ಗುಜರಾತ್ ಚುನಾವಣೆ ಸುಳ್ಳು ಸುದ್ದಿ ಹರಡಿ ಸಿಕ್ಕಿಬಿದ್ದ ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ವಕ್ತಾರ
ದೆಹಲಿ: ನಾನು ಶಿವಭಕ್ತ, ನಾನು ಹಿಂದೂ, ಬಿಜೆಪಿ ಮತಯಂತ್ರಗಳನ್ನು ಹ್ಯಾಕ್ ಮಾಡುತ್ತಿದೆ ಸೇರಿ ಹಲವು ಸುಳ್ಳುಗಳನ್ನು ಹೇಳಿಯೂ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿರುವ ಕಾಂಗ್ರೆಸ್ ಇದೀಗ ಮತ್ತೊಂದು ಸುಳ್ಳು ಹೇಳಿ ಸಿಕ್ಕಿಬಿದ್ದಿದೆ. ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ರೋಹನ್ ಗುಪ್ತಾ ಗುಜರಾತ್ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಾಧಿಸಲಿದೆ. ಸುಮಾರು 65 ಸ್ಥಾನಗಳನ್ನು ಮೊದಲ ಹಂತದಲ್ಲಿ ಪಡೆಯಲಿದೆ ಎಂಬ ಸುಳ್ಳು ಸಮೀಕ್ಷೆಯನ್ನು ಟ್ವೀಟ್ ಮಾಡಿ, ಸಿಕ್ಕಿಬಿದ್ದಿದ್ದಾನೆ.
ಸಮೀಕ್ಷೆಯ ಸುಳ್ಳು ಸುದ್ದಿ ಪತ್ತೆ ಹಚ್ಚಿರುವ ಬಿಜೆಪಿ ವಕ್ತಾರ ಸುರೇಶ ನಕ್ವಾ ‘ಕಾಂಗ್ರೆಸ್ ಮುಖಂಡರು ಜನರನ್ನು ಸೆಳೆಯಲು ಹಲವು ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ.ಇದೀಗ ಕಾಂಗ್ರೆಸ್ ನ ರಾಷ್ಟ್ರೀಯ ಮಾಧ್ಯಮ ವಕ್ತಾರರೇ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಸಾಕ್ಷ್ಯ ಸಮೇತ ಆರೋಪ ಮಾಡಿದ್ದಾರೆ.
ಸೂಕ್ತ ದಾಖಲೆಯನ್ನು ಸಂಗ್ರಹಿಸಿರುವ ಸುರೇಶ ನಕ್ವಾ ಸಮೀಕ್ಷೆಯ ಮೂಲವನ್ನೇ ಪತ್ತೆ ಹಚ್ಚಿದ್ದಾರೆ. ಸಮೀಕ್ಷೆ ಗುಜರಾತ್ ಕಾಂಗ್ರೆಸ್ ಎಂಬ ವೆಬ್ ಸೈಟ್ ನಿಂದ ನಡೆದಿದೆ. ಇಡೀ ಸಮೀಕ್ಷೆ ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಗೆ ಲಿಂಕ್ ಇದೆ. ಅಲ್ಲದೇ ಸಮೀಕ್ಷೆ ಪ್ರಕ್ರಿಯೆ ಕಾಂಗ್ರೆಸ್ ಕಚೇರಿಯಲ್ಲೆ ನಡೆದಿದೆ ಎಂದು ತಿಳಿಸಿದ್ದಾರೆ. ಯಾವುದೋ ಸಮೀಕ್ಷೆಯನ್ನು ತಿರುಚು ಪ್ರಚಾರ ಪಡೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಅದಕ್ಕೆ ಇಂದು ಸಿಕ್ಕಿರುವ ರೋಹನ್ ಗುಪ್ತಾ ಅವರ ಟ್ವೀಟ್ ಸಾಕ್ಷಿ ಎಂದು ಹೇಳಿದ್ದಾರೆ.
Leave A Reply