ಗೋ ರಕ್ಷಣೆ ಚಳವಳಿ ಮುಸ್ಲಿಮರು, ಕ್ರಿಶ್ಚಿಯನ್ನರ ವಿರುದ್ಧವಲ್ಲ: ಆರ್ ಎಸ್ ಎಸ್
Posted On December 12, 2017
ಮೀರತ್: ದೇಶಾದ್ಯಂತ ನಡೆಯುತ್ತಿರುವ ಗೋ ರಕ್ಷಣೆ ಚಳವಳಿ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ್ ವಿರುದ್ಧ ಹೋರಾಟವಲ್ಲ. ವಿನಾಕಾರಣ ಗೋ ರಕ್ಷಣೆ ವಿಷಯಕ್ಕೆ ಕೋಮು ಬಣ್ಣ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.
ಗೋ ರಕ್ಷಣೆಯನ್ನು ತಪ್ಪಾಗಿ ಅರ್ಥೈಸಿಲಾಗಿದೆ. ಇದು ನೇರವಾಗಿ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ವಿರುದ್ಧ ನಡೆಯುತ್ತಿರುವ ಹೋರಾಟವಲ್ಲ ಎಂದು ಹೇಳಿದ್ದಾರೆ. ಗೋ ರಕ್ಷಣೆ ಹೋರಾಟಕ್ಕೆ ಕೋಮು ಬಣ್ಣ ಬಳಿಯುತ್ತಿರುವ ಕೆಲವು ವಿಕೃತ ಮನಸ್ಸುಗಳ ಕುರಿತು ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ಜಾತಿ, ಪ್ರದೇಶ, ಭಾಷೆ ಯಾವುದೂ ಕೂಡ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಆದರೆ ಆ ಹಲವು ಸಮಸ್ಯೆಗಲಿಗೆ ಹಿಂದೂತ್ವ ಪರಿಹಾರ ಒದಗಿಸುತ್ತದೆ. ಗೋ ರಕ್ಷಣೆಯ ಜತೆಗೆ ದೇಶದಲ್ಲಿರುವ ಹೆಣ್ಣು ಭ್ರೂಣ ಹತ್ಯೆ, ಅಸ್ಪೃಷ್ಯತೆ, ವರದಕ್ಷಿಣೆ, ಮಾಲಿನ್ಯವನ್ನು ತಡೆಯಲು ಶ್ರಮಿಸಬೇಕಿದೆ. ಎಲ್ಲವೂ ಕಾನೂನು, ಸರ್ಕಾರವೇ ನಿರ್ವಹಿಸಲು ಕಷ್ಟವಾಗುತ್ತದೆ. ಜನರೂ ಕೈಗೂಡಿಸಬೇಕು ಎಂದು ಹೇಳಿದ್ದಾರೆ.
- Advertisement -
Leave A Reply