ಮೋದಿ ಅವರನ್ನು ನೀಚ ಎಂದು ಕ್ಷಮೆ ಕೇಳಿದ ಮಣಿಶಂಕರ್ ಅಯ್ಯರ್, ಪಕ್ಷದಿಂದಲೂ ಅಮಾನತು
ದೆಹಲಿ: ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ನರೇಂದ್ರ ಮೋದಿ ಅವರನ್ನು “ನೀಚ ಆದ್ಮಿ” ಎಂದು ಕಾಂಗ್ರೆಸ್ಸನ್ನೇ ಮುಜುಗರಕ್ಕೀಡು ಮಾಡಿದ್ದ ಮಣಿಶಂಕರ್ ಅಯ್ಯರ್ ಸಾರ್ವಜನಿಕವಾಗಿ ಮುಖಭಂಗ ಅನುಭವಿಸಿದ್ದಾರೆ.
ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಸೂಚನೆ ಹಿನ್ನೆಲೆಯಲ್ಲಿ ಮಣಿಶಂಕರ್ ಅಯ್ಯರ್ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಅವರನ್ನು ಪ್ರಾಥಮಿಕ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಿದೆ.
ಮಾತಿನ ಓಘದಲ್ಲೋ, ಅಥವಾ ಕಾಂಗ್ರೆಸ್ಸನ್ನು ಮೆಚ್ಚಿಸಲೆಂದೋ ಮಣಿಶಂಕರ್ ಅಯ್ಯರ್ ನರೇಂದ್ರ ಮೋದಿ ನೀಚ ಆದ್ಮಿ ಎಂದು ಹೇಳಿದ್ದರು. ಇದು ವಿವಾದಕ್ಕೂ ಕಾರಣವಾಗಿದ್ದಲ್ಲದೆ, ಬಿಜೆಪಿಗರು ಸೇರಿ ಹಲವರಿಂದ ಟೀಕೆಗೊಳಗಾಗಿತ್ತು. ರಾಹುಲ್ ಗಾಂಧಿ ಸಹ ಕ್ಷಮೆಯಾಚಿಸುವಂತೆ ಸೂಚಿಸಿದ್ದಾರೆ.
ಹಾಗಾಗಿ ಮಾಧ್ಯಮದೆದುರು ಬಂದ ಮಣಿಶಂಕರ್ ಅಯ್ಯರ್, “ನನಗೆ ಸರಿಯಾಗಿ ಹಿಂದಿ ಬರುವುದಿಲ್ಲ. ನಾನು ಕೀಳುಮಟ್ಟದ ಮನುಷ್ಯ ಎಂಬರ್ಥದಲ್ಲಿ ಪದ ಪ್ರಯೋಗ ಮಾಡಿದ್ದೆ. ಆದರೆ ಹಿಂದಿಯಲ್ಲಿ ನೀಚ ಜಾತಿಯಲ್ಲಿ ಜನಿಸಿದವ ಎಂಬರ್ಥ ನೀಡುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ಹಾಗಾಗಿ ನೀಚ ಎಂಬ ಪದ ಬಳಸಿದ್ದಕ್ಕಾಗಿ ಕ್ಷಮೆಯಾಚಿಸುವೆ” ಎಂದು ಮಣಿಶಂಕರ್ ಅಯ್ಯರ್ ಸ್ಪಷ್ಟಪಡಿಸಿದ್ದರು. ಆದರೆ ಏಕಾಏಕಿ, ಕಾಂಗ್ರೆಸ್ ಮಣಿಶಂಕರ್ ಅಯ್ಯರ್ ಅವರನ್ನು ಅಮಾನತುಗೊಳಿಸಿದ್ದು, ಚುನಾವಣೆ ಗಿಮಿಕ್ಕಾ ಎಂಬ ಪ್ರಶ್ನೆ ಮೂಡಿಸಿದೆ.
Leave A Reply