ಭಾರತ ಮಾತೆಯನ್ನು ಅವಮಾನಿಸಿದ ಕ್ರೈಸ್ತ ಧರ್ಮ ಬೋಧಕನ ಬಂಧನ

ಹೈದರಾಬಾದ್: ಧರ್ಮ ಬೋಧಕರು ಎಲ್ಲ ಧರ್ಮವನ್ನು ಪ್ರೀತಿಸಬೇಕು ಹಾಗೂ ತಮ್ಮ ಧರ್ಮದ ಹಿರಿಮೆ ಬಗ್ಗೆ ಹೇಳಬೇಕು.
ಆದರೆ, ಆಂಧ್ರಪ್ರದೇಶದಲ್ಲಿ ಯಲಮಂಚಿಲಿ ವಿಜಯ್ ಕುಮಾರ್ ಎಂಬ ಕ್ರೈಸ್ತ ಧರ್ಮ ಬೋಧಕ, ಕ್ರೈಸ್ತ್ ಗಾಸ್ಪೆಲ್ ಟೀಮ್ ಸಂಸ್ಥೆ ಮಾಲೀಕ, ಭಾರತ ಮಾತೆ ಹಾಗೂ ಹಿಂದೂಗಳನ್ನು ಅವಮಾನಿಸಿದ್ದಾನೆ.
ಈ ಕುರಿತು ಫೇಸ್ ಬುಕ್ ನಲ್ಲಿ ಹರಿದಾಡಿದ ವಿಡಿಯೋ ಗಮನಿಸಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸಿ, ದೂರು ದಾಖಲಿಸಿದ್ದಾರೆ.
ಯಾವುದೇ ಒಂದು ಕುಟುಂಬಕ್ಕೆ ಒಬ್ಬನೇ ತಂದೆಯಿರಬೇಕು, ಆದರೆ ಹಿಂದೂಗಳು ಮೂರು ಕೋಟಿ ದೇವರನ್ನು ಪೂಜಿಸುತ್ತಾರೆ. ಅಷ್ಟಕ್ಕೂ ಭಾರತ ಮಾತೆಗೆ ಎಷ್ಟು ತಂದೆಯರಿದ್ದಾರೆ ಎಂದು ಅವಹೇಳನಕಾರಿಯಾಗಿ ಈ ಕುತ್ಸಿತ ಮನಸ್ಸಿನ ಪಾದ್ರಿ ಮಾತನಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ವಿಜಯ್ ಕುಮಾರ್ ನೀಡಿದ ಹೇಳಿಕೆ ಭಾರತದ ಜನರ ಭಾವನೆಗಳಿಗೆ ಧಕ್ಕೆ ತರುವ ಹಾಗಿವೆ ಹಾಗೂ ದೇಶದ ಸಮಗ್ರತೆಯನ್ನು ಪ್ರಶ್ನಿಸುವಂತಿರುವುದರಿಂದ ಬಂಧಿಸಿ ದೂರು ದಾಖಲಿಸಲಾಗಿದೆ ಎಂದು ದಕ್ಷಿಣ ವಲಯ ಡಿಸಿಪಿ ಮಾಹಿತಿ ನೀಡಿದ್ದಾರೆ.
ಜೀಸಸ್ ಗ್ರೇಟ್, ಜೀಸಸ್ ಕ್ಯಾನ್ಸರ್ ವಾಸಿ ಮಾಡುತ್ತಾನೆ ಎಂದು ಸುಳ್ಳುವ ಪಾದ್ರಿಗಳ ನಡುವೆ, ಇದೊಬ್ಬ ಬೋಧಕ ದೇಶದ ಸಮಗ್ರತೆಯನ್ನೇ ಪ್ರಶ್ನಿಸಿದ್ದು ಬೇಸರದ ಸಂಗತಿ.