ಇಸ್ಲಾಂ ಜಗತ್ತಿನ ದೌರ್ಬಲ್ಯವೇ ಕ್ರೌರ್ಯ!
ಎಲ್ಲಾ ಜಾಗತಿಕ ಸಂಘಟನೆಗಳೂ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವುದು. ಹೆಚ್ಚು ಹೆಚ್ಚು ಜನರ ಕತ್ತು ಕೊಯ್ದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳ ಮೂಲಕ ಹರಿದಾಡಿಸಿದರೆ ಸಂಘಟನೆಯನ್ನು ಅಪ್ಪುವ ಜನ ಮತ್ತು ಸಂಗ್ರಹವಾಗುವ ನಿಧಿಯ ಪ್ರಮಾಣ ಹೆಚ್ಚುತ್ತಾ ಸಾಗುವುದು. ಈ ದುರಹಂಕಾರ ಎಷ್ಟರ ಮಟ್ಟಿಗೆ ಬೆಳೆಯುತ್ತದೆಯೆಂದರೆ ಕಟ್ಟರ್ ಪಂಥಿ ಇಸ್ಲಾಂ ತಮ್ಮದೇ ಎನ್ನುತ್ತ ಉಳಿದವರನ್ನೆಲ್ಲ ಧಿಕ್ಕರಿಸಿ ಬಿಡುತ್ತವೆ.
ಇಸ್ರೇಲಿನಲ್ಲಿ ಬೆಂಜಮಿನ್ ನೆತನ್ಯಾಹು, ರಷ್ಯಾದಲ್ಲಿ ವ್ಲಾದಿಮಿರ್ ಪುತಿನ್, ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಭಾರತದಲ್ಲಿ ನರೇಂದ್ರ ಮೋದಿ ಬಹುಶಃ ಜಗತ್ತು ಹಿಂದೆಂದೂ ಇಂತಹುದೊಂದು ವಿಶ್ವವನ್ನು ನಿಮರ್ಾಣ ಮಾಡುವ ಆಕಾಂಕ್ಷೆಯುಳ್ಳ ರಾಷ್ಟ್ರಭಕ್ತ ಮುಖ್ಯಸ್ಥರ ತಂಡವೊಂದನ್ನು ಕಂಡಿರಲಿಕ್ಕಿಲ್ಲ. ಇದೊಂದು ಪರ್ವಕಾಲ. ಜಾಗತಿಕ ನೆಮ್ಮದಿಯ ತುಡಿತ ಇರದೇ ತಮ್ಮ ಸಾರ್ವಭೌಮತೆಯನ್ನಷ್ಟೇ ಆಲೋಚಿಸುವ ಚೀನಾದಂತಹ ರಾಷ್ಟ್ರಗಳೆಲ್ಲ ಓಟದಲ್ಲಿ ಹಿಂದುಳಿದಾಗಿದೆ. ಇದೊಂದು ಬಗೆಯ ಜಗತ್ತಿನ ನಿಮರ್ಾಣದ ಉತ್ಕರ್ಷ ಯುಗ. ಹೀಗೆ ಹೇಳಲಿಕ್ಕೆ ಕಾರಣ ಇದೆ. ಇಸ್ರೇಲ್ ಮತಾಂಧತೆಯ ವಿರುದ್ಧ ಹಿಂದಿನಿಂದಲೂ ಹೋರಾಟ ನಡೆಸಿತ್ತು. ಮುಲಾಜಿಲ್ಲದೇ ಜಗತ್ತಿನ ನೆಮ್ಮದಿ ಹಾಳು ಮಾಡುವವರನ್ನು ಹೊಸಕಿ ಹಾಕಿತ್ತು. ರಷ್ಯಾ ಕೂಡ ಪುತಿನ್ ನೇತೃತ್ವದಲ್ಲಿ ಆಕ್ರಮಣಕಾರಿ ನೀತಿಗೆ ಶರಣಾಗಿತ್ತು. ಮೋದಿ ಭಾರತದಲ್ಲಿ ಪ್ರಧಾನ ಸೇವಕರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದನೆಗಳ ಮಾತನಾಡುತ್ತಿದ್ದ ಒಬಾಮಾನ ಭೂತ ಬಿಡಿಸಿದ್ದರು. ಅದಕ್ಕೆ ಸರಿಯಾಗಿ ಆತ ಅಧಿಕಾರ ಕಳಕೊಂಡು ಟ್ರಂಪ್ ನೇತೃತ್ವ ವಹಿಸಿದ ನಂತರ ಜಾಗತಿಕ ನೀತಿಗಳು ಬದಲಾಗುತ್ತಿವೆ. ಇದುವರೆಗೂ ನಂಬಿಕೊಂಡಿದ್ದೆಲ್ಲ ಈಗ ಸತ್ಯವಲ್ಲ ಎಂಬುದು ಅರಿವಾಗುತ್ತಿದೆ.
