ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಪೋಷಿತ ಭಯೋತ್ಪಾದನೆ; ಅನಂತಕುಮಾರ ಹೆಗಡೆ
ಶಿರಸಿ: ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸಹಕಾರದಲ್ಲೆ ಭಯೊತ್ಪಾದನೆಯಂಥ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ. ರಾಜ್ಯದಲ್ಲಿ ಅಶಾಂತಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಕೇಂದ್ರ ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಆರೋಪಿಸಿದರು.
ಪರೇಶ ಮೇಸ್ತಾ ಹತ್ಯೆ ಖಂಡಿಸಿ, ಶಿರಸಿಯಲ್ಲಿ ನಡೆದ ಹೋರಾಟದಲ್ಲಿ ಪೊಲೀಸರು ಅಮಾಯಕರ ಮೇಲೆಮಾಡಿರುವ ಹಲ್ಲೆ ಖಂಡಿಸಿ ಶಿರಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಂತಿಯುತ ಪ್ರತಿಭಟನೆ ಮಾಡುತ್ತಿರುವ ಜನರ ಮೇಲೆ ಲಾಠಿಚಾರ್ಜ್ ಮಾಡಿ, ಜನರನ್ನು ಉದ್ರೆಕಿಸುವ ಮೂಲಕ ಹೋರಾಟ ಹಿಂಸಾರೂಪಕ್ಕೆ ತಿರುಗಲು ಪೊಲೀಸರೇ ಕಾರಣವಾಗುತ್ತಿದ್ದಾರೆ. ಇನ್ನು ಹಿಂದೂಗಳ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂತ್ಯ ಕಾಣದಿದ್ದರೇ, ನೆಮ್ಮದಿ ನೆಲೆಸುವುದು ಅಸಾಧ್ಯ ಎಂದು ಹೇಳಿದರು.
ಬಿಜೆಪಿ ಮುಖಂಡರು ಜೈಲಿಗೆ ಹೋಗಿ ಬಂದವರು ಎಂದು ಹೇಳುಬ ಸಿಎಂ ಸಿದ್ದರಾಮಯ್ಯ ವಿರುದ್ಧ 84 ಪ್ರಕರಣ ದಾಖಲಾಗಿವೆ. ಮುಂದಿನ ಚುನಾವಣೆಯಲ್ಲಿ ಜನರೇ ತೀರ್ಮಾನ ನೀಡುತ್ತಾರೆ. ರಾಜ್ಯದ ನೆಮ್ಮದಿಗೆ ಕೊಳ್ಳಿ ಇಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಕುಳಿತು ಆಡಳಿತ ನಡೆಸಲು ಅರ್ಹರೇ ಎಂಬುದನ್ನು ಅವರೇ ಆಲೋಚಿಸಿಕೊಳ್ಳಬೆಕು ಎಂದು ಹೇಳಿದರು.
Leave A Reply