ಭಾರತಕ್ಕೆ ಸಿಕ್ಕಿತು ವಾಸೆನಾರ್ ಅರೇಂಜ್ ಮೆಂಟ್ ಸದಸ್ಯತ್ವ, ಎನ್ಎಸ್ ಜಿ ಸೇರ್ಪಡೆಗಿದು ಅನುಕೂಲ!
Posted On December 8, 2017
![](https://tulunadunews.com/wp-content/uploads/2017/12/indian-960x640.jpg)
ದೆಹಲಿ: ಅಣ್ವಸ್ತ್ರ ಪ್ರಸರಣ ತಡೆಯಲ್ಲಿ ಭಾರತದ ನಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಗಣನೆಯಾಗಿದ್ದು, ದೇಶಕ್ಕೆ ವಾಸೆನಾರ್ ಅರೇಂಜ್ ಮೆಂಟ್ ಸಮಿತಿಗೆ ಭಾರತ ಸದಸ್ಯತ್ವ ಪಡೆದಿದೆ.
ಆ ಮೂಲಕ ಈ ಸದಸ್ಯತ್ವ ಪಡೆದ ವಿಶ್ವದ 42ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಅಲ್ಲದೆ ಈ ಸದಸ್ಯತ್ವದಿಂದ ಭಾರತ ಅಣ್ವಸ್ತ್ರ ಪೂರೈಕೆದಾರರ ತಂಡ (ಎನ್ಎಸ್ ಜಿ) ಸೇರಲು ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ವಿಯೇನ್ನಾದಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ಭಾರತವನ್ನು ವಾಸೆನಾರ್ ಅರೇಂಜ್ ಮೆಂಟ್ ಗೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದರಿಂದ ಭಾರತದ ಖ್ಯಾತಿ ಹೆಚ್ಚಿದೆ ಎಂದು ತಿಳಿದುಬಂದಿದೆ.
ಸದಸ್ಯತ್ವದಿಂದ ಭಾರತಕ್ಕೆ ಸಿಗುವ ಅಧಿಕಾರಗಳಾವವು?
-
ಪಾರದರ್ಕವಾಗಿ ಶಸ್ತ್ರಾಸ್ತ್ರ ರಫ್ತು, ಆಮದು, ಸಾಗಣೆಯಲ್ಲಿ ಭಾರತದ ಜವಾಬ್ದಾರಿ ಹೆಚ್ಚಲಿದೆ.
-
ಸದಸ್ಯತ್ವ ಪಡೆದ ರಾಷ್ಟ್ರಗಳು ಬೇರೆ ದೇಶದ ಅಭಿವೃದ್ಧಿ, ಯುದ್ಧ ಸನ್ನಿವೇಶ, ದಾಳಿಯಂಥ ಸಂದರ್ಭಕ್ಕೆ ಶಸ್ತ್ರಾಸ್ತ್ರ ಒದಗಿಸಲು ಆಗದ ಕಾರಣ ಭಾರತಕ್ಕೆ ಅನುಕೂಲ.
-
ಭಯೋತ್ಪಾದಕರನ್ನು ಬಂಧಿಸಿ, ಅವರಿಂದ ಶಸ್ತ್ರಾಸ್ತ್ರ ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಸಿಗಲಿದೆ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply