ದೇಶದ ಆರ್ಥಿಕತೆ ಕುಗ್ಗಿತು ಎಂದವರಿಗೆ ಕಹಿ ಸುದ್ದಿ, ಏರಿಕೆ ಕಾಣಲಿದೆ ಜಿಡಿಪಿ ದರ!
ದೆಹಲಿ: ನೋಟು ನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಜಾರಿಯಿಂದ ದೇಶದ ಆರ್ಥಿಕತೆ ಕುಗ್ಗಿದೆ. ನೋಡಿ ಜಿಡಿಪಿ ದರ ಕುಸಿದಿದೆ. ಇದಕ್ಕೆಲ್ಲ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದವರಿಗೆ ಕಹಿ ಸುದ್ದಿಯೊಂದು ಅಪ್ಪಳಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ಭಾರತದ ಜಿಡಿಪಿ ದರದಲ್ಲಿ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಹೌದು, ವಿಶ್ವಸಂಸ್ಥೆಯ ವರದಿ ಪ್ರಕಾರ 2018ರಲ್ಲಿ ಭಾರತದ ಜಿಡಿಪಿ ದರ ಶೇ.7.2ಕ್ಕೆ ಹಾಗೂ 2019ರಲ್ಲಿ ಶೇ.7.4ಕ್ಕೆ ಏರಿಕೆಯಾಗಲಿದೆ ಎಂದು ತಿಳಿದುಬಂದಿದ್ದು, ದೇಶದ ಆರ್ಥಿಕ ಸ್ಥಿತಿಯಲ್ಲಿ ಭಾರಿ ಸುಧಾರಣೆಯಾಗಲಿದೆ ಎನ್ನಲಾಗುತ್ತಿದೆ.
ಖಾಸಗಿ ಸೇವೆಗಳ ಬಳಕೆ, ಸಾರ್ವಜನಿಕ ಹೂಡಿಕೆ ಹಾಗೂ ಭಾರತ ಹಲವು ಕ್ಷೇತ್ರಗಳಲ್ಲಿ ಕೈಗೊಂಡಿರುವ ರಚನಾತ್ಮಕ ಸುಧಾರಣೆಗಳ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ದರದಲ್ಲಿ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ವಿಭಾಗ (ಯುಎನ್ ಡಿಇಎಸ್ಎ) ಬಿಡುಗಡೆಗೊಳಿಸಿರುವ “ವಿಶ್ವ ಆರ್ಥಿಕ ಪರಿಸ್ಥಿತಿ ಹಾಗೂ ನಿರೀಕ್ಷೆ-2018” ಎಂಬ ವರದಿಯಲ್ಲಿ ಭಾರತದ ಜಿಡಿಪಿ ದರದ ಬೆಳವಣಿಗೆ ಬಗ್ಗೆ ಉಲ್ಲೇಖಿಸಲಾಗಿದೆ.
ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಪರಿಸ್ಥಿತಿ ಸಮತೋಲನ ಕಾಯ್ದುಕೊಳ್ಳಲಿದ್ದು, ಈ ಪ್ರದೇಶದ ರಾಷ್ಟ್ರಗಳಲ್ಲಿ ಭಾರತದ ಏರಿಕೆ ಪಾಲು ಗರಿಷ್ಠವಿರಲಿದೆ ಎಂದು ಸಹ ತಿಳಿಸಲಾಗಿದೆ. ಪ್ರಸ್ತುತ ಭಾರತದ ಜಿಡಿಪಿ ದರ ಶೇ.6.7ರಷ್ಟಿದೆ.
Leave A Reply