ತ್ರಿವಳಿ ತಲಾಖ್ ಕರಡು ವಿಧೇಯಕ ಅನುಮೋದಿಸಿದ ಮೊದಲ ರಾಜ್ಯ ಸರ್ಕಾರ ಯಾವುದು ಗೊತ್ತಾ?
Posted On December 7, 2017

ಲಖನೌ: ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಹೊರಡಿಸಿದ್ದ ತ್ರಿವಳಿ ತಲಾಖ್ ವಿರುದ್ಧದ ಕರಡು ವಿಧೇಯದ ಮೊದಲ ಹೆಜ್ಜೆಯಲ್ಲೇ ಸಕಾರಾತ್ಮಕ ಮುನ್ನಡೆ ಸಿಕ್ಕಿದೆ.
ತ್ರಿವಳಿ ತಲಾಖ್ ಕಾನೂನಿನ ಅನ್ವಯ ಶಿಕ್ಷಾರ್ಹ ಹಾಗೂ ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕರಡು ವಿಧೇಯಕವನ್ನು ಉತ್ತರ ಪ್ರದೇಶ ರಾಜ್ಯ ಸರ್ಕಾರ ಅನುಮೋದಿಸಿದ್ದು, ಕರಡು ಅನುಮೋದಿಸಿದ ದೇಶದ ಮೊದಲ ರಾಜ್ಯ ಎಂಬ ಹೆಸರಿಗೂ ಪಾತ್ರವಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಮಿತಿ ಸಭೆಯಲ್ಲಿ ತ್ರಿವಳಿ ತಲಾಖ್ ವಿರುದ್ಧದ ಕರಡು ವಿಧೇಯಕವನ್ನು ಒಮ್ಮತದಿಂದ ಅಂಗೀಕರಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕರಡು ಪ್ರತಿ ರಚಿಸಿ, ಎಲ್ಲ ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ. ಮುಸ್ಲಿಂ ವ್ಯಕ್ತಿ ತ್ರಿವಳಿ ತಲಾಖ್ ನೀಡಿದರೆ ಮೂರು ವರ್ಷ ಜೈಲು, ಮಹಿಳೆಗೆ ಜೀವನಾಂಶ ಸೇರಿ ಹಲವು ಸೌಲಭ್ಯ ನೀಡುವ ಕುರಿತು ಕಾನೂನು ರಚಿಸಲು ಕರಡು ತಯಾರಿಸಲಾಗಿದೆ.
- Advertisement -
Leave A Reply