ಆ ಉಗ್ರ ನಯೀಮ್ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ನಡೆಸುತ್ತಿದ್ದ ಅಂದ್ರೆ ನಂಬಲೇಬೇಕು…
ಪಟನಾ: ಇತ್ತೀಚೆಗೆ ಲಷ್ಕರೆ ತಯ್ಯಬಾ ಉಗ್ರ ಸಂಘಟನೆ ಜತೆ ನಂಟು ಹೊಂದಿದ ಆರೋಪ ಹಾಗೂ ಎರಡನೇ ಡೇವಿಡ್ ಹೇಡ್ಲಿ ಎಂದೇ ಖ್ಯಾತಿಯಾದ ಅಬ್ದುಲ್ ನಯೀಮ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ವಿಚಾರಣೆ ನಡೆಸಿದ್ದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಅಬ್ದುಲ್ ನಯೀಮ್ ಉಗ್ರ ಸಂಘಟನೆಯಲ್ಲಿ ತೊಡಗಲು ಹಾಗೂ ಈ ಕುರಿತು ಯಾರಿಗೂ ಅನುಮಾನ ಬಾರದಿರಲಿ ಎಂದು ಬಿಹಾರದ ಗೋಪಾಲ್ ಗಂಜ್ ನಲ್ಲಿ “ಸ್ಮಾರ್ಟ್ ಲರ್ನರ್” ಎಂಬ ಸ್ಪೋಕನ್ ಇಂಗ್ಲೀಷ್ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಎಂದು ಬಹಿರಂಗಪಡಿಸಿದ್ದಾನೆ.
ಮೊದಲು ಉದ್ಯಮ ಶುರುಮಾಡಲು ಗೋಪಾಲ್ ಗಂಜ್ ನಲ್ಲಿ ಸಂಸ್ಥೆಯೊಂದಕ್ಕೆ ಪಾಲುದಾರನಾಗಿ ಸೇರಿದ್ದು, ಬಳಿಕ ಸ್ವಂತ ಸಂಸ್ಥೆ ತೆರೆದಿದ್ದಾನೆ. ಸಂಸ್ಥೆಯ ಉದ್ಘಾಟನೆಗೆ ಅಧಿಕಾರಿಗಳನ್ನೇ ಆಹ್ವಾನಿಸಿದ್ದು, 2 ವರ್ಷದಿಂದ ಸಂಸ್ಥೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.
ಈ ಉಗ್ರ ಯಾವಾಗಲೂ ಗಣ್ಯ ವ್ಯಕ್ತಿಗಳು ಹಾಗೂ ಅಧಿಕಾರಿಗಳ ಜತೆ ಸಖ್ಯ ಬೆಳೆಸಿದ್ದು, ಅವರಿಂದ ಹೊರಬರುವ ಮಾಹಿತಿಯನ್ನು ಲಷ್ಕರೆ ತಯ್ಯಬಾ ಸಂಘಟನೆಗೆ ರವಾನಿಸುತ್ತಿದ್ದ ಎಂದು ಎನ್ಐಎ ಮೂಲಗಳಿಂದ ತಿಳಿದುಬಂದಿದೆ.
Leave A Reply