ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ದಾರಿ ತಪ್ಪಿಸಿದೆ: ಪ್ರಧಾನಿ ನರೇಂದ್ರ ಮೋದಿ
ಅಹಮದಾಬಾದ್: ಭಾರತದಲ್ಲಿ ಮುಸ್ಲಿಮರ ಹೆಸರಲ್ಲಿ ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಗುಜರಾತ್ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುಲಿರುವ ಲುನವಾಡದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿ, ಮೀಸಲು ನೀಡುವ ಕುರಿತು ಸ್ವಾತಂತ್ರ್ಯ ಬಂದಾಗಿನಿಂದಲು ಹೇಳುತ್ತಲೇ ಬಂದಿದೆ. ಆದರೆ ಯಾವುದೇ ಭರವಸೆಯನ್ನು ಕಾಂಗ್ರೆಸ್ ಯಾವ ರಾಜ್ಯದಲ್ಲೂ ತನ್ನ ಉಳಿಸಿಕೊಂಡಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
ತಮ್ಮ ವಿರುದ್ಧ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವವರ ವಿರುದ್ಧ ಹರಿಹಾಯ್ದ ಮೋದಿ “ಸಲ್ಮಾನ್ ನಜ್ಮಿ ಹೆಸರಿನ ಯುವ ಕಾಂಗ್ರೆಸ್ ಮುಖಂಡನೊಬ್ಬ ಗುಜರಾತ್‌ನಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾನೆ. ಟ್ವಿಟರ್‌ನಲ್ಲಿ ರಾಹುಲ್‌ಜೀರ ತಂದೆ ಹಾಗೂ ತಾಯಿ ಕುರಿತು ಬರೆದಿದ್ದಾನೆ. ಅದೆಲ್ಲಾ ಸರಿ, ಆದರೆ ಮೋದಿ ನಿನ್ನ ತಂದೆ ತಾಯಿ ಯಾರು ಎಂದು ಕೇಳಿದ್ದಾನೆ. ಇಂಥ ಭಾಷೆಯನ್ನು ಶತ್ರುಗಳ ಮೇಲೂ ಬಳಸಲು ಆಗುವುದಿಲ್ಲ. ಪ್ರತಿ ಮನೆಯಲ್ಲೂ ಅಫ್ಜಲ್ ಗುರು ಹುಟ್ಟಿಕೊಳ್ಳಲಿದ್ದಾನೆ ಎಂದು ಹೇಳುವವರಲ್ಲಿ ಆತನೂ ಒಬ್ಬ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave A Reply