ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ಹಣ ಪಿಎಫ್ ಐ ಮೂಲಕ ಜಿಗ್ನೇಶ್ ಕರ್ನಾಟಕಕ್ಕೆ ತರುತ್ತಾರಾ?
ಗೌರಿ ಲಂಕೇಶ್ ಆಪ್ತರಾಗಿದ್ದ ಜಿಗ್ನೇಶ್ ಮೇವಾನಿ ಗುಜರಾತಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಮಾಧ್ಯಮದ ಮೂಲಕ ಎಲ್ಲರಿಗೂ ಗೊತ್ತಿರುವ ವಿಷಯ. ಉತ್ತರ ಗುಜರಾತಿನ ವಡಗಾಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಿಗ್ನೇಶ್ ಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಲ್ಲಿ ನಿಲ್ಲಿಸಿಲ್ಲ. ಈ ಮೂಲಕ ಬಹಿರಂಗವಾಗಿ ಜಿಗ್ನೇಶ್ ಅಭ್ಯರ್ಥಿತನವನ್ನು ಬೆಂಬಲಿಸಿದೆ. ಅದರೊಂದಿಗೆ ಆಮ್ ಆದ್ಮಿ ಪಕ್ಷ ಕೂಡ ತಾನು ಅಲ್ಲಿ ಅಭ್ಯರ್ಥಿಯನ್ನು ನಿಲ್ಲಿಸಲ್ಲ ಎಂದು ಹೇಳುವ ಮೂಲಕ ಜಿಗ್ನೇಶ್ ಗೆ ಬೆಂಬಲ ಘೋಷಿಸಿದೆ. ಜಿಗ್ನೆಶ್ ತಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸಾಮಾಜಿಕ ತಾಣಗಳ ಮೂಲಕ ಹೇಳಿಕೊಂಡಾಗ ಚುನಾವಣಾ ಫಂಡ್ ಎಲ್ಲಿಂದ ಒಟ್ಟುಮಾಡುತ್ತಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಅದಕ್ಕೆ ಕಳೆದ ವಾರ ಉತ್ತರ ಸಿಕ್ಕಿದೆ.
ಜಿಗ್ನೇಶ್ ಮೇವಾನಿ ಯಾರ ಆರ್ಥಿಕ ಬೆಂಬಲದೊಂದಿಗೆ ಚುನಾವಣೆಯ ಕಣದಲ್ಲಿ ಓಡಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ಫೋಟೋ ಸಹಿತ ಸುದ್ದಿ ಮಾಡಿದೆ. ಅದರಲ್ಲಿ ಭಾರತದ ದೇಶದ್ರೋಹಿ ಸಂಘಟನೆ ಎಂದೇ ಕುಖ್ಯಾತಿ ಪಡೆದಿರುವ ಪಿಎಫ್ ಐನ ನಾಯಕರೊಂದಿಗೆ ಜಿಗ್ನೇಶ್ ಮೇವಾನಿ ಆತ್ಮೀಯ ಸಂಬಂಧ ಇಟ್ಟುಕೊಂಡಿರುವುದು ಫೋಟೋ ಮೂಲಕ ಜಗಜಾಹೀರಗೊಂಡಿದೆ. ಜಿಗ್ನೇಶ್ ಮೇವಾನಿಗೆ ಚುನಾವಣೆಗೆ ಸ್ಪರ್ಧಿಸಲು ಪಿಎಫ್ ಐ ಆರ್ಥಿಕ ಸಹಾಯ ಮಾಡುತ್ತಿರುವ ಸ್ಫೋಟಕ ಸಂಗತಿಯನ್ನು ಆ ಮಾಧ್ಯಮ ಬಹಿರಂಗಗೊಳಿಸಿದೆ. ಪಿಎಫ್ ಐನ ಹಿಂದೆ ಪಾಕಿಸ್ತಾನದ ನಿಷೇಧಿತ ಸಂಘಟನೆಗಳ ಕರಿನೆರಳು ಇರುವುದನ್ನು ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಈ ಮೊದಲೇ ಕೇಂದ್ರ ಸರಕಾರಕ್ಕೆ ಮಾಹಿತಿ ಕೊಟ್ಟಿದೆ.