ಮೂರು ವರ್ಷಗಳ ಹಿಂದೆ ಇರಾಕಿನ ಮೊಸೂಲ್ನ ಅತ್ಯಂತ ಪ್ರಾಚೀನ ಅಲ್ನೂರಿ ಮಸೀದಿಯನ್ನು ತೆಕ್ಕೆಗೆ ತೆಗೆದುಕೊಂಡ ಐಸಿಸ್ನ ಮುಖ್ಯಸ್ಥ ಅಬೂಬಕ್ರ್ ಅಲ್ ಬಗ್ದಾದಿ ತನ್ನನ್ನು ತಾನು ಖಲೀಫಾ ಎಂದು ಘೋಷಿಸಿಕೊಂಡು ಇಸ್ಲಾಮಿಕ್ ಸ್ಟೇಟ್ನ ಅಧಿಕೃತ ಘೋಷಣೆ ಮಾಡಿದ. ಅಲ್ಲಿಯವರೆಗೂ ಅಲ್ಕಾಯಿದಾ, ತಾಲಿಬಾನ್ಗಳು ಜಗತ್ತಿನ ಕುತ್ತಿಗೆಯ ಮೇಲೆ ಚೂರಿ ಇಟ್ಟು ತಮ್ಮ ಭಯದ ಬಾವುಟ ಹಾರಿಸಿ ಅನ್ನ ಗಳಿಸುತ್ತಿದ್ದವು. ಆನಂತರ ಆ ಜಾಗದಲ್ಲಿ ಐಸಿಸ್ ಬಂತು ಕುಳಿತಿತು. ಜಗತ್ತಿನ ಮೂಲೆ ಮೂಲೆಯ ಮುಸಲ್ಮಾನರು ರೋಮಾಂಚಿತರಾದರು. ಇಸ್ಲಾಂನ ಧ್ವಜ ಜಗತ್ತಿನಲ್ಲೆಲ್ಲಾ ಹಾರಾಡುವಂತೆ ಮಾಡಲು ಭಗವಂತನೇ ಕಳಿಸಿದ ಸೇನೆಯಿದು ಎಂದು ನಂಬಿಬಿಟ್ಟರು. ಈ ನಂಬಿಕೆ ಅವರಿಗೆ ಹಿಂದೆ ಅಲ್ಕಾಯಿದಾ ಮೇಲೂ ಇತ್ತು; ತಾಲೀಬಾನ್ ಮೇಲೂ ಇತ್ತು. ಒಸಾಮಾ ಬಿನ್ ಲಾಡೆನ್ ಭಗವಂತನ ಸೇನೆಯ ಸೇನಾಧಿಪತಿ ಎಂದೇ ಭಾವಿಸಿದ್ದವರಿದ್ದರು. ಅಮೇರಿಕಾ ಅವನನ್ನು ಅವನ ಮನೆಗೆ ನುಗ್ಗಿ ಹೊಡೆದು ಬಿಸಾಡಿದ ಮೇಲೆ ಅನೇಕರಿಗೆ ಭ್ರಮನಿರಸನ ಉಂಟಾಗಿತ್ತು. ಅವರೆಲ್ಲರ ಉತ್ಸಾಹಕ್ಕೆ ಮತ್ತೆ ಆವೇಗ ತಂದುಕೊಟ್ಟವ ಈ ಅಬೂಬಕ್ರ್ ಅಲ್ ಬಗ್ದಾದಿ. ಕೆಲವೇ ದಿನಗಳಲ್ಲಿ ಐಸಿಸ್ ತನ್ನ ಕಾರ್ಯದಿಂದಲೇ ಸ್ವಧಮರ್ೀಯರ ಮನಸೂರೆಗೊಂಡಿತು. ಇರಾಕ್ನಿಂದ ಸಾವಿರಾರು ಮೈಲು ದೂರದಲ್ಲಿರುವ ಕೇರಳದಿಂದಲೂ ನೂರಾರು ಜನ ಆಸ್ಥೆಯಿಂದ ಸೇನೆ ಸೇರಿಕೊಳ್ಳುವಷ್ಟು ಮಟ್ಟಿಗೆ ಐಸಿಸ್ ಜಗತ್ತಿನಾದ್ಯಂತ ಖ್ಯಾತವಾಯ್ತು. ಅಲ್ ಬಗ್ದಾದಿ 2014 ರಲ್ಲಿ, ‘ಇಸ್ಲಾಂನ ಸೈನಿಕರನ್ನು ಎದುರಿಸಬಲ್ಲ ಸೇನೆ ಜಗತ್ತಿನಲ್ಲಿಯೇ ಇಲ್ಲ’ ಎಂದಿದ್ದ. ಜಗದ್ವಿಜೇತ ಸೇನೆಯ ಸದಸ್ಯರಾಗಬೇಕೆಂದೇ ಮೂಲೆ-ಮೂಲೆಗಳಿಂದ ತರುಣರು ಧಾವಿಸಿ ಬರಲಾರಂಭಿಸಿದ್ದರು.
