹೆಚ್ಚು ಹಿಂಬಾಲಕರನ್ನು ಹೊಂದಿದ ವ್ಯಕ್ತಿ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
Leave A Reply