ಭಾರತದ ವಿರೋಧಿ ಸಂಘಟನೆಗಳೊಂದಿಗೆ ಜಿಗ್ನೇಶ್ ಕೈಜೋಡಿಸುವ ಮೂಲಕ ಏನನ್ನು ಸಾಧಿಸಲು ಹೊರಟಿದ್ದಾರೆ ಎನ್ನುವುದನ್ನು ಗುಜರಾತಿನ ಜನರೇ ನಿರ್ಧರಿಸಬೇಕು. ಇದೇ ಜಿಗ್ನೇಶ್ ಕಳೆದ ವರ್ಷ ಕರ್ನಾಟಕದ ಉಡುಪಿಗೂ ಬಂದಿದ್ದನ್ನು ಸ್ಮರಿಸಬಹುದು. ಪೇಜಾವರ ಶ್ರೀಗಳ ವಿರುದ್ಧ ಬಹಿರಂಗ ಭಾಷಣ ಮಾಡಿದ ಜಿಗ್ನೇಶ್ ಉಡುಪಿ ಚಲೋ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ. ಉಡುಪಿ ಶ್ರೀಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ಆವತ್ತು ಘೋಷಿಸಿದ್ದ. ಈತನೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮಾಧ್ಯಮ ಕಾರ್ಯದರ್ಶಿ ದಿನೇಶ್ ಅಮಿನಮಟ್ಟು ಕೂಡ ವೇದಿಕೆ ಹಂಚಿಕೊಂಡಿದ್ದರು. ಇಬ್ಬರದ್ದೂ ಒಂದೇ ರೀತಿಯ ಚಿಂತನೆಯಾಗಿದ್ದ ಕಾರಣ ಜಿಗ್ನೇಶ್ ಗೆ ದಿನೇಶ್ ಅಮೀನಮಟ್ಟು ಬೆಂಬಲ ಕೊಟ್ಟಿದ್ದು ಆಶ್ಚರ್ಯ ತಂದಿರಲಿಲ್ಲ. ಆದರೆ ಇತ್ತೀಚಿನ ಗುಜರಾತಿನಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸುವಾಗ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ನಿಷೇಧಿತ ಸಂಘಟನೆಗಳೊಂದಿಗೆ ಕೈಜೋಡಿಸಿದ್ದಾರೆ ಎನ್ನುವ ಆಘಾತಕಾರಿ ಸುದ್ದಿಯನ್ನು ಸ್ವತ: ಪ್ರಧಾನಮಂತ್ರಿಗಳು ಹೇಳಿದ್ದಾರೆ. ಇತ್ತ ಜಿಗ್ನೇಶ್ ಗೆಲುವಿಗೆ ಸಹಕಾರಿಯಾಗಲಿ ಎಂದು ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸದೇ ಇರುವುದು, ಜಿಗ್ನೇಶ್ ಪಿಎಫ್ ಐಯೊಂದಿಗೆ ಕೈ ಜೋಡಿಸಿರುವುದು, ಅಯ್ಯರ್ ಪಾಕಿಸ್ತಾನದ ನಾಯಕರೊಂದಿಗೆ ಮಾತುಕತೆ ನಡೆಸಿರುವುದು ನೋಡಿದರೆ ಜಿಗ್ನೇಶ್ ಗೂ, ಕಾಂಗ್ರೆಸ್ ಗೂ, ಪಿಎಫ್ ಐಗೂ, ಪಾಕಿಸ್ತಾನಿ ಸಂಘಟನೆಗೂ ಒಳಗೊಳಗೆ ಲಿಂಕ್ ಇರುವುದು ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಇಂತಹ ಜಿಗ್ನೇಶ್ ಮೇವಾನಿ ಗುಜರಾತಿನಲ್ಲಿ ಚುನಾವಣೆ ಮುಗಿದ ಬಳಿಕ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ನಡೆಸಿದರೆ ಆಶ್ಚರ್ಯವಿಲ್ಲ. ಈಗಾಗಲೇ ದಿನೇಶ್ ಅಮೀನಮಟ್ಟು ಅವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಜಿಗ್ನೇಶ್ ಕಾಂಗ್ರೆಸ್ಸ್ ತನಗೆ ಗುಜರಾತಿನಲ್ಲಿ ಮಾಡಿದ ಸಹಾಯಕ್ಕೆ ಋಣ ಸಲ್ಲಿಸಲು ಕರ್ನಾಟಕದಲ್ಲಿ ಅದರ ಪರ ಪ್ರಚಾರ ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರಗೆ ಬಂದಿದೆ. ಈ ಮೂಲಕ ಪಿಎಫ್ ಐ ಫಂಡ್ ಕೂಡ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರಕ್ಕೆ ಬಳಕೆಯಾಗುವ ಎಲ್ಲಾ ಸಾಧ್ಯತೆಗಳು ಸ್ಪಷ್ಟವಾಗಿದೆ. ಪಾಕಿಸ್ತಾನಿ ಸಂಘಟನೆಗಳ ಮತ್ತು ಪಿಎಫ್ ಐನ ಹಣ ಜಿಗ್ನೇಶ್ ಮೂಲಕ ದಿನೇಶ್ ಅಮೀನ್ ಮಟ್ಟು ಅವರ ಕೈ ಸೇರಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಬಳಕೆಯಾದರೆ ಅದಕ್ಕಿಂತ ದೊಡ್ಡ ಗಂಡಾಂತರ ಬೇರೆ ಇಲ್ಲ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.
Leave A Reply