ಅಲ್ ಬಗ್ದಾದಿ ತನ್ನೆಲ್ಲ ಕಾರ್ಯಗಳಿಗೂ ಇಸ್ಲಾಂನ ಆಧಾರ ನೀಡುತ್ತಿದ್ದುದರಿಂದ ಆತನನ್ನು ವಿರೋಧಿಸುವವರೂ ಬಹು ದೊಡ್ಡ ಪ್ರಮಾಣದಲ್ಲಿರಲಿಲ್ಲ. ಕೆಲವರು ಆತನೊಡನೆ ಸೇರುವ ತುಡಿತದಲ್ಲಿದ್ದರೆ ಅನೇಕರು ಇಸ್ಲಾಂ ವಿಸ್ತರಣೆಗೆ ಇದು ಅಗತ್ಯವೇನೋ ಎಂಬಂತೆ ಮೌನ ವ್ರತ ಸ್ವೀಕರಿಸಿದ್ದರು. ಕಾಶ್ಮೀರದಿಂದ ಹಿಡಿದು ಕೇರಳದವರೆಗೆ ಇರುವ ಸಮಸ್ಯೆಗಳನ್ನು ನಿವಾರಿಸಲು ಐಸಿಸ್ ಒಂದೇ ಪರಿಹಾರ ಎಂದೇ ಭಾವಿಸಿಬಿಟ್ಟಿದ್ದರು ಅವರು. ಈ ಕಾರಣಕ್ಕಾಗಿ ಹತ್ಯೆಯಾದರೂ ಸರಿಯೇ. ಭಗವಂತನ ಸಾಮ್ರಾಜ್ಯ ಸ್ಥಾಪಿಸಲು ಅಷ್ಟೂ ಮಾಡದಿದ್ದರೆ ಹೇಗೆ ಎಂಬುದು ಅವರ ವಾದ. ಅದಕ್ಕಾಗಿ ಕೊನೆಯ ಬಲವಾದ ಪ್ರಯತ್ನ ಅಷ್ಟೇ. ಹೀಗೆ ಅವರು ಅನೇಕ ಬಾರಿ ಕೊನೆಯ ಪ್ರಯತ್ನ ಮಾಡಿದ್ದಾರೆಂಬುದು ಮನಸಿನಲ್ಲಿರಲಿ. ಕಾಶ್ಮೀರದಿಂದ ಪಂಡಿತರನ್ನು ಹುಡು ಹುಡುಕಿ ಕೊಂದಾಗ, ಜೀವ ಕೈಲಿ ಹಿಡಿದು ಅಲ್ಲಿನ ಹಿಂದೂ ಸ್ತ್ರೀಯರು ಪಲಾಯನ ಗೈಯ್ಯುವಾಗ ಹೀಗೊಂದು ಭಾವನೆ ಅವರಲ್ಲಿ ಬಲವಾಗಿಬಿಟ್ಟಿತ್ತು. ಬಾಬರ್-ಔರಂಗಜೇಬರು ಕ್ರೂರವಾಗಿ ಆಳುವಾಗಲೇ ಅಲುಗಾಡದ ಹಿಂದೂ ಹೃದಯ ಈಗ ಅಲುಗಾಡಿಬಿಡಬಲ್ಲುದೇ ಎಂಬ ಪ್ರಶ್ನೆ ಅವರು ತಮ್ಮ ತಾವು ಕೇಳಿಕೊಳ್ಳಲೇ ಇಲ್ಲ. ಕಾಶ್ಮೀರದ ಪಂಡಿತ್ ಕುಟುಂಬಕ್ಕೆ ಸೇರಿದ ಗುಂಜೂ, ಅಟ್ಟಿಸಿಕೊಂಡು ಬಂದ ಭಯೋತ್ಪಾದಕರ ಕಣ್ತಪ್ಪಿಸಿ ಅಕ್ಕಿಯ ಡಬ್ಬಿ ಸೇರಿಕೊಂಡಿದ್ದರು. ಅವರ ಪಕ್ಕದ ಮನೆಯವನೇ ಭಯೋತ್ಪಾದಕರಿಗೆ ಗುರುತಿಸಿ ತೋರಿಸಿದ್ದ. ಆಮೇಲಿನದ್ದು ರಕ್ತ-ಸಿಕ್ತ ಅಧ್ಯಾಯ. ಅಕ್ಕಿಯ ಡಬ್ಬಿ ರಕ್ತದಿಂದ ತೋಯ್ದು ಹೋಯಿತು. ‘ನಿನ್ನ ಮಕ್ಕಳು ಈ ಊಟ ಮಾಡಲಿ, ರುಚಿಕಟ್ಟಾಗಿರುತ್ತದೆ’ ಎಂದು ಅಟ್ಟಹಾಸ ಬೀರಿ ಹೊರಟರು ಬಂದೂಕುಧಾರಿಗಳು. ಆಗೆಲ್ಲಾ ಭಾರತದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪನೆಯೇ ಆಗಿಹೋಯ್ತೆಂಬಂತೆ ಬೀಗಿದ್ದರು ಅವರೆಲ್ಲ. ದಶಕಗಳೇ ಉರುಳಿದರೂ ಭಾರತ ಬಿಡಿ, ಕಾಶ್ಮೀರದಲ್ಲೂ ಅವರು ಅಂದುಕೊಂಡಂತೆ ಆಗಿಲ್ಲ.
