ಮೋದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಕ್ಕೇ ಮಹಿಳೆಗೆ ತ್ರಿವಳಿ ತಲಾಖ್ ನೀಡುತ್ತಾರೆಂದರೆ…
ದೆಹಲಿ: ಒಂದೆಡೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ರೂಪಿಸಲು ಕರಡು ಸಿದ್ಧಪಡಿಸಿದ್ದರೆ, ಇನ್ನೊಂದೆಡೆ ಮುಸ್ಲಿಮರ ಉಪಟಳ ನಿಲ್ಲುತ್ತಿಲ್ಲ. ಮುಸ್ಲಿಂ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಪಾಲ್ಗೊಂಡು, ಅವರಿಗೆ ಧನ್ಯವಾದ ತಿಳಿಸಿಬಂದಿದ್ದಕ್ಕೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ.
ನನ್ನ ಗಂಡ ಮತ್ತೊಬ್ಬ ಮಹಿಳೆ ಜತೆ ಸಂಬಂಧ ಇಟ್ಟುಕೊಂಡಿದ್ದಾನೆ. ಆಕೆಗೊಂದು ಮಗು ಸಹ ಇದೆ. ಇದುವರೆಗೂ ವಿಚ್ಛೇದನ ನೀಡುವುದಾಗಿ ಹೆದರಿಸುತ್ತಿದ್ದ. ಈಗ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದಿದ್ದನ್ನೇ ನೆಪವಾಗಿಸಿಕೊಂಡು, ಮೋದಿಯವರೂ ನನಗೆ ಏನೂ ಮಾಡಲಾಗುವುದಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಫಾರ್ಯಾ ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ಮಹಿಳೆಯ ಪತಿ ದನಿಶ್ ತಿರಸ್ಕರಿಸಿದ್ದು, ನಾನು ಆಕೆಗೆ ತ್ರಿವಳಿ ತಲಾಖ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ನಾನು ಅವಳಿಗೆ ತ್ರಿವಳಿ ತಲಾಖ್. ಆದರೆ ಅವಳಿಗೆ ಅಕ್ರಮ ಸಂಬಂಧ ಇರುವುದರಿಂದ ವಿಚ್ಛೇದನ ನೀಡಿದ್ದೇನೆ. ಅವಳು ಜೀನ್ಸ್ ತೊಡುತ್ತಾಳೆ, ಅವಳ ಸಂಬಂಧಿಕರಿಂದ ನನಗೆ ಜೀವ ಬೆದರಿಕೆ ಇದೆ. ಮೋದಿ ರ್ಯಾಲಿಗೂ, ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾನೆ.
Leave A Reply