ಕಾಂಗ್ರೆಸ್ಸೇಕೆ ಟೀಕಿಸುತ್ತದೆ ಎಂಬುದಕ್ಕೆ ಮೋದಿ ಅವರು ನೀಡಿದ ಕಾರಣವೇನು ಗೊತ್ತೆ?
ಗಾಂಧಿನಗರ: ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್, ಮೋದಿ “ನೀಚ” ಎಂದು ಹೇಳಿಕೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್ಸೇಕೆ ನನ್ನ ವಿರುದ್ಧ ಹೀನ ಪದ ಬಳಸುತ್ತದೆ ಎಂಬುದಕ್ಕೆ ಕಾರಣ ನೀಡಿದ್ದಾರೆ.
ಗುಜರಾತಿನ ಸಬರ್ ಕಾಂಥ ಎಂಬಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, “ನಾನು ಹಿಂದುಳಿದ ಜಾತಿಯಲ್ಲಿ ಜನಿಸಿದವ ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ಸಿಗರು ನನ್ನ ವಿರುದ್ಧ ಕೀಳು ಪದ ಬಳಸುತ್ತಾರೆ” ಎಂದು ಹೇಳಿದ್ದಾರೆ.
ಅವರು ನೀಚ ಎಂಬ ಪದ ಬಳಸಲು ಕಾರಣವೇನು ಗೊತ್ತೆ? ನಾನು ಹಿಂದುಳಿದ ಜಾತಿಯಲ್ಲಿ ಜನಿಸಿದ್ದೇನೆ ಎಂಬ ಕಾರಣಕ್ಕಾಗಿ, ನಾನೊಂದು ಬಡ ಕುಟುಂಬದಲ್ಲಿ ಜನಸಿದ್ದೇನೆ ಎಂದು, ಬಡ ಕುಟುಂಬದಲ್ಲಿ ಹುಟ್ಟಿದರೂ ಅವರಿಗೆ ಸೆಡ್ಡು ಹೊಡೆದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ನನ್ನ ವಿರುದ್ಧ ಇಂಥ ಹೇಳಿಕೆ ನೀಡುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಎಂಥಾ ಭಾಷೆ ಬಳಸಬೇಕು ಎಂಬುದೇ ಗೊತ್ತಿಲ್ಲ. ನನ್ನ ವಿರುದ್ಧ ಕಾಂಗ್ರೆಸ್ಸಿಗರು ಎಂಥ ಕೀಳುಮಟ್ಟದ ಭಾಷೆ ಬಳಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಸಭ್ಯ ಭಾಷೆ ಬಳಸಬೇಕು ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಿದೆಯೇ? ನನಗೆ ಕೆಟ್ಟ ಪದ ಬಳಸಲು ನಾನಾವ ತಪ್ಪು ಮಾಡಿದ್ದೇನೆ? ದೇಶದ ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದೇ, ನಾನವರ ನಂಬಿಕೆ ಗಳಿಸಿದ್ದೇ ತಪ್ಪಾ ಎಂದು ಮೋದಿ ಪ್ರಶ್ನಿಸಿದ್ದಾರೆ.
ಎಡೆಬಿಡದೆ, ಹಗಲು ರಾತ್ರಿ ಎನ್ನದೆ ಕಾಂಗ್ರೆಸ್ ನನ್ನನ್ನು ತೆಗಳಿದೆ. ಆದರೂ ನಾನು ಸುಮ್ಮನೆ ಇರಲು ಕಾರಣ, ನನ್ನ ಪ್ರಾಮುಖ್ಯ ಕೆಲಸ ಹಾಗೂ ದೇಶದ ಅಭಿವೃದ್ಧಿಯಾಗಿದೆ ಎಂದಿದ್ದಾರೆ.
ನರೇಂದ್ರ ಮೋದಿ “ನೀಚ ಆದ್ಮಿ” ಎಂದು ಕಾಂಗ್ರೆಸ್ ಮುಖಂಡ ಹೇಳಿಕೆ ನೀಡಿದ್ದು ದೊಡ್ಡ ವಿವಾದವಾಗಿದೆ. ಅಲ್ಲದೆ ಕಾಂಗ್ರೆಸ್ ಅಯ್ಯರ್ ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿದೆ.
Leave A Reply