ಹಸಿದ ಮಕ್ಕಳ ಅನ್ನ ಕಿತ್ತುಕೊಂಡ ನಿಮ್ಮದೆಂಥಾ ಸಾಮರಸ್ಯ ರಮಾನಾಥ, ಪ್ರಕಾಶ ರೈಗಳೇ?
ಮನುಷ್ಯರಾಗಿ ಬದುಕೋಣ, ನಮಗೆ ಹುಲ್ಲುಕಡ್ಡಿಯನ್ನು ಸೃಷ್ಟಿಸುವ ಮತ್ತು ಯಾರನ್ನು ಕೊಲ್ಲುವ ಅರ್ಹತೆ ಇಲ್ಲ: ಪ್ರಕಾಶ್ ರೈ, ನಟ
ಬುದ್ಧಿವಂತರ ಜಿಲ್ಲೆಯಲ್ಲಿ ಸಾಮರಸ್ಯ ಇಲ್ಲದಾಗಿದೆ. ಜಿಲ್ಲೆಯಲ್ಲಿ ಸಾಮರಸ್ಯ ಮೂಡಿಸಲು ಎಲ್ಲರೂ ಒಂದಾಗೋಣ: ರಮಾನಾಥ ರೈ, ಸಚಿವ
ಹೀಗೆ ಇವರಿಬ್ಬರು ಮಾತನಾಡಿದ್ದು, ಡಿಸೆಂಬರ್ 12ರಂದು ಬಂಟ್ವಾಳದಲ್ಲಿ ನಡೆದ ಸಾಮರಸ್ಯದ ನಡಿಗೆ ಎಂಬ ಸೋಗಲಾಡಿಗಳ ಸಮಾವೇಶದಲ್ಲಿ. ಇವರಿಬ್ಬರ ಮಾತು ಕೇಳಿದರೇ ಎಂಥಾ ಕರುಣೆಯುಳ್ಳವರು, ಶಾಂತಿ ಬಯಸುವವರು ಎಂದು ಉದ್ಘಾರ ತೆಗೆದರೇ ಅದಕ್ಕಿಂತ ಮೂರ್ಖರು ಯಾರೂ ಇಲ್ಲ. ಯಾಕೆಂದರೆ ಇವರು ಮಾತನಾಡುವ ಪ್ರತಿ ಮಾತಿನ ಹಿಂದೆ ವಿಷದ ನಂಜಿರುತ್ತೇ?. ಅದಕ್ಕೊಂದು ದೂರಾಲೋಚನೆಯ ಸ್ಪರ್ಷವಿರುತ್ತೆ. ಅದಕ್ಕೆ ಡಾ.ಕಲಡ್ಕ ಪ್ರಭಾಕರ ಭಟ್ಟರ ನೇತೃತ್ವದ ಶಾಲೆಗಳ ಹಸಿದ ಅನ್ನವನ್ನು ಸರ್ಕಾರಕ್ಕೆ ಪತ್ರ ಬರೆದು ಕಸಿದುಕೊಂಡ ರಮಾನಾಥ ರೈ ಮತ್ತು ನಿತ್ಯ ಹಿಂದೂಗಳ ಹತ್ಯೆ, ಹಲ್ಲೆ ನಡೆಯುತ್ತಿದ್ದರೂ ಕೇರಳದಲ್ಲಿ ಸ್ವಚ್ಛಂದವಾಗಿ ಉಸಿರಾಡಬಲ್ಲೆ ಎಂದು ಹೇಳುವ ಊಸರವಳ್ಳಿ ಪ್ರಕಾಶ ರೈ ಮಾತುಗಳೇ ಸಾಕ್ಷಿಯಾಗಿ ನಿಲ್ಲುತ್ತವೆ.
ಸಾಮರಸ್ಯದ ಸೋಗು ಹಾಕಿಕೊಂಡು ಜಾತಿ ಮತ ಪಂಥಗಳಾಚೆ ವಿದ್ಯಾಭ್ಯಾಸ ಮಾಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಇಡಲಾಯಿತು. ಇದೀಗ ಸಾಮರಸ್ಯ ಎಂದು ಬೀಗಿದರೇ ಕೇಳಲು ನಿಮ್ಮ ಸಮಾವೇಶದಲ್ಲಿ ಸೇರಿರುವ ಅರಣ್ಯದಲ್ಲಿ ಅಡಗಿ ಕುಳಿತು ಅಮಾಯಕರ ಜೀವ ನುಂಗುವ ಕೆಂಪು ಉಗ್ರರ ಪ್ರೇರಕರು ಎಂದಿಕೊಂಡಿರಾ?