ಇಸ್ಲಾಂ ಜಗತ್ತಿನ ದೌರ್ಬಲ್ಯವೇ ಕ್ರೌರ್ಯ. ಅವರ ಎಲ್ಲಾ ಜಾಗತಿಕ ಸಂಘಟನೆಗಳೂ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವುದು. ಹೆಚ್ಚು ಹೆಚ್ಚು ಜನರ ಕತ್ತು ಕೊಯ್ದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳ ಮೂಲಕ ಹರಿದಾಡಿಸಿದರೆ ಸಂಘಟನೆಯನ್ನು ಅಪ್ಪುವ ಜನ ಮತ್ತು ಸಂಗ್ರಹವಾಗುವ ನಿಧಿಯ ಪ್ರಮಾಣ ಹೆಚ್ಚುತ್ತಾ ಸಾಗುವುದು. ಜಾಗತಿಕವಾಗಿ ಬೆಂಬಲ ಹೆಚ್ಚುತ್ತಿದ್ದಂತೆ ಈ ತಂಡಗಳು ತಾವೇ ಜಗತ್ತಿನ ಒಡೆಯರಂತೆ ವತರ್ಿಸಲಾರಂಭಿಸುತ್ತವೆ. ಈ ದುರಹಂಕಾರ ಎಷ್ಟರ ಮಟ್ಟಿಗೆ ಬೆಳೆಯುತ್ತದೆಯೆಂದರೆ ಕಟ್ಟರ್ ಪಂಥಿ ಇಸ್ಲಾಂ ತಮ್ಮದೇ ಎನ್ನುತ್ತ ಉಳಿದವರನ್ನೆಲ್ಲ ಧಿಕ್ಕರಿಸಿ ಬಿಡುತ್ತವೆ.
ನಿಮಗೆ ಕೇಳಿ ಅಚ್ಚರಿಯಾದೀತು. ಸೌದಿ ಅರೇಬಿಯಾದಿಂದ ಹೊರಟ ವಹಾಬಿ ಚಳವಳಿ ಜಗತ್ತಿನ ಬೇರೆಲ್ಲ ಇಸ್ಲಾಂ ವಾದವನ್ನು ತಿರಸ್ಕರಿಸಿತು. ಅವರಿಗೆ ಸೂಫಿಗಳು ಬಿಡಿ ಸ್ವತಃ ಷಿಯಾ ಮತ್ತು ಸುನ್ನಿಗಳೊಂದಿಗೂ ವಿರೋಧ ಹುಟ್ಟಿಕೊಂಡಿತು. ತಮ್ಮನ್ನು ತಾವು ಕಟ್ಟರ್ಗಳೆಂದುಕೊಳ್ಳುವ ಹುಚ್ಚು ಪ್ರತಿಯೊಬ್ಬರಿಗೂ. ಹೀಗೆ ‘ಕಟ್ಟರ್’ ಆದವನೇ ಭಗವಂತನ ಪ್ರತಿನಿಧಿಯಾಗಿರುವುದರಿಂದ ಆತನೆ ಜಗತ್ತನ್ನು ಆಳುವುದೆಂಬುದು ಅವರೆಲ್ಲರ ಅಭಿಪ್ರಾಯ. ಸೂಫಿಗಳಿಗಿಂತ ಷಿಯಾಗಳು ಕಠೋರ. ಷಿಯಾಗಳಿಗಿಂತ ಸುನ್ನಿಗಳು. ಇವರೆಲ್ಲರಿಗಿಂತೂ ವಹಾಬಿಗಳು. ಗೋರಿಯನ್ನು ಗೌರವಿಸುವವರನ್ನು ಕಂಡಾಗ ಷಿಯಾದವನಿಗೆ ಎಲ್ಲಿಲ್ಲದ. ಷಿಯಾಗಳ ಆಚರಣೆಯನ್ನು ಕಂಡು ಸುನ್ನಿಗಳು ನಿಗಿನಿಗಿ ಕೆಂಡ. ತಮ್ಮನ್ನು ತಾವು ಸುನ್ನಿಗಳೆಂದು ಕರೆದುಕೊಂಡರೂ ಭಾರತದ ಸುನ್ನಿಗಳು ಸುನ್ನಿಗಳೇ ಅಲ್ಲವೆನ್ನುವ ಅವರ ಆಚರಣೆಯನ್ನು ಧಿಕ್ಕರಿಸುವ ಸಲಫಿ-ವಹಾಬಿಗಳ ಚಳವಳಿ ಇಲ್ಲಿ ಇತ್ತೀಚೆಗೆ ಜೋರಾಗಿಬಿಟ್ಟಿವೆ.
