ಮಕ್ಕಳಿಗೆ ಸೈನ್ಯ ಸೇರಲು ಆ ವೀರ ಯೋಧ ನೀಡಿದ ಸ್ಫೂರ್ತಿ ಎಂಥಾದ್ದು..!
ಚಂಡಿಗಡ್: ನಿಮ್ಮಲ್ಲಿ ಎಷ್ಟು ಜನ ಸೈನ್ಯಕ್ಕೆ ಸೇರಲು ಇಚ್ಚಿಸುತ್ತೀರಿ ಎಂದು ಕೇಳಿದ ವೀರ ಚಕ್ರ ಗೌರವ ಪಡೆದ ನಿವೃತ ಲೆಫ್ಟನೆಂಟ್ ಕರ್ನಲ್ ಹರ್ಬಂತ್ ಸಿಂಗ್ ಕಹ್ಲೋನ್ ಮೋಹಾಲಿಯ ಸರ್ಕಾರಿ ಶಾಲೆ ಮಕ್ಕಳಿಗೆ ಪ್ರಶ್ನಿಸಿದಾಗ ಬಂದ ಉತ್ತರ ನಿರಾಶಾದಾಯಕ. ನಾನು ಸೈನ್ಯಕ್ಕೆ ಸೇರುತ್ತೇನೆ ಎಂದು ಕೈ ಎತ್ತಿದ್ದ ಮಕ್ಕಳು ಕೇವಲ ಬೆರಳೆಣಿಕೆಯಷ್ಟು.
ಕೆಲ ಕ್ಷಣ ಕಾದ ನಂತರವೂ ಕೈ ಎತ್ತಿದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಲೇ ಹೋಯಿತು. ಆಗಲೇ ನಿರ್ಧರಿಸಿದರೂ ಕರ್ನಲ್ ಹರ್ಬತ್ ಸಿಂಗ್ ಕಹ್ಲೋನ್. ಈ ಮಕ್ಕಳಿಗೆ ಸೈನ್ಯದ ಮಹತ್ವ ತಿಳಿಸಬೇಕು, ಇವರಲ್ಲಿ ಸೈನ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಹೊಗಲಾಡಿಬೇಕು, ಸೈನ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ನಿರ್ಧರಿಸಿದರು.
ಏನಾಯ್ತು? ಏಕೆ ಎಲ್ಲರೂ ಸೈನ್ಯಕ್ಕೆ ಸೇರಲು ಹಿಂಜರಿಯುತ್ತಿದ್ದೀರಿ?, ಹುತಾತ್ಮರಾಗಲು ಭಯವಿದೆಯೇ? ಸಾವು ಇಂದಲ್ಲ ನಾಳೆ ಬಂದೆ ಬರುವುದು ನಿಶ್ಚಿತ ಎಂದು ಕರ್ನಲ್ ಕಹ್ಲೋನ್ ಎಷ್ಟೇ ಕೇಳಿದರೂ, ಮಕ್ಕಳ ನಿರಾಶಾಯಕ ನಗು ಕಂಡಿತೆ ವಿನಾ ಸೂಕ್ತ ಬರಲಿಲ್ಲ.
ನಿಮಗೆ ಹುತಾತ್ಮರಾಗಲು ಭಯವೇ? ಸಾವು ಇಂದಲ್ಲ ನಾಳೆ ಬಂದೆ ಬರುತ್ತದೆ. ಯೋಧರಾಗಿ ನೀವು ಹುತಾತ್ಮರಾದರೇ ಇಡೀ ವಿಶ್ವ ನಿಮ್ಮನ್ನು ಸ್ಮರಣೆ ಮಾಡುತ್ತದೆ. ನಿಶ್ಚಿತವಾಗಿರುವ ಸಾವಿಗೆ ಅದೇಕೆ ನೀವು ಭಯಪಡಬೇಕು. ನೀವು ಇಂದು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೀರಿ ಎಂದರೆ ಅಲ್ಲಿ ಯೋಧರು ನಿದ್ದೇ ಮಾಡದೇ ಗಡಿ ಕಾಯುತ್ತಿದ್ದಾರೇ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಪಾಲಕರು ತಮ್ಮ ಮಕ್ಕಳಿಗೆ ಸೈನ್ಯದ ಸ್ಫೂರ್ತಿದಾಯಕ ಕಥೆಗಳನ್ನು ಹೇಳಬೇಕು. ಕೇವಲ ಎಂಜಿನಿಯರ್, ಮೆಡಿಕಲ್ ಎನ್ನದೇ ಸೈನ್ಯಕ್ಕೆ ಮಕ್ಕಳನ್ನು ಸೇರಿಸಬೇಕು. ಪಾಲಕರ ನಿರಾಸಕ್ತಿಯೇ ಮಕ್ಕಳಿಗೆ ಸೈನ್ಯದ ಬಗ್ಗೆ ಇರುವ ಆಸಕ್ತಿ ಕಡಿಮೆಯಾಗಲು ಕಾರಣ. ಸೈನ್ಯದಲ್ಲಿ ಸೇರಿದವರು ವಿಶ್ವಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಬಹುದು. ರಾಷ್ಟ್ರೀಯ ಸೈನಿಕ ಅಕಾಡೆಮಿ ಸೂಕ್ತ ಸೌಲಭ್ಯ ಒದಗಿಸುತ್ತದೆ ಎಂದು ಹೇಳಿದರು. ದೇಶದಲ್ಲಿ ಸೈನ್ಯದ ಬಗ್ಗೆ ಸ್ಫೂರ್ತಿ ತುಂಬುವವರೇ ಕಡಿಮೆ. ಸೈನ್ಯದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮಗಳ ನಡೆಯಬೇಕು. ಇಲ್ಲಿದ್ದಿದ್ದರೇ ಪರಿಸ್ಥಿತಿ ತೀರಾ ವಿಭಿನ್ನವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
Leave A Reply