ರಮಾನಾಥ ರೈ ಬಂಡವಾಳ ಬಯಲು, ಶಾಲೆ ಮಕ್ಕಳ ಅನ್ನ ಕಸಿದುಕೊಂಡಿದ್ದು ಸಾಬೀತು
ಮಂಗಳೂರು: ಡಾ.ಕಲಡ್ಕ ಪ್ರಭಾಕರ ಭಟ್ಟರ ನೇತೃತ್ವದ ಶಾಲೆಗಳಿಗೆ ಕೊಲ್ಲುರು ದೇವಳದಿಂದ ನೀಡುತ್ತಿದ್ದ ಅನ್ನದಾನ ಕಸಿದುಕೊಂಡ ರಮಾನಾಥ ರೈಮುಖವಾಡ ಇದೀಗ ಬಯಲಾಗಿದೆ. ಅನ್ನ ಸ್ಥಗಿತಗೊಳಿಸುವಲ್ಲಿ ನನ್ನ ಪಾತ್ರ ಏನು ಇಲ್ಲ ಎಂದು ಮಾಧ್ಯಮಗಳ ಎದುರು ಗೋಸುಂಬೆಯಂತೆ ನಟಿಸಿದ್ದ ರಮಾನಾಥ ರೈ ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಬಿಜೆಪಿ ಬಹಿರಂಗಪಡಿಸಿದೆ.’
ಕಲಡ್ಕ ಪ್ರಭಾಕರ ಭಟ್ಟರ ಶಾಲೆಗಳಿಗೆ ಕೊಲ್ಲೂರು ದೇವಳದಿಂದ ನೀಡುತ್ತಿದ್ದ ಅನ್ನದಾನವನ್ನು ಸ್ಥಗಿತಗೊಳಿಸಿ ಎಂದು ಸಚಿವ ರಮಾನಾಥ ರೈ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ಸರ್ಕಾರ ಅನ್ನದಾನವನ್ನು ನಿಲ್ಲಿಸಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಬಹಿರಂಗಪಡಿಸಿದ್ದಾರೆ.
ರಮಾನಾಥ ರೈ ಕಲಡ್ಕದಲ್ಲಿ ಪ್ರಭಾಕರ ಭಟ್ಟರ ಶಕ್ತಿಯನ್ನು ಕುಂದಿಸಲು ಸಚಿವರೈ ಅವರ ಶಾಲೆಗಳಿಗೆ ಹಣಕಾಸಿನ ನೆರವು ಸ್ಥಗಿತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹರಿಕೃಷ್ಣ ಆರೋಪಿಸಿದ್ದಾರೆ.
ಶಾಲೆಗಳಿಗೆ ಹಣಕಾಸಿನ ನೆರುವ ಸ್ಥಗಿತಗೊಳಿಸಿದಕ್ಕೆ ರಾಜ್ಯಾಧ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ವಿರುದ್ಧ ಶಾಲೆ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮಕ್ಕಳ ಅನ್ನಕ್ಕಾಗಿ ಭೀಕ್ಷಾಂದೇಹಿ ಚಳವಳಿ ಹಮ್ಮಿಕೊಂಡು ಅಕ್ಕಿ, ಹಣವನ್ನು ಸಂಗ್ರಹಿಸಿ ಸರ್ಕಾರದ ನೆರವು ಇಲ್ಲದೆಯೂ ಶಾಲೆ ನಡೆಸಬಲ್ಲೆವು ಎಂಬ ಸಂದೇಶವನ್ನು ನೀಡಲಾಗಿತ್ತು. ಇದೀಗ ರಮಾನಾಥ ರೈ ಕಲಡ್ಕ ಪ್ರಭಾಕರ ಭಟ್ಟರ ವಿರುದ್ಧ ನಡೆಸಿದ ಷಡ್ಯಂತ್ರ ಬಯಲಾಗಿದೆ.
Leave A Reply