ಚುನಾವಣೆ ಹಿನ್ನೆಲೆ ರಾಹುಲ್ ಗಾಂಧಿ ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ ಗೊತ್ತಾ?

ಗಾಂಧಿನಗರ: ರಾಮ, ರಾಮಸೇತು, ಕೃಷ್ಣನ ಅಸ್ತಿತ್ವವನ್ನೇ ಪ್ರಶ್ನಿಸಿತ್ತು ಕಾಂಗ್ರೆಸ್. ಆದರೆ ಗುಜರಾತ್ ವಿಧಾನಸಭೆ ಚುನಾವಣೆ ಕಾಂಗ್ರೆಸ್ಸನ್ನೂ ಹಿಂದೂ ಪರವನ್ನಾಗಿ ಮಾಡಿಸಿತು. ಅದಕ್ಕೆ ದ್ಯೋತಕವಾಗಿ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿ ಅವರು ಚುನಾವಣೆ ಸಮೀಪಿಸುತ್ತಲೇ ದೇವಾಲಯಗಳಿಗೆ ಭೇಟಿ ನೀಡಲು ಆರಂಭಿಸಿದರು. ಆ ಮೂಲಕ ತಾವೂ ಹಿಂದೂಪರ, ತಮಗೂ ದೇವರಲ್ಲಿ ನಂಬಿಕೆ ಇದೆ ಎಂಬುದನ್ನು ತೋರಿಸಿ ಚುನಾವಣೆಯ ಪ್ರಚಾರದ ಭಾಗವನ್ನಾಗಿ ಭೇಟಿಗಳನ್ನು ಉಪಯೋಗಿಸಿಕೊಂಡು.
ಅತ್ತ ನರೇಂದ್ರ ಮೋದಿ ಅವರು ಸಹ ಚುನಾವಣೆ ಭಾಗವಾಗಿ ಸಾಲು ಸಾಲು ರ್ಯಾಲಿಗಳನ್ನು ಮಾಡಿ ಅಭಿವೃದ್ಧಿ ಮಂತ್ರ ಪಠಿಸಿದರು. ಮೋದಿ 34 ರ್ಯಾಲಿಗಳಲ್ಲಿ ಭಾಗಿಯಾದರೆ, ರಾಹುಲ್ ಗಾಂಧಿ 30 ರ್ಯಾಲಿ ಏರ್ಪಡಿಸಿದರು. ಆದರೆ ರಾಹುಲ್ ಗಾಂಧಿ ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದರು ಗೊತ್ತಾ? ಹೌದು, ರಾಹುಲ್ ರ್ಯಾಲಿಯ ಬಹುತೇಕ ಅರ್ಧದಷ್ಟು, ಅಂದರೆ, ಬರೋಬ್ಬರಿ 12 ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅವು ಯಾವವು? ಇಲ್ಲಿದೆ ನೋಡಿ ಪಟ್ಟಿ.
* ನವೆಂಬರ್ 02 – ಉನಾಯಿ ಮಟ ದೇವಾಲಯ (ನವಸಾರಿ)
* ನ.11 – ಅಂಬಾಜಿ ದೇವಾಲಯ (ಬನಾಸ್ ಕಾಂತ)
* ನ. 12 – ವಾದಿನಾಥ್ ದೇವಸ್ಥಾನ (ಥಾರಾ)
* ನ.13 – ವೀರ್ ಮೇಘಮಯ (ಪಠಾಣ್), ಶಂಕೇಶ್ವರ್ ಜೈನ್ ದೇವಾಲಯ (ಪಠಾಣ್), ಬಹುಚರಜಿ ದೇವಸ್ಥಾನ (ಮೆಹ್ಸಾನ)
* ನ.29 – ಸೋಮನಾಥ ದೇವಾಲಯ
* ನ. 30 – ಗೋಪಿನಾಥಜೀ ಮಂದಿರ (ಬೊಟಾಡ್)
* ಡಿಸೆಂಬರ್ 8 – ಮೊಘಲ್ ಧಾಮ್ ಮಂದಿರ (ರಣೇಸಾರ್)
* ಡಿ. 10 – ರಾಂಚೋಡ್ ಜೀ (ಖೇಡಾ), ಶಾಮ್ಲಾಜಿ ದೇವಾಲಯ (ಅರವಳಿ)
* ಡಿ.12 – ಲಾರ್ಡ್ ಜಗನ್ನಾಥ್ ಜೀ ದೇವಸ್ಥಾನ (ಅಹಮದಾಬಾದ್)
Leave A Reply