ಸಚಿವ ರಮಾನಾಥ ರೈ ಸರ್ಕಾರಕ್ಕೆ ಮನವಿ ಮಾಡಿ ಕಲಡ್ಕ ಪ್ರಭಾಕರ ಭಟ್ಟರ ನೇತೃತ್ವದ ಶ್ರೀರಾಮ ವಿದ್ಯಾಕೇಂದ್ರ ಕಲಡ್ಕ್ ಮತ್ತು ಶ್ರೀದೇವಿ ವಿದ್ಯಾಕೇಂದ್ರಕ್ಕೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಿಂದ ನೀಡುವ ಅನ್ನದಾನವನ್ನು ನಿಲ್ಲಿಸಿರುವುದು ಇದೀಗ ಸಾಬೀತಾಗಿದೆ. ಅದ್ಯಾವ ಕಾರಣಕ್ಕೆ ಅನ್ನದ ನೆರವನ್ನು ಸ್ಥಗಿತಗೊಳಿಸಿದ್ದೀರಿ ಎಂಬುದಕ್ಕೆ ಪೆಕರನಂತೆ ಉತ್ತರಿಸುವ ಸಚಿವ ರೈ ಅವರು ‘ರಾಜ್ಯದ ಎಲ್ಲ ಖಾಸಗಿ ಶಾಲೆಗಳಿಗೆ ಇಲ್ಲದ ಅನುದಾನ ಇವಕ್ಕೆ ಏಕೆ?’ ಎನ್ನುತ್ತಾರೆ. ರೈ ಅವರೇ ಭಟ್ಟರ ಶಾಲೆಯಲ್ಲಿ ಕೇವಲ ಒಂದು ಸಮುದಾಯದ ಮಕ್ಕಳು ಊಟ ಮಾಡುತ್ತಿರಲಿಲ್ಲ. ನಿಮ್ಮ ಅಲ್ಪಸಂಖ್ಯಾತ ತುಷ್ಟಿಕರಣಕ್ಕಾಗಿ ಶಾಲೆ ಮಕ್ಕಳ ಅನ್ನಕ್ಕೆ ಕೊಳ್ಳಿ ಇಟ್ಟೀರಿ, ಭಟ್ಟರನ್ನು ಹಣಿಯಲು ಹೋಗಿ ಮುಗ್ದ ಮಕ್ಕಳ ಹೊಟ್ಟೆ ಮೇಲೆ ಹೊಡೆದಿರಿ. ಇದೇನಾ ನೀವು ಮಾಡುವ ಸಾಮರಸ್ಯ, ಇದೇನಾ ನೀವು ಹೇಳುವ ಸಾಮರಸ್ಯ. ನಿಮ್ಮ ಬೇಳೆ ಬೇಯಿಸಿಕೊಳ್ಳಲು ಮಕ್ಕಳ ತಟ್ಟೆಗೆ ಕೈ ಹಾಕಿದ್ದೀರಲ್ಲಾ ಇದೆಂಥಾ ಸೌಹಾರ್ಧತೆ ಹೇಳಬಲ್ಲಿರಾ? ರೈಗಳೇ
ಪ್ರಕಾಶ ರೈ ಎಂಬ ಮಹಾನ್ ನಟ. ಹಿಂದುತ್ವವನ್ನು, ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಲೇ ದಿನದೂಡುತ್ತಿದ್ದಾನೆ. ಆದರೆ ಈತನಿಗೆ ಸಾಮರಸ್ಯದ ಸಮಾವೇಶ ನಡೆಯುವ ವೇದಿಕೆಯ ಪಕ್ಕದೂರಿನಲ್ಲಿ ಹೆಣವಾಗಿ ಬಿದ್ದ ಪರೇಶ ಮೇಸ್ತನ ಹೆತ್ತವರ ಆಕ್ರಂದನ ಕೇಳಿಸುವುದಿಲ್ಲ. ಮೇಸ್ತ ಸಾವಿಗೆ ನ್ಯಾಯ ಕೇಳಬೇಕು ಎಂಬ #ಜಸ್ಟ್ ಆಸ್ಕಿಂಗ್ ಪ್ರಶ್ನೆ ಉದ್ಭವಿಸುವುದಿಲ್ಲ. ಇನ್ನು ಪ್ರಭಾಕರ ಭಟ್ಟರ ನೇತೃತ್ವದ ಶಾಲೆಗಳ ಮಕ್ಕಳ ಹಸಿದ ಹೊಟ್ಟೆ ಮೇಲೆ ಹೊಡೆದ ಸಚಿವ ರಮಾನಾಥ ರೈಯನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಇದೇ ಅಲ್ಲವೇ ಇವರ ಇಬ್ಬಂದಿತನಕ್ಕೆಸಾಕ್ಷಿ.
