ಫೇಸ್ ಬುಕ್ ನಲ್ಲಿ ಹಿಂದೂ ಪ್ರೊಫೈಲ್ ಬಳಸಿ ಯುವತಿಯರ ಸೆಳೆಯುತ್ತಿದ್ದ ಮುಸ್ಲಿಮನ ಬಂಧನ
ದಿಸ್ಪುರ: ಒಂದೆಡೆ ಲವ್ ಜಿಹಾದ್, ಇನ್ನೊಂದೆಡೆ ಬಲವಂತದ ಮತಾಂತರಕ್ಕೆ ದೇಶಾದ್ಯಂತ ಹಿಂದೂ ಯುವತಿಯರು ಬಲಿಯಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಹೊಸ ಪ್ರಕರಣ ಸುದ್ದಿಯಾಗಿದೆ.
ಅಸ್ಸಾಮಿನಲ್ಲಿ ಫೇಸ್ ಬುಕ್ ನಕಲಿ ಹಿಂದೂ ಪ್ರೊಫೈಲ್ ಬಳಸಿ ಹಿಂದೂ ಯುವತಿಯರನ್ನು ಸೆಳೆಯುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಬೀರ್ ಹಸೇನ್ ಎಂಬಾತನಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೂ ಚಪಲ ಬಿಡದ ಈತ ಫೇಸ್ ಬುಕ್ ನಲ್ಲಿ ರಾಜದೀಪ್ ದಾಸ್ ಎಂಬ ಹೆಸರಿನ ಪ್ರೊಫೈಲ್ ರಚಿಸಿದ್ದ ಎಂದು ತಿಳಿದುಬಂದಿದೆ.
ಅಲ್ಲದೆ ಈತ ಕಾಲೇಜು ಯುವತಿಯೊಬ್ಬಳ ಅಡ್ಡಹೆಸರು ದಾಸ್ ಎಂದು ಇದ್ದ ಹಿನ್ನೆಲೆ, ತಾನು ಸಹ ದಾಸ್ ಎಂದು ಬರೆದುಕೊಂಡು ಆಕೆಯ ಜತೆ ಸಾಮಾಜಿಕ ಜಾಲತಾಣದಲ್ಲೇ ಸಂಪರ್ಕ ಸಾಧಿಸಿದ್ದ. ಆಕೆ ಸಹ ಈತನ ಮಾತನ್ನು ನಂಬಿದ್ದಳು.
ಆದಾಗ್ಯೂ, ಇಬ್ಬರೂ ಕರೀಮ್ ಗಂಜ್ ನ ಪಾರ್ಕ್ ಒಂದರಲ್ಲಿ ಭೇಟಿಯಾಗಿದ್ದು, ಆಕೆಯನ್ನು ಮದುವೆಯಾಗುವುದಾಗಿ ಪ್ರಸ್ತಾಪಿಸಿದ್ದಾನೆ. ಈತನ ನಡವಳಿಕೆಯಿಂದ ಅನುಮಾನಗೊಂಡ ನಾಗರಿಕರು ಪರಿಶೀಲಿಸಿದಾಗ, ಬಳಿಕ ಬಜರಂಗದ ದಳದ ಸದಸ್ಯರು ಬಂದು ವಿಚಾರಿಸಿದಾಗ ಈತ ಮುಸ್ಲಿಮನಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಕುಪಿತರಾದ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Leave A Reply