ದೆಹಲಿಯ ಜಾಮಾ ಮಸೀದಿ ಅಲ್ಲ, ಜಮುನಾ ದೇವಿ ದೇವಸ್ಥಾನ
Posted On December 7, 2017

ದೆಹಲಿ: ದೆಹಲ್ಲಿಯಲ್ಲಿ ಪ್ರಸ್ತುತ ಇರುವ ಜಾಮಾ ಮಸೀದಿ ಒಂದು ಕಾಲದಲ್ಲಿ ಜಮುನಾ ದೇವಿ ದೇವಸ್ಥಾನವಾಗಿತ್ತು ಎಂದು ಬಿಜೆಪಿ ಪ್ರತಿಪಾದಿಸಿದೆ.
ಈ ಕುರಿತು ವಿಜಯ್ ಕಟಿಯಾರ್ ಮಾತನಾಡಿದ್ದು, ಮೊಘಲು ದೇಶದ ಸುಮಾರು 6000 ದೇವಾಲಯಗಳನ್ನು ಧ್ವಂಸ ಮಾಡಿದ್ದು, ದೆಹಲಿಯಲ್ಲಿರುವ ಜಾಮಾ ಮಸೀದಿಯೂ ಹೀಗೆ ಹಾನಿಗೊಳಗಾಗಿದೆ. ಅದು ಮೂಲವಾಗಿ ಜಮುನಾದೇವಿ ದೇವಸ್ಥಾನವಾಗಿತ್ತು” ಎಂದು ತಿಳಿಸಿದ್ದಾರೆ.
ಮುಸ್ಲಿಮ್ ಅರಸರು ನಮ್ಮ ದೇವಾಲಯ ಹಾಗೂ ನಂಬಿಕೆಯನ್ನೇ ಬುಡಮೇಲು ಮಾಡಿದ್ದು, ರಾಮ ಜನ್ಮಭೂಮಿಯ ರಾಮಮಂದಿರ, ಕಾಶಿಯ ಬಾಬಾ ವಿಶ್ವನಾಥ್ ಮಂದಿರ, ಮಥುರಾದ ಕೃಷ್ಣ ಜನ್ಮಭೂಮಿ ದೇವಾಲಯಗಳನ್ನು ನಾಶಪಡಿಸಿದ್ದಾರೆ ಎಂದಿದ್ದಾರೆ.
ಅಲ್ಲದೆ, ಕಪಿಲ್ ಸಿಬಲ್ ಬಾಬ್ರೀ ಮಸೀದಿ ಕುರಿತ ವಾದದ ಕುರಿತು ಸಹ ಟೀಕಿಸಿದ್ದು, ಕಾಂಗ್ರೆಸ್ ದೇಶದಲ್ಲಿ ಮತಕ್ಕಾಗಿ ಮಸೀದಿ ನಿರ್ಮಾಣ ಮಾಡಲು ಬಯಸುತ್ತಿದೆ. ಆದರೆ ಹಾಗಾಗಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
- Advertisement -
Leave A Reply