ಮಂಗಳೂರು ವಿವಿಯ ಹಣಕಾಸು ಅಧಿಕಾರಿಗಳಿಗೆ ಹೃದಯಾಘಾತ ಯಾಕಾಗುತ್ತದೆ?
ಮಂಗಳೂರು ವಿಶ್ವವಿದ್ಯಾನಿಲಯದ ಕೋಟ್ಯಾಂತರ ರೂಪಾಯಿ ಹಣಕಾಸು ಅವ್ಯವಹಾರಗಳ ಬಗ್ಗೆ ತುಳುನಾಡು ನ್ಯೂಸ್ ಹಿಂದಿನಿಂದಲೂ ವಸ್ತುನಿಷ್ಟ ವರದಿ ಮಾಡಿದೆ. ಯಾವುದೇ ಅವ್ಯವಹಾರ ಕೂಡ ಆ ಸಂಸ್ಥೆಯ ಹಣಕಾಸು ಅಧಿಕಾರಿಗಳ ಸಹಕಾರವಿಲ್ಲದೆ ಆಗುವುದಿಲ್ಲ. ಇಲ್ಲಿ ಕೂಡ ಹಾಗೆ ಆಗಿದೆ. ಆದರೆ ಮಂಗಳೂರು ವಿವಿಯಲ್ಲಿ ಕುಲಪತಿ ಭೈರಪ್ಪನವರು ತಮಗೆ ಬೇಕಾದವರನ್ನು, ಅರ್ಥಾಥ್ ತಾನು ಕೈಯಿಟ್ಟಲ್ಲಿಗೆ ಸಹಿ ಹಾಕುವವರನ್ನು ಹಣಕಾಸು ಅಧಿಕಾರಿಯನ್ನಾಗಿ ನೇಮಿಸಲು ಸರಕಾರದ ಮೇಲೆ ಒತ್ತಡ ಮತ್ತು ಹಿರಿಯ ಅಧಿಕಾರಿಗಳಿಗೆ ಲಂಚ ಪ್ರಸಾದ ನೀಡುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದ ಪ್ರತಿಬಾರಿ ಭೈರಪ್ಪನವರು ಬಯಸಿದವರೇ ಹಣಕಾಸು ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಭೈರಪ್ಪ ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿ ವಿವಿಗೆ ಹಣಕಾಸು ಅಧಿಕಾರಿಯಾಗಿ ನೇಮಕವಾದವರು ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಾಗಿದ್ದ ಶಾನಾಡಿ ಅಜಿತ್ ಕುಮಾರ್ ರೈಯವರು. ಆದರೆ ಶಾನಾಡಿ ಹಣಕಾಸು ಅಧಿಕಾರಿಯಾಗಿ ಇದ್ದರೆ ತಮಗೆ ತಿನ್ನಲು ಏನು ಸಿಗುವುದಿಲ್ಲ, ಅವರು ಅಧಿಕಾರದಲ್ಲಿ ಇದ್ದಷ್ಟು ದಿನ ಉಪವಾಸವೇ ಗತಿ ಎಂದುಕೊಂಡ ಭೈರಪ್ಪನವರು , ಅಜಿತ್ ಕುಮಾರ್ ರೈಯವರು ಅಧಿಕಾರ ವಹಿಸಿಕೊಳ್ಳಲು ಬಂದ ದಿನ ಅವರ ಕೈಗೆ ಜಾರ್ಜ್ ಕೊಡುವುದನ್ನು ತಪ್ಪಿಸಲು ಭೂಗತರಾಗಿ ಹೋಗಿದ್ದರು. ಆವತ್ತು ಬೆಂಗಳೂರಿಗೆ ಹೋಗಿ ಆ ಆದೇಶವನ್ನು ಬದಲಾಯಿಸಿ ಸಾಧು ಸ್ವಭಾವದ ಪಿ ಎ ರೇಗೋ ಅವರನ್ನು ಅಧಿಕಾರಿಯನ್ನಾಗಿ ನೇಮಿಸಿಕೊಂಡು ಬಂದರು. ಅನಂತರ ಎಗ್ಗಿಲ್ಲದೆ ಹಣಕಾಸು ಅವ್ಯವಹಾರಗಳನ್ನು ನಡೆಸಿಕೊಂಡು ಬಂದರು. ದಾಕ್ಷಿಣ್ಯ ಸ್ವಭಾವದ ರೇಗೋ ಅವರು ಕುಲಪತಿ ತೋರಿಸಿದ ಕಡೆ ಎಲ್ಲಾ ಸಹಿ ಹಾಕಿಕೊಂಡು ಬಂದರು. ಆದರೆ ಒಳಗೊಳಗೆ ಪ್ರತಿ ಬಾರಿ ತಾವು ಸಹಿ ಹಾಕಿದ ನಂತರ ಸಾಕಷ್ಟು ನೊಂದು ಕೊಳ್ಳುತ್ತಿದ್ದರು. ಸಜ್ಜನ ರೇಗೋ ಅವರಿಗೆ ತಾನು ಮಾಡುತ್ತಿದ್ದ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇತ್ತು. ಆದರೆ ತಲೆ ಮೇಲೆ ಕೂತ ಬ್ರಹ್ಮರಾಕ್ಷಸನ ಹಸಿವು ಮಾತ್ರ ನೀಗಿರಲಿಲ್ಲ. ಒತ್ತಡ ಹೇರಿ ಬೈದು ಅವ್ಯವಹಾರಗಳನ್ನು ಮಾಡಿಸಿದರು. ಈ ನೋವು, ಒತ್ತಡದಿಂದ ಹಣಕಾಸು ಅಧಿಕಾರಿಯಾಗಿದ್ದ ಸಂದರ್ಭದಲ್ಲಿಯೇ ಹೃದಯಾಘಾತದಿಂದ ಪಿಎ ರೇಗೋ ಅಸುನೀಗಿದರು. ಭೈರಪ್ಪನವರ ಉಪಟಳವಿಲ್ಲದಿದ್ದರೆ ಎಲ್ಲರ ಪ್ರೀತಿಯ ಅರ್ಥಶಾಸ್ತ್ರಜ್ಞ, ಅರ್ಥಶಾಸ್ತ್ರ ವಿಭಾಗದ ಪ್ರಧ್ಯಾಪಕ ರೇಗೋ ಒಂದಿಷ್ಟು ವರ್ಷ ಹೆಚ್ಚು ಬದುಕುತ್ತಿದ್ದರು. ಆದರೆ ಈ ಸಾವು ವ್ಯವಸ್ಥಿತವಾಗಿ ಎಲ್ಲಿಯೂ ಸುದ್ದಿಯಾಗದಂತೆ ನೋಡಿಕೊಳ್ಳಲಾಯಿತು.
ಹೀಗೆ ಹೃದಯಾಘಾತವಾದ ಮತ್ತೊಬ್ಬ ವ್ಯಕ್ತಿ ಭೈರಪ್ಪನವರ ಆಪ್ತ ಕಾರ್ಯದರ್ಶಿ ಪರಮೇಶ್ವರ್. ವಾಣಿಜ್ಯ ಶಾಸ್ತ್ರದ ಅಧ್ಯಾಪಕರಾಗಿದ್ದ ಪರಮೇಶ್ವರ್ ಅವರು ತಮ್ಮ ಪಾಡಿಗೆ ತಾವಿದ್ದಾಗ ಅವರನ್ನು ಕರೆತಂದು ತನ್ನ ವಿಶೇಷಾಧಿಕಾರಿಯನ್ನಾಗಿ ನೇಮಿಸಿಕೊಂಡರು. ಭೈರಪ್ಪನವರ ಒತ್ತಡ ತಾಳಲಾರದೇ ಪ್ರಾಮಾಣಿಕರಾಗಿದ್ದ ಯುವಕ ಪರಮೇಶ್ವರ್ ಅವರಿಗೂ ಹೃದಯಾಘಾತವಾಯಿತು. ಆದರೆ ದೇವರ ದಯೆಯಿಂದ ಆಂಜಿಯೋಗ್ರಾಮ್ ಆಗಿ ಅವರು ಬದುಕುಳಿದರು. ಅದೃಷ್ಟ ಒಳ್ಳೆಯದಿತ್ತು, ಅದೇ ನೆಪವಾಗಿಸಿಕೊಂಡು ಆ ಜವಾಬ್ದಾರಿಯಿಂದ ಮುಕ್ತರಾದರು. ಅದರ ಹಿಂದೆ ಓರ್ವ ಮಹಿಳಾ ವಿಶೇಷಾಧಿಕಾರಿ ಭೈರಪ್ಪನವರಿಗೆ ಎಲ್ಲಾ ವಿಧದಲ್ಲಿಯೂ ಹೊಂದಿಕೊಂಡು ಕೆಲಸ ಮಾಡಿದರು. ಪಿಎ ರೇಗೋ ತೀರಿಕೊಂಡ ಮೇಲೆ ಭೈರಪ್ಪನವರು ತಮಗೆ ಹೊಂದಿಕೆಯಾಗುವ ಹಣಕಾಸು ಅಧಿಕಾರಿ ಯಾರಾಗಬಹುದು ಎಂದು ಯೋಚಿಸಲು ಆರಂಭಿಸಿದರು. ಅದರ ಬಳಿಕ ಪ್ರಾರಂಭವಾದದ್ದೇ ಜಾತಿ ರಾಜಕಾರಣ. ಅದಕ್ಕೆ ಮೂಲ ಭೈರಪ್ಪನವರು ಕಲಿತ ಮಾನಸ ಗಂಗೋತ್ರಿ.
Leave A Reply