ಗುಜರಾತಿನಲ್ಲಿ ಮೊದಲ ಹಂತದ ಮತದಾನ ಆರಂಭ, ಮತ ನೀಡುವಂತೆ ಮೋದಿ ಕರೆ!
ಗಾಂಧಿನಗರ: ಇಡೀ ದೇಶದ ಗಮನ ಸೆಳೆದಿರುವ, ರಾಹುಲ್ ಗಾಂಧಿ ಹಾಗೂ ಪ್ರಧಾನಿ ಮೋದಿ ಅವರಿಗೆ ಪ್ರತಿಷ್ಠೆಯ ಕಣವಾಗಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ಬೆಳಗ್ಗೆ ಆರಂಭವಾಗಿದೆ.
182 ಸ್ಥಾನಗಳುಳ್ಳ ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಿಗೆ ಮೊದಲ ಹಂತವಾಗಿ ಮತದಾನ ಆರಂಭವಾಗಿದ್ದು, ಚಳಿಯನ್ನೂ ಲೆಕ್ಕಿಸದೆ ಜನ ಮತದಾನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಹಂತದ ಮತದಾನ ಆರಂಭವಾಗಿದೆ. ಜನ ಬಿಜೆಪಿ ಅಭ್ಯರ್ಥಿಗಳಿಗೆ ದಾಖಲೆ ಸಂಖ್ಯೆಯ ಮತ ನೀಡಲು ಮನವಿ ಮಾಡುವೆ. ಅದರಲ್ಲೂ ಯುವಜನತೆ ತಮ್ಮ ಹಕ್ಕು ಚಲಾಯಿಸುವಂತೆ ತಿಳಿಸುವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಟರ್ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.
ಅತ್ತ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸಹ ಟ್ವೀಟ್ ಮೂಲಕ ಮನವಿ ಮಾಡಿದ್ದು, “ಪ್ರಿಯ ನಾಗರಿಕರೇ, ನಿಮ್ಮ ಮತ ಅಮೂಲ್ಯ ಹಾಗೂ ಮಹತ್ತರ ಪಾತ್ರ ನಿರ್ವಹಿಸುವಂಥಾದ್ದು. ರಾಷ್ಟ್ರ ನಿರ್ಮಾಣ ಮಾಡುವ ಕಾರ್ಯದ ಪ್ರತಿರೂಪವಾಗಿ ಎಲ್ಲರೂ ಮತದಾನ ಮಾಡಿ” ಎಂದಿದ್ದಾರೆ.
ಉಳಿತ 93 ಸ್ಥಾನಗಳಿಗೆ ಡಿ.14ರಂದು ಮತದಾನ ನಡೆಯಲಿದೆ. ಇದುವರೆಗೆ ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವುಗಳಲ್ಲೂ ಬಿಜೆಪಿಯೇ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದ್ದು, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ.
Leave A Reply