ಮಂಗಳೂರಿನ ಈ ಅಜ್ಜ ಮಾಡಿ ಕೊಡುವ ಕಬ್ಬಿನ ಹಾಲನ್ನು ನೀವು ಕುಡಿಯಲೇ ಬೇಕು!
Posted On July 6, 2017
ವಯಸ್ಸು 70 ದಾಟಿದೆ ಆದ್ರೂ ಅವರ ಅಂಗಡಿಗೆ ಬಂದು ಕಬ್ಬಿನ ಹಾಲನ್ನು ಲೋಟಕ್ಕೆ ಹಾಕಿ ಮಾರಾಟ ಮಾಡುತ್ತಾರೆ. ಮನೆಯಲ್ಲಿ ಕೂತು ಏನು ಮಾಡಲಿ ಎನ್ನುತ್ತಾರೆ ಅನಂತ್ ಶೆಣೈ. ಸುಮಾರು 60ವರ್ಷಗಳಿಂದ ಈ ವ್ಯಾಪಾರವನ್ನು ಶುರು ಮಾಡಿ ಎಲ್ಲರ ನೆಚ್ಚಿನ ಅಜ್ಜ ಎಂದು ಗುರುತಿಸಿ ಕೊಂಡಿದ್ದಾರೆ! ಮುಂಜಾನೆ 4 ಘಂಟೆಗೆ ಇವರ ಅಂಗಡಿ ತೆರೆಯುತ್ತದೆ. ನಗು ಮುಖದಿಂದ ಎಲ್ಲರನ್ನು ಸ್ವಾಗತಿಸಿ ಬನ್ನಿ ಕುಳಿತುಕೊಳ್ಳಿ ಎಂದು ಹೇಳಿ ನಿಮಗೆ ಎಷ್ಟು ಲೋಟ ಕಬ್ಬಿನ ಹಾಲನ್ನು ಕೊಡಲಿ ಎಂದು ಕೇಳುವ ಶೈಲಿ ಒಂದು ಲೋಟ ಕುಡಿಯುವವನಿಗೂ ಮತ್ತೊಂದು ಲೋಟ ಕಬ್ಬಿನ ಹಾಲನ್ನು ಕುಡಿಯೋಣ ಎಂದು ಅನ್ನಿಸದೆ ಬಿಡದು!
ಮಂಗ್ಲಿ ಮಾಮ್ ಎಂದೇ ಚಿರ ಪರಿಚಿತರಾದ ಅನಂತ್ ಅಜ್ಜ ಪಬ್ಲಿಕ್ ಟಿ ವಿ ನಡೆಸುವ ಪಬ್ಲಿಕ್ ಹೀರೋದಲ್ಲಿ ಕಾರ್ಯಕ್ರಮ ದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. 1958ರಲ್ಲಿ ಅಲೋಶಿಯಸ್ ಕಾಲೇಜಿನ ಮುಂಭಾಗದಲ್ಲಿ ತಮ್ಮ ಅಂಗಡಿಯನ್ನು ಶುರು ಮಾಡಿದರು. ಮುಂಬೈಗೆ ಹೋಗಿ ಅಲ್ಲಿಂದ ಬೇಲ್ ಪುರಿ ಅನ್ನು ಕಲಿತು ಮುಂಬೈ ಬೇಲ್ ಮಂಗಳೂರಿನಲ್ಲಿ ಪರಿಚಯಿಸಿದ್ದು ಇದೆ ಮಂಗ್ಲಿ ಮಾಮ್. ಆ ಕಾಲದಲ್ಲಿ ಪೈಸೆ ಗೆ ಒಂದು ಗ್ಲಾಸ್ ಕಬ್ಬಿನ ಹಾಲು ಕೊಡುತ್ತಿದ್ದ ಅನಂತ್ ಅಜ್ಜ ಈಗ ೧೫ .ರೂ ತೆಗೆದು ಕೊಳ್ಳುತ್ತಾರೆ.
ಅಜ್ಜನಿಗೆ 24 ಬಾರಿ ಮಲೇರಿಯಾ ಬಂದಿದೆ!!
ಹೌದು ಅನಂತ್ ಅಜ್ಜ ಹೇಳುವ ಪ್ರಕಾರ ಅವರಿಗೆ ಈ ವರೆಗೆ 24 ಬಾರಿ ಮಲೇರಿಯಾ ಬಂದಿದೆಯಂತೆ. ನಿಮಗೆ ಕಷ್ಟ ಆಗಲಿಲ್ಲವೆ ಅಜ್ಜ ಎಂದು ನಮ್ಮ ತಂಡ ಕೇಳಿದಕ್ಕೆ ‘ ನಾನು ತುಂಬಾ ಶಕ್ತಿ ಶಾಲಿ ಅಂತ ಹೇಳಿ ನಕ್ಕು ಅಲ್ಲೇ ಕುಳಿತು ಬಿಟ್ಟರು ಮಂಗ್ಲಿ ಮಾಮ್.
ಒಮ್ಮೆ ನೀವು ಇವರ ಅಂಗಡಿಗೆ ಬೇಟಿ ಕೊಟ್ಟು ಒಂದು ಲೋಟ ಕಬ್ಬಿನ ಹಾಲನ್ನು ಕುಡಿಯಲೇ ಬೇಕು. ಇವರ ಅಂಗಡಿ ಇರುವುದು ಮಂಗಳೂರಿನ ಕೆನರಾ ಉರ್ವ ಶಾಲೆಯ ಮುಂಭಾಗದಲ್ಲಿ!
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply