ದೇಶ ದ್ರೋಹಿ ಫಾರೂಕ್ ಅಬ್ದುಲ್ಲಾನನ್ನು ಕರೆಸಿ, ಅದ್ಯಾವ ಬಿಟ್ಟಿ ಪ್ರಚಾರ ಪಡೆಯುವಿರಿ ದೇವೇಗೌಡರೇ?
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಾಯಿ ಬಿಟ್ಟರೇ ಬರೀ ದೇಶವಿರೋಧಿ ಹೇಳಿಕೆಗಳೇ ಹೊರಬೀಳುತ್ತವೇ. ದೇಶದ ಅನ್ನ ತಿಂದು, ದೇಶದ ಜನರು ಕಟ್ಟಿದ ತೆರಿಗೆ ಹಣದಲ್ಲಿ ರಕ್ಷಣೆ ಪಡೆಯುವ ಈತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು, ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಸದಾ ದೇಶದ ವಿರುದ್ಧ ಹಲ್ಲುಮಸೆಯುತ್ತಾ, ಬೆಂಕಿ ಹಚ್ಚುವ ಕಾರ್ಯ ಮಾಡುತ್ತಾನೆ. ಆದರೆ ಇಂತಹ ರಾಷ್ಟ್ರವಿರೋಧಿಯನ್ನು, ರಾಷ್ಟ್ರದ ರಕ್ಷಣೆಗೆ ಸವಾಲಾಗಿ ಪರಿಣಮಿಸಿರುವ ದುರುಳನನ್ನು ಕರ್ನಾಟಕದ ಮಣ್ಣಿನ ಮಗ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕುಟುಂಬದ ಜೆಡಿಎಸ್ ಪಕ್ಷದ ಪ್ರಚಾರಕ್ಕೆ ಕರೆಸುತ್ತಿದ್ದಾರೆ. ಇದೇ ಅಲ್ಲವೇ ದೇಶಕ್ಕೆ, ರಾಜ್ಯಕ್ಕೆ ಎದುರಾಗಿರುವ ಕಂಟಕ.
ದೇವೇಗೌಡರಿಗೆ ರಾಷ್ಟ್ರ ರಾಜಕಾರಣದಲ್ಲಿ ಮೆರೆದ ಹಲವು ಧೈತ್ಯ ಮುಖಂಡರ ಆತ್ಮೀಯತೆ ಇದೆ. ಆದರೆ ತುಮಕೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಅಲ್ಪಸಂಖ್ಯಾತರ ಮತ ಸೆಳೆಯುವ ಉದ್ದೇಶಕ್ಕಾಗಿ ಇದೆಂತಾ ದುರುದ್ದೇಶಕ್ಕೆ ಕೈ ಹಾಕಿದ್ದೀರಿ?. ರಾಜಕಾರಣಕ್ಕಾಗಿ ದೇಶದ ಹಿತವನ್ನೇ ಬಲಿ ನೀಡುವ ವ್ಯಕ್ತಿಯನ್ನು ಕರೆಸಿ ಬಿಟ್ಟಿ ಪ್ರಚಾರ ಪಡೆಯುವ ಧೈನೆಸಿ ಸ್ಥಿತಿ ಯಾಕೇ ದೇವೇಗೌಡರೇ?.
ಕೇವಲ ಮುಸ್ಲಿಮರ ಮತಕ್ಕಾಗಿ ದೇಶದ ವಿರುದ್ಧ ಷಡ್ಯಂತ್ರ ಹೂಡುವ ವ್ಯಕ್ತಿಯನ್ನು ಕರೆಸಿ ಮತ ಬೇಡುವ ದರ್ದು ಏನಿತ್ತು ಗೌಡರೇ?. ನೀವು ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ ಎಂದು ಹೇಳಿದಾಗಲೇ ಜನರು ನಿಮಗೆ ನೀಡಿದ ಪ್ರತಿಕ್ರಿಯೆ ನೋಡಿಯಾದರೂ ಸುಮ್ಮನಿರಬೇಕಿತ್ತು. ಫಾರೂಕ್ ಅಬ್ದುಲ್ಲಾನಂತಹವನನ್ನು ಕರೆಸಿ ಮತ ಬೇಡುತ್ತೀರಾದರೇ ನಿಮಗೆ ನಿಮ್ಮ ಮೇಲೆ ಭರವಸೆ ಇಲ್ಲ ಎಂದಾಯಿತಲ್ಲವೇ?
