ರಾಮಸೇತು ಸುಳ್ಳು ಎನ್ನುವವರೇ ಕೇಳಿ ವಿಜ್ಞಾನದ ಆ ಚಾನೆಲ್ ಹೇಳಿದ ಸತ್ಯದ ಮಾತು..!

ದೆಹಲಿ: ಭಾರತ ಮತ್ತು ಶ್ರೀಲಂಕಾ ಮಧ್ಯೆ ಕೋಟ್ಯಂತರ ಭಾರತೀಯರ ಆರಾಧ್ಯ ದೈವ ಶ್ರೀರಾಮ ನಿರ್ಮಿಸಿದ ರಾಮಸೇತು ಸತ್ಯ ಎಂಬುದನ್ನು ವಿಜ್ಞಾನದ ಚಾನೆಲ್ ರಚಿಸಿರುವ ಸಾಕ್ಷ್ಯಚಿತ್ರದಲ್ಲಿ ಬಹಿರಂಗಪಡಿಸಿದೆ.
ಕೋಟ್ಯಂತರ ಭಾರತೀಯರ ಶ್ರದ್ಧಾಕೇಂದ್ರವಾಗಿರುವ ರಾಮಸೇತುವಿನ ಅಸ್ತಿತ್ವದ ಬಗ್ಗೆ ಇದ್ದ ಹಲವು ಅನುಮಾನಗಳನ್ನು ಸೈನ್ಸ್ ಚಾನೆಲ್ ಬಗೆಹರಿಸಿದೆ. ಅಮೆರಿಕ ಮೂಲದ ಡಿಸ್ಕವರಿ ಕಮ್ಯುನಿಕೇಷನ್ ನೆಟ್ ವರ್ಕ್ ನ ಈ ಸೈನ್ಸ್ ಚಾನೆಲ್ ಗೆ ಅಮೆರಿಕದ 75.48 ಲಕ್ಷ ಜನರು ಸಸ್ಕ್ರೈಬ್ ಆಗಿದ್ದಾರೆ.
ಅಮೆರಿಕದ ಸೈನ್ಸ್ ಚಾನೆಲ್ ‘ವಾಟ್ ಆನ್ ಅರ್ಥ್’ ಎಂಬ ಖ್ಯಾತ ಸಂಶೋಧಿತ ಕಾರ್ಯಕ್ರಮ ಪ್ರಸಾರ ಮಾಡುತ್ತದೆ. ಆ ಕಾರ್ಯಕ್ರಮದಲ್ಲಿ ಶ್ರೀಲಂಕಾ ಮತ್ತು ಭಾರತ ಮಧ್ಯೆ ಇರುವ ರಾಮಸೇತುವೆ ಬಗ್ಗೆ ಸಂಶೋಧನೆ ಮಾಡಿದ ಕಾರ್ಯಕ್ರಮ ಪ್ರಸಾರ ಮಾಡಿದೆ. ಅದರಲ್ಲಿ ರಾಮಸೇತು ನಿರ್ಮಿಸಿದ್ದು ಮನುಷ್ಯರೇ ಎಂಬುದನ್ನು ದಾಖಲೆ ಮತ್ತು ಪ್ರಬಲ ವಾದಗಳ ಮೂಲಕ ಮಂಡಿಸಿದೆ.
ರಾಮಸೇತು ನಿರ್ಮಾಣಕ್ಕೆ ಕಲ್ಲು ಜೋಡಿಸಿರುವುದನ್ನು ನಾಸಾ ಸ್ಯಾಟ್ ಲೈಟ್ ತೆಗೆದ ಚಿತ್ರಗಳನ್ನು ವಿಶ್ಲೇಷಿಸಿದೆ. ಸಮುದ್ರಶಾಸ್ತ್ರಜ್ಞರ ಪ್ರಕಾರ ಸೇತುವೆಗೆ ಆಳವಿಲ್ಲದಿದ್ದಾಗ, ಮರುಳಿನ ಮೇಲೆ ಕಲ್ಲುಗಳನ್ನು ಜೋಡಿಸಲಾಗಿದೆ. ಅಲ್ಲದೇ ಕಲ್ಲುಗಳು ಮರುಳಿನ ಮೇಲೆ ಉಳಿದುಕೊಳ್ಳುವಂತೆ ನಿರ್ಮಿಸಲಾಗಿದೆ. ಇಂತಹ ನಿರ್ಮಾಣ ನೈಸರ್ಗಿಕವಾಗಿ ಆಗಿರಲು ಸಾಧ್ಯವೇ ಇಲ್ಲ. ಇದು ಮನುಷ್ಯರೇ ನಿರ್ಮಿಸಿದ್ದು ಎಂದು ಸೈನ್ಸ್ ಚಾನೆಲ್ ತಾನು ರಚಿಸಿರುವ ಸಾಕ್ಷ್ಯ ಚಿತ್ರದಲ್ಲಿ ವಿಶ್ಲೇಷಿಸಿದೆ.
ಸೈನ್ಸ್ ಚಾನೆಲ್ ತನ್ನ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿದ್ದು, ಅದಕ್ಕೆ ಭಾರಿ ಪ್ರಕ್ರಿಯೆಗಳು ಮತ್ತು ಕೋಟ್ಯಂತರ ಷೇರ್ ಗಳು ಆಗಿದ್ದು, ರಾಮಭಕ್ತರಿಗೆ ಮತ್ತು ಹಿಂದೂಗಳಿಗೆ ಭಾರಿ ಖುಷಿ ನೀಡಿದೆ.
https://twitter.com/ScienceChannel/status/940259901166600194