ಕಟ್ಟರತೆಯ ಈ ಆವೇಶ ಎಲ್ಲಿಯವರೆಗಿದೆ ಎಂದರೆ ಕಳೆದ 24 ರಂದು ಅಲ್ ಅರೇಬಿಯಾ ಟಿವಿ ಪ್ರಸ್ತುತ ಪಡಿಸಿದ ಸುದ್ದಿ ಎಂಥವರ ಹುಬ್ಬೂ ಮೇಲೇರಿಸುವಂಥದ್ದಾಗಿತ್ತು. ಜಗತ್ತಿನ ಮುಸಲ್ಮಾನರೆಲ್ಲರ ಶ್ರದ್ಧಾ ಕೇಂದ್ರವಾಗಿರುವ ಸೌದಿ ಅರೇಬಿಯಾದ ಮೆಕ್ಕಾ ಮಸೀದಿಯ ಮೇಲೆಯೇ ಭಯೋತ್ಪಾದಕರ ದಾಳಿಯಾಗಿತ್ತು! ಸೌದಿಯ ಮಂತ್ರಿಯೊಬ್ಬರು ವಿವರಣೆ ನೀಡುತ್ತಾ, ಮಸೀದಿಗೆ ಬಂದ ಭಕ್ತರನ್ನು ಗುರಿಯಾಗಿರಿಸಿಕೊಂಡು ಎರಡು ದಾಳಿಯಾಗಿತ್ತು; ಎರಡನ್ನೂ ವ್ಯರ್ಥಗೊಳಿಸಲಾಗಿದೆ ಎಂದಿದ್ದರು. ಈ ಘಟನೆಯಲ್ಲಿ ಆರು ಸಾರ್ವಜನಿಕರು ಮತ್ತು ಒಬ್ಬ ಪೊಲೀಸು ಏಟು ತಿಂದರೆ ಒಬ್ಬ ಭಯೋತ್ಪಾದಕ ತನ್ನ ತಾನು ಉಡಾಯಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ. ವಿಚಿತ್ರ ಅಲ್ಲವೇ? ಯಾವ ಸಾಮ್ರಾಜ್ಯವನ್ನು ಜಗತ್ತಿನಾದ್ಯಂತ ಪಸರಿಸಲು ಅಕ್ಷರಶಃ ಯುದ್ಧ ನಡೆದಿದೆಯೋ ಅದೇ ಸಾಮ್ರಾಜ್ಯದ ಮೂಲ ಕೇಂದ್ರದ ಮೇಲೆ ಅದೇ ಜನರ ದಾಳಿ!? ಸೌದಿಯ ಜನ ತಮ್ಮ ತಾವು ವಹಾಬಿಗಳು ಎಂದು ಕರೆದುಕೊಂಡು ಜಗತ್ತಿನ ಬೇರೆ ಬೇರೆ ರಾಷ್ಟ್ರದ ಮುಸಲ್ಮಾನರನ್ನು ತುಚ್ಛವಾಗಿ ಕಾಣುವಾಗ ಐಸಿಸ್ನ ಉಗ್ರಗಾಮಿಗಳು ಸ್ವತಃ ಸೌದಿಯವರನ್ನೇ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ.
