ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಮೇಲೆ ಹಲ್ಲೆ
ಮಲ್ಲಪುರಂ: ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಮುಂದುವರಿದಿವೆ. ಶುಕ್ರವಾರ ಕೇರಳದ ಮಲ್ಲಪುರಂ ಸಮೀಪದ ನರಿಪರಂಬುನಲ್ಲಿ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆರ್ ಎಸ್ ಎಸ್ ಕಾರ್ಯಕರ್ತ ಎನೈಜೀಯಲ್ ಸಿಜಿತ್ (28) ಮೇಲೆ ಹಲ್ಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಸಿಜೀತ್ ಅವರನ್ನು ಎಡಪ್ಪಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ನಡೆದಿದೆ, ಈ ವೇಳೆಯಲ್ಲಿ ಮೂವರು ಆಘಂತುಕರು ಆಟೋರಿಕ್ಷಾದಲ್ಲಿದ್ದ ಸಿಜೀತ್ ಅವರನ್ನು ಅನಾಮಿಕ ವ್ಯಕ್ತಿಗಳು ಕಟ್ಟಿಪುರಂನಿಂದ ಬೆನ್ನಟ್ಟಿದ್ದಾರೆ.
ಪೆನ್ನಂಬೂರ ಬಳಿ ಪ್ರಯಾಣಿಕರಿಗಾಗಿ ಆಟೋ ನಿಲ್ಲಿಸಿದಾಗ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿದ್ದು, ನಾನಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇನ್ನು ಘಟನೆ ವಿರೋಧಿಸಿ ಬಿಜೆಪಿ ಕೇರಳದ ಘಟಕ ಪೊನ್ನನ್ನಿ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಿತು.
Leave A Reply