ಪತ್ನಿಗೆ ತಲಾಖ್, ಪತ್ನಿ ತಂಗಿ ಜತೆ ಎಸ್ಕೇಪ್
ಲಖನೌ: ದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಮುಂದಾಗಿದ್ದರೂ, ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಪತ್ನಿಗೆ ತಲಾಖ್ ನೀಡಿದ್ದಾನೆ.
ಉತ್ತರ ಪ್ರದೇಶದ ಸಹರಾನ್ ಪುರ ಜಿಲ್ಲೆ ಜಿಠಾಣ್ ಪುರ ಕಾಲೋನಿಯಲ್ಲಿ ಪತ್ನಿಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದು, ಅವರು ನೀಡದ ಕಾರಣ ಪತ್ನಿಯ ತಂಗಿಯ ಜತೆಗೇ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ನೂರ್ ಜಹಾನ್ ಎಂಬ ಮಹಿಳೆ ಮೂರು ವರ್ಷದ ಹಿಂದೆ ಅರ್ಷದ್ ಅಹ್ಮದ್ ನನ್ನು ಮದುವೆಯಾಗಿದ್ದು, ಒಂದು ಹೆಣ್ಣು ಮಗು ಇದೆ.
ಮದುವೆಯಾದಾಗಿನಿಂದಲೂ ಗಂಡ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಿದ್ದ. ಮನೆಯವರು ಸಹ ಹಣ ನೀಡುತ್ತಿದ್ದರು. ಆದರೆ ಇದು ಇತ್ತೀಚೆಗೆ ಅತಿಯಾದ ಹಿನ್ನೆಲೆಯಲ್ಲಿ ಪೋಷಕರು ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡಿದ್ದ ಆತ ಒಮ್ಮೆ ನನ್ನನ್ನು ಕೊಲೆ ಮಾಡಲು ಸಹ ಮುಂದಾಗಿದ್ದ. ಈಗ ನನ್ನ ತಂಗಿಯ ಜತೆಗೆ ಪರಾರಿಯಾಗಿದ್ದಾನೆ ಎಂದು ನೂರ್ ಜಹಾನ್ ಪೊಲೀಸರಿಗೆ ದೂರು ನೀಡಿದ್ದಾರೆ.
Leave A Reply