ನೀವು ನಂಬಲಾರಿರಿ. 2015 ರಲ್ಲಿ ಮೆಕ್ಕಾ ಮಸೀದಿಯ ಬಳಿ ಕ್ರೇನ್ ದುರಂತವೊಂದರಲ್ಲಿ 107 ಜನ ಸತ್ತಾಗ ಜಗತ್ತು ಗಾಬರಿಯಾಗಿ ಅತ್ತ ನೋಡಿತ್ತು. ಆಗಲೇ ಗೊತ್ತಾಗಿದ್ದು ಪ್ರವಾದಿಯವರಿಗೆ ಸಂಬಂಧಿಸಿದ ಒಂದಷ್ಟು ಪವಿತ್ರ ಸ್ಥಳಗಳೂ ಸೇರಿದಂತೆ ಅನೇಕ ಗೋರಿಗಳನ್ನು ಕಿತ್ತು ಬಿಸಾಡಿ ಹೆಚ್ಚು ಜನರಿಗೆ ಅವಕಾಶ ಮಾಡಿಕೊಡಲೆಂದೇ ಕಟ್ಟಡ ವಿಸ್ತಾರಕ್ಕೆ ಕೈ ಹಾಕಿತ್ತು ಸೌದಿ ಆಡಳಿತ. ಈ ಗೋರಿಗಳಿಗೆ, ಪವಿತ್ರಾ ಸ್ಥಳಗಳಿಗೆ ಗೌರವ ತೋರುವುದೆಂದರೆ ಅದು ಭಗವಂತನಿಗೆ ಮಾಡುವ ಅವಮಾನ ಎಂಬ ಸಮಜಾಯಿಷಿ ಅವರು ಕೊಟ್ಟರು ನಿಜ. ಅದರ ಹಿಂದು ಹಿಂದೆಯೇ ಬೆಳೆದು ನಿಂತ ಐಸಿಸ್ ತಮ್ಮನ್ನು ತಾವು ಕಟ್ಟರ್ಗಳೆಂದು ಕರೆದುಕೊಂಡು ಮೆಕ್ಕಾದಲ್ಲಿ ಪವಿತ್ರ ಶಿಲೆಗೂ ಗೌರವ ನೀಡುವುದನ್ನು ವಿರೋಧಿಸಲಾರಂಭಿಸಿತು. ಅದನ್ನೇ ದಾಳಿಗೈದು ಉರುಳಿಸುವ ಯೋಜನೆಯನ್ನು ರೂಪಿಸಿತು. ಅದರದ್ದೇ ಪ್ರತಿಫಲ ಸಪ್ಟೆಂಬರ್ನ ದಾಳಿ.
ಈ ವೇಳೆಗಾಗಲೇ ಐಸಿಸ್ನ ಬಾಹುಗಳು ಸಾಕಷ್ಟು ವಿಸ್ತಾರಗೊಂಡಿತ್ತು. ಆರಂಭದಲ್ಲಿ ಇರಾಕ್ ಮತ್ತು ಸಿರಿಯಾಕ್ಕೆ ಸೀಮಿತಗೊಂಡಿದ್ದ ಈ ಚಳವಳಿ ಈಗ ಜಗತ್ತನ್ನೆಲ್ಲ ಇಸ್ಲಾಮಿಕ್ ಸ್ಟೇಟ್ನ ಛತ್ರದಡಿಯಲ್ಲಿ ತರುವ ಗುಟುರು ಹಾಕಿತ್ತು. ಸಿರಿಯಾದ ರಕ್ಕಾದಿಂದ ಇರಾಕ್ನ ಮೊಸೂಲ್ವರೆಗೆ ತನ್ನ ಸಾಮ್ರಾಜ್ಯ ಸ್ಥಾಪಿಸಿದ ಪಡೆ ಜಗತ್ತನ್ನು ಅಣಕಿಸುತ್ತಾ ನಿಂತಿತ್ತು. ಜಾಗತಿಕ ಶಕ್ತಿಗಳು ಒಂದಾಗಿ ಇದನ್ನು ನಾಶ ಮಾಡಲು ಯತ್ನಿಸಿದಷ್ಟು ಅದು ವಿಸ್ತಾರವಾಗುತ್ತಲೇ ನಡೆದಿತ್ತು. ಸರಿ ಸುಮಾರು ಮೂರು ವರ್ಷಗಳ ಕಾಲ ಸಿರಿಯಾ, ಇರಾಕ್ನ ಬದುಕು ನರಕವೇ ಆಗಿಬಿಟ್ಟಿತ್ತು. ದಿನ ಬೆಳಗಾದರೆ ಗುಂಡಿನ ಮೊರೆತ. ಕೊಲ್ಲುವವನೂ-ಕೊಲ್ಲಲ್ಪಡುವವನು ಇಬ್ಬರೂ ಇಸ್ಲಾಂನ ಅನುಯಾಯಿಗಳೇ. ಇಬ್ಬರಲ್ಲಿ ಕಟ್ಟರ್ ಪಂಥಿ ಮುಸಲ್ಮಾನನ್ಯಾರು ಎಂಬುದೇ ಪ್ರಶ್ನೆ.
