ನೀತಿ ಸಂಹಿತೆ ಉಲ್ಲಂಘನೆ, ರಾಹುಲ್ ಗಾಂಧಿಗೆ ಶೋಕಾಸ್ ನೋಟಿಸ್!
ಗಾಂಧಿನಗರ: ಇಷ್ಟು ದಿನ ಹಾಸ್ಯಾಸ್ಪದ ಹೇಳಿಕೆ ಹಾಗೂ ಪ್ರಮಾದಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ರಾಹುಲ್ ಗಾಂಧಿ ಅವರು ಈಗ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಇಂದಿನಿಂದ ಗುಜರಾತಿನಲ್ಲಿ ಎರಡನೇ ಹಾಗೂ ಕೊನೆಯ ಹಂತದ ಚುನಾವಣೆ ನಡೆಯುವ ಹಿಂದಿನ ದಿನವೇ ಗುಜರಾತಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಚುನಾವಣೆ ಆಯೋಗ ರಾಹುಲ್ ಗಾಂಧಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಡಿ.18ರೊಳಗೆ ಈ ಕುರಿತು ಪ್ರತಿಕ್ರಿಯಿಸಬೇಕು ಹಾಗೂ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ನಿಮ್ಮ ವಿರುದ್ಧ ಕ್ರಮವೇಕೆ ತೆಗೆದುಕೊಳ್ಳಬಾರದು ಎಂದು ಚುನಾವಣೆ ಆಯೋಗ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಸಂದರ್ಶನ ಪ್ರಸಾರ ಮಾಡಿದ ಟಿವಿ ಚಾನೆಲ್ ವಿರುದ್ಧ ಎಫ್ಐಆರ್ ದಾಖಲಿಸಲು ಸಹ ಆಯೋಗ ಸೂಚನೆ ನೀಡಿದೆ.
ಗುಜರಾತಿನ ಸಮಾಚಾರ್ ಟಿವಿ ಎಂಬ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದ ರಾಹುಲ್ ಗಾಂಧಿ, “ಈ ಚುನಾವಣೆ ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ನಡುವೆ ನಡೆಯುತ್ತಿಲ್ಲ. ಇದು ಗುಜರಾತಿನ ಜನರಿಗಾಗಿ, ಅವರ ಧ್ವನಿಗಾಗಿ ನಡೆಯುತ್ತಿರುವ ಚುನಾವಣೆ. ಅವರು (ಬಿಜೆಪಿ) ಸತ್ಯಾಂಶದ ಕುರಿತು ಮಾತನಾಡುತ್ತಿಲ್ಲ. ಗುಜರಾತಿನ ಅಭಿವೃದ್ಧಿಯ ಕುರಿತು ಇಲ್ಲಿ ಮಾತೇ ಇಲ್ಲ” ಎಂದು ಟೀಕಿಸಿದ್ದರು. ಆದರೆ ಈಗ ಕಾನೂನು ಉಲ್ಲಂಘಿಸಿ ರಾಹುಲ್ ಗಾಂಧಿಯವರೇ ಟೀಕೆಗೆ ಗ್ರಾಸವಾಗಿದ್ದಾರೆ.
Leave A Reply