ವಂದೇ ಮಾತರಂ ಗೀತೆಗೆ ಮೊಳಗಿದರೆ ಎದ್ದು ನಿಲ್ಲದ ಬಿಎಸ್ ಪಿ ಮೇಯರ್ ಗೆ ಏನೆನ್ನಬೇಕು?
ಲಖನೌ: ಕಳೆದ ವಾರವಷ್ಟೇ ಮೀರತ್ ನಗರ ಪಾಲಿಕೆಯಲ್ಲಿ ವಂದೇಮಾತರಂ ಕಡ್ಡಾಯ ನಿರ್ಧಾರ ರದ್ದುಗೊಳಿಸಿ ಉದ್ಧಟತನ ಮೆರೆದಿದ್ದ ನೂತನ ಮೇಯರ್ ಸುನಿತಾ ವರ್ಮಾ ಮತ್ತೊಂದು ಉದ್ಧಟತನ ಮಾಡಿದ್ದು, ಕೌನ್ಸಿಲ್ ಸಭೆಯಲ್ಲಿ ವಂದೇಮಾತರಂ ಮೊಳಗಿದರೂ ಎದ್ದು ನಿಲ್ಲಲು ನಿರಾಕರಿಸಿದ್ದಾರೆ.
ಮೀರತ್ ಮುನ್ಸಿಪಲ್ ಕಾರ್ಪೋರೇಷನ್ ಸಭೆ ವೇಳೆ ವಂದೇ ಮಾತರಂಗೆ ಎದ್ದು ನಿಂತು ಗೌರವ ಸಲ್ಲಿಸಲು ನಿರಾಕರಿಸಿದ ಬಿಎಸ್ ಪಿ ಮೇಯರ್ ವಿರುದ್ಧ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ವಂದೇ ಮಾತರಂ ಹಾಡುವಾಗ ನಿಲ್ಲದ್ದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ, “ನೀವು ಅಭಿವೃದ್ಧಿ ಕುರಿತು ಮಾತನಾಡಿ. ಸುಮ್ಮನೆ ವಿವಾದ ಸೃಷ್ಟಿಸಿ ನನ್ನ ಗಮನ ಬೇರೆಡೆ ಹರಿಸುವಂತೆ ಮಾಡಬೇಡಿ” ಎಂದು ಬೇಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದಾರೆ.
ಬಿಜೆಪಿಯ ಹರಿಕಾಂತ್ ಅಹ್ಲುವಾಲಿಯಾ ಅವರು ಮೇಯರ್ ಆಗಿದ್ದಾಗ, ನಗರ ಪಾಲಿಕೆ ಸಭೆಯಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿದ್ದರು. ಆದರೆ ಸುನಿತಾ ವರ್ಮಾ ಅಧಿಕಾರಕ್ಕೆ ಬರುತ್ತಲೇ ಇದನ್ನು ರದ್ದುಗೊಳಿಸಿದ್ದರು. ಆದರೂ ವಂದೇ ಮಾತರಂ ಹಾಡಲಾಗಿದ್ದು, ಎದ್ದು ನಿಲ್ಲದೆ ವಿರೋಧ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ನಿರ್ಧಾರ ರದ್ದುಗೊಳಿಸಿದ್ದ ಬಳಿಕ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ತಾಯಿಗೆ ವಂದನೆ ಸಲ್ಲಿಸದೆ ಅಫ್ಜಲ್ ಗುರುವಿಗೆ ವಂದನೆ ಸಲ್ಲಿಸುತ್ತೀರಾ?” ಎಂದು ತರಾಟೆಗೆ ತೆಗೆದುಕೊಂಡಿದ್ದರು.
Leave A Reply