ಮೆಸೂಲ್ನ ಕಥೆಯಂತೂ ಬಲು ಕೆಟ್ಟದ್ದು. ಬಾಬರಿ ಮಸೀದಿಗಿಂತ ಸುಮಾರು 350 ವರ್ಷಗಳಷ್ಟು ಹಳೆಯ ಮಸೀದಿಯನ್ನು ಆಧಾರವಾಗಿರಿಸಿಕೊಂಡು ಖಲೀಫಾ ಆಗಿ ಕುಳಿತ ಅಬೂ ಬಕ್ರ ಅಲ್ ಬಗ್ದಾದಿಯೊಂದಿಗಿನ ಇರಾಕ್ ಸೇನೆಯ ಕಾದಾಟ ನಿರಂತರವಾಗಿತ್ತು. ಈ ಕಿರಿಕಿರಿ ತಾಳಲಾಗದೇ ಸುಮಾರು 9 ಲಕ್ಷ ಜನ ನಗರಗಳನ್ನು ಬಿಟ್ಟು ಓಡಿ ಹೋದರು. ಹೀಗೆ ತಪ್ಪಿಸಿಕೊಳ್ಳಲಾಗದೇ ಒಳಗೇ ಸಿಕ್ಕಿಹಾಕಿಕೊಂಡು ಸಾಯುವ ಆಟವನ್ನೇ ಪ್ರತಿನಿತ್ಯ ಆಡಿದ ಅಸಂಖ್ಯರು ಹಸಿವು, ಅಪೌಷ್ಟಿಕತೆಯಿಂದಲೇ ಜೀವ ಕೈಲಿ ಹಿಡಕೊಂಡಿದ್ದಾರೆ. ಪ್ರಳಯ ನರ್ತನವೆಂದರೇನೆಂದು ಅವರನ್ನೇ ಕೇಳಬೇಕು. ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಸಿರಿಯಾ ಮೇಲಿನ ಬಾಂಬ್ ದಾಳಿ ತೀವ್ರವಾಯ್ತು. ಇರಾಕ್ನ ಮೊಸೂಲ್ನಲ್ಲಂತೂ ಆಮ್ಲಜನಕದೊಂದಿಗೆ ಬೆರೆತಾಗ ಕೆಟ್ಟದಾಗಿ ಉರಿಯುವ ವೈಟ್ ಫಾಸ್ಫರಸ್ನ್ನು ಬಳಸಿತು. ಈ ವಿಷಾನಿಲ ಸುಡಲು ಆರಂಭಿಸಿದರೆ ಮಾಂಸಖಂಡಗಳೇನು, ಎಲುಬೂ ಉರಿಯಬಲ್ಲದು. ಜನಸಂಖ್ಯೆ ಹೆಚ್ಚಿರುವ ಸ್ಥಳದಲ್ಲಿ ಈ ರಾಸಾಯನಿಕ ಬಳಕೆಯನ್ನು ಮಾಡುವಂತಿಲ್ಲವೆಂಬ ನಿಯಮವಿದ್ದರೂ ಅಮೇರಿಕಾ ಮುಲಾಜು ನೋಡಲಿಲ್ಲ. ಮಾನವ ಹಕ್ಕು ರಕ್ಷಣಾ ಸಮಿತಿ ಛೀಮಾರಿ ಹಾಕಿದರೂ ತಲೆಕೆಡಿಸಿಕೊಳ್ಳಲಿಲ್ಲ. ದಾಳಿ ಮುಂದುವರಿದೇ ಇತ್ತು. ಪರಿಣಾಮ? ಮೂರ್ನಾಲ್ಕು ದಿನಗಳ ಹಿಂದೆ ಮೊಸೂಲ್ನ್ನು ವಶಪಡಿಸಿಕೊಂಡ ಅಮೇರಿಕಾ ಬೆಂಬಲಿತ ಇರಾಕಿ ಪಡೆ ಭಯೋತ್ಪಾದಕರನ್ನು ಓಡಿಸುವಲ್ಲಿ ಯಶಸ್ಸು ಕಂಡಿದೆ. ಹಾಗೆ ಓಡುವಾಗಲೂ ಅವರು ಸುಮ್ಮನೆ ಹೋಗಲಿಲ್ಲ. 850 ವರ್ಷಗಳಷ್ಟು ಹಳೆಯದಾದ ಗ್ರ್ಯಾಂಡ್ ಅಲ್ ನೂರಿ ಮಸೀದಿಯನ್ನು ಪೂರ್ಣ ಉಡಾಯಿಸಿಯೇ ಹೋಗಿದ್ದಾರೆ. ಅದರ ಎದುರಿಗೆ ಷಿಯಾಗಳ ಕಟ್ಟರ್ ತನಕ್ಕಿಂತಲೂ ಸುನ್ನಿಗಳದ್ದೇ ಮಿಗಿಲೆಂದು ತೋರಿಸುವ 45 ಮೀ ಎತ್ತರದ ಮಿನಾರ್ ಒಂದಿತ್ತು. 2014ರಿಂದಲೂ ಐಸಿಸ್ನ ಧ್ವಜ ಅಲ್ಲಿ ಹಾರಾಡುತ್ತಲಿತ್ತು. ಈಗ ಕಟ್ಟರತೆಯ ಸಂಕೇತವಾಗಿದ್ದ ಮಿನಾರ್ ಕೂಡ ಉರುಳಿ ಬಿದ್ದಿದೆ. ಭಗವಂತನ ಸಾಮ್ರಾಜ್ಯ ಸ್ಥಾಪಿಸಲು ಅವನದ್ದೇ ಪ್ರಾರ್ಥನಾ ಸ್ಥಳವನ್ನು ಹೀಗೆ ನಾಮಾವಶೇಷವಾಗಿಸುವುದನ್ನು ಕಂಡಾಗ ಎಂಥವನೂ ಗಾಬರಿಯಾಗಲೇಬೇಕು. ಬಾಬರಿ ಮಸೀದಿ ಉರುಳಿದ್ದರ ಬಗ್ಗೆ ತಲೆ ಕೆಡಿಸಿಕೊಂಡವರ್ಯಾರೂ ಪ್ರಾಚೀನ ಅಲ್ನೂರಿ ಮಸೀದಿಯ ಕುರಿತಂತೆ ಮಾತಾಡುತ್ತಿಲ್ಲವಲ್ಲ ಎಂಬುದೇ ನೂರು ಕೋಟಿಯ ಪ್ರಶ್ನೆ.
ಐಸಿಸ್ನ ಅಳಿದುಳಿದವರು ಅಫ್ಘಾನಿಸ್ತಾನದೆಡೆಗೆ ಸಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಹಿಂದೊಮ್ಮೆ ಅಲ್ಲಿ ಸುದೀರ್ಘಕಾಲ ತಾಲೀಬಾನೀ ರಾಜ್ಯವಿದ್ದುದು ಹೇಗೆ ತಾನೇ ಮರೆಯಲು ಸಾಧ್ಯ? ಹಳೆಯ ಮಿತ್ರರನ್ನು ಸೇರಿಕೊಂಡು ಅಫ್ಘಾನಿಸ್ತಾನ ಪಾಕೀಸ್ತಾನಗಳ ಮೂಲಕ ಭಾರತದಲ್ಲಿ ಹೊಸಯುದ್ಧ ಆರಂಭಿಸಿದರೆ ನಮಗೆ ಸವಾಲುಗಳು ಸಾಕಷ್ಟು ಎದುರಾಗಬಹುದು. ಅತ್ತ ಇನ್ನೊಂದಷ್ಟು ಐಸಿಸಿಗಳು ಪಶ್ಚಿಮದೆಡೆಗೆ ಸಾಗಿ ನಿರಾಶ್ರಿತರ ಮೂಲಕ ಬಿಳಿಯರ ಬದುಕನ್ನು ದುರ್ಭರಗೊಳಿಸಿಬಿಡಬಹುದು. ಅಥವಾ ಈ ಹಿಂದಿನಂತೆ ಐಸಿಸ್ನ್ನು ಮೀರಿದ ಹೊಸ ಉಗ್ರ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದು ಮತ್ತೆ ಇಸ್ಲಾಂ ಜಗತ್ತಿನಲ್ಲಿ ಹೊಸ ಆಸೆ ಹುಟ್ಟು ಹಾಕಬಹುದು. ಆದರೆ ಇವೆಲ್ಲ ಎಲ್ಲಿಯವರೆಗೂ? ಭಗವಂತ ಶಾಂತಿ-ನೆಮ್ಮದಿ ಕೊಡುವವನಾಗಬೇಕೆ ವಿನಃ ಅದನ್ನು ಕದಡುವವನಾಗಬಾರದು. ಏನಂತೀರಿ?
1 Comment
ಭಗವಂತ ಶಾಂತಿ-ನೆಮ್ಮದಿ ಕೊಡುವವನಾಗಬೇಕೆ ವಿನಃ ಅದನ್ನು ಕದಡುವವನಾಗಬಾರದು. ಏನಂತೀರಿ?… ಸರಿಯಾಗಿದೆ, ಇದು ಹಿಂದೂ, ಮುಸ್ಲೀಮ್ ಮತ್ತು ಕ್ರೈಸ್ತರೆಲ್ಲರಿಗೂ ಅಕ್ಷರಸಃ ಅನ್ವಯ.