‘ಕೊಲೆಯಲ್ಲಿ ರಾಜಕೀಯ ಮಾಡಲು ಹೋಗಬಾರದು’ ಎನ್ನುವ ಪ್ರಕಾಶ ರೈ ತನ್ನ ಪ್ರತಿ ಮಾತಿನಲ್ಲೂ ರಾಜಕೀಯದ ವಿಷ ವಿಟ್ಟುಕೊಂಡೆ ಮಾತನಾಡುತ್ತಾನೆ. ಅದಕ್ಕೆ ಆತ ಕೇಳುವ ದುರುದ್ದೇಶಪೂರಿತ #justasking ಪ್ರಶ್ನೆಗಳೇ ಸಾಕ್ಷಿ. ಕೊಲೆಯಲ್ಲಿ ರಾಜಕೀಯ ಮಾಡಬಾರದು ಎನ್ನುವ ಹಾಗೇ ಮಕ್ಕಳು ತಿನ್ನುವ ಅನ್ನದ ಅಗುಳಿನಲ್ಲೂ ರಾಜಕೀಯ ಮಾಡಬಾರದು ಎಂದು ಹೇಳುವ ಧೈರ್ಯ ಪ್ರಕಾಶ ರೈ ಎಂಬ ಬಹು ವೇಷಧಾರಿ ನಟ ಪ್ರಕಾಶ ರೈಗೆ ಇಲ್ಲವೇ?
ಪ್ರಕಾಶ ರೈ ಮತ್ತು ರಮಾನಾಥ ರೈಗಳ ನೇತೃತ್ವದ ಸಾಮರಸ್ಯದ ನಡಿಗೆಯಲ್ಲಿ ಭಾಗವಹಿಸಿದವರಾದರೂ ಎಂಥವರು. ಅವರ ಬಗ್ಗೆಯೂ ಒಮ್ಮೆ ಯೋಚಿಸಲೇಬೇಕು. ಮುಗ್ದ ಜೀವಗಳನ್ನು ಬಲಿ ನೀಡುವ ಕಮ್ಯುನಿಸ್ಟ್, ನಕ್ಸಲವಾದವನ್ನು ಬೆಂಬಲಿಸುವ ಕಮ್ಮಿನಿಷ್ಠರ ದಂಡೆ ಈ ಸಮಾವೇಶದಲ್ಲಿ ಭಾಗವಹಿಸುತ್ತು. ಅಲ್ಲಿಗೆ ಈ ರೈಗಳ ಸಮಾವೇಶದ ಅಂತಕರಣ ಅರ್ಥವಾಯಿತು. ಇವರದ್ದು ಸಾಮರಸ್ಯದ ನಡಿಗೆಯಲ್ಲ, ನಾಟಕದ ನಡಿಗೆ, ತುಷ್ಟಿಕರಣದ ಕಡೆಗೆ ಎಂಬುದು. ಹೆಸರಲ್ಲಿ ಸಾಮರಸ್ಯ, ಮಾಡುವುದು ಸಮಾಜ ಒಡೆಯುವ ಹೀನ ಕೃತ್ಯ.
Leave A Reply