ರಾಷ್ಟ್ರಗೀತೆ ಹೇಳಲು ಹಿಂಜರೆಯುವ, ದೇಶದ ಧ್ವಜಕ್ಕೆ ಗೌರವ ನೀಡದೆ ಅಪಮಾನ ಮಾಡುವ, ದೇಶದ ಏಕತೆಯನ್ನೇ ಪ್ರಶ್ನಿಸುವ, ದೇಶದ ಗಡಿ ಕಾಯುವ ಸೈನಿಕರನ್ನು ಹೀಯಾಳಿಸುವ ಅಬ್ದುಲ್ಲಾನಂತರ ದೇಶದ್ರೋಹಿಯನ್ನು ನೀವು ಬೆಂಬಲಿಸಿದಂತಾಯಿತಲ್ಲವೇ ದೇವೇಗೌಡರೇ. ಅವರನ್ನು ಕರೆಸಿ ಸಮಾವೇಶ ಮಾಡುತ್ತೀರಿ ಎಂದ ಮೇಲೆ ನೀವು ಅವರ ನಿಲುವಿಗೆ ಬೆಂಬಲಿಸುತ್ತೀರಿ ಎಂದಾಯಿತಲ್ಲವೇ?
ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿರುವ ನಿಮಗೆ ಕಾಶ್ಮೀರದಲ್ಲಿ ಬೆಂಕಿ ಹಚ್ಚಿ ಪಾಕಿಸ್ತಾನವನ್ನು ಮಣಿಸುವ ತಾಕತ್ತು ಭಾರತಕ್ಕೆ ಇಲ್ಲ ಎನ್ನುವ, ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರುತ್ತದೆ ಎನ್ನುವನನ್ನು ತಂದು ಪ್ರಚಾರ ಪಡೆಯುವ ನಿಮ್ಮ ಈ ನಿರ್ಧಾರ ಅದೆಷ್ಟು ದೇಶ ಭಕ್ತರ ಮನಸ್ಸಿಗೆ ಘಾಸಿ ಮಾಡಬಹುದು ಎಂಬ ಸಣ್ಣ ಪರಿಜ್ಞಾನವೂ ಇಲ್ಲದೇ ಹೋಯಿತೇ?. ಇಂತಹ ದೇಶವಿರೋಧಿಯನ್ನು ಬೆಂಬಲಿಸುವ ಮೂಲಕ ಅದ್ಯಾವ ಸಾಧನೆಯನ್ನು ನೀವು ಮಾಡಲು ಹೊರಟಿದ್ದೀರಿ ಎಂಬ ಪ್ರಶ್ನೆಗೆ ಯಾವ ಉತ್ತರ ನೀಡುತ್ತೀರಿ?.
ಮತಕ್ಕಾಗಿ, ಅಧಿಕಾರಕ್ಕಾಗಿ ದೇವೇಗೌಡರು ಯಾವುದೇ ಸ್ಥಾನಕ್ಕೆ ಇಳಿಯುತ್ತಾರೆ ಎಂಬ ಮಾತಿಗೆ ನೀವು ಪ್ರೇರಣೆ ನೀಡುವುದು ಬೇಡ. ಮತಯಾಚಿಸಲು, ಮತದಾರರನ್ನು ಸೆಳೆಯಲು ಹಲವು ಮಾರ್ಗಗಳಿಗೆ ಅದೆಲ್ಲವನ್ನು ಬಿಟ್ಟು ದೇಶದ್ರೋಹಿಯನ್ನು ಕರೆಸಿ ಮತ ಬೇಡುವ ಹೀನ ಸ್ಥಿತಿಗೆ ಇಳಿಯಬೇಡಿ.. ದೇಶದ್ರೋಹಿಯನ್ನು ಬೆಂಬಲಿಸಲು ಅಲ್ಪಸಂಖ್ಯಾತರೇನು ಮಳ್ಳರಲ್ಲ.